ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಮೌಲ್ಯವರ್ಧನೆ

ಅನಾನಸ್ ರಸ

ಕಾಂತರಾಜ್ ವೈ.,
9731731842
1

ಬೇಕಾಗುವ ಸಾಮಗ್ರಿಗಳು: ಅನಾನಸ್- ೭ ಕಿ.ಗ್ರಾಂ, ಸಕ್ಕರೆ- ೨.೫ ಕಿ.ಗ್ರಾಂ, ನೀರು- ೭ ಲೀ. ವಿಧಾನ : ನಿರ್ದಿಷ್ಟ ರೀತಿ ಪಕ್ವವಾಗದ ಅಥವಾ ಮೆದು ಹಣ್ಣಿನಿಂದ ರಸ ಪಡೆಯಬೇಕು. ಕತ್ತರಿಸಿದ ಹಣ್ಣಿನ ಉಳಿದ ಚೂರುಗಳಿಂದ ಮತ್ತು ದಿಂಡಿನಿಂದ ರಸ ಹಿಂಡಬಹುದು. ಹಣ್ಣಿನ ಸಿಪ್ಪೆತೆಗೆದ ನಂತರ ಅದನ್ನು ಚೂರುಗಳಾಗಿ ಮಾಡಬೇಕು. ರುಬ್ಬುವ ಯಂತ್ರದ ಸಹಾಯದಿಂದ ರಸವನ್ನು ತೆಗೆಯಬೇಕು. ಸೋಸುವ ಯಂತ್ರದ ಸಹಾಯದಿಂದ ರಸವನ್ನು ಶೋಧಿಸಬೇಕು. ಸೊಸಿದ ಹಣ್ಣಿನ ರಸಕ್ಕೆ, ಮೇಲೆ ಸೂಚಿಸಿದ ಪ್ರಮಾಣದಲ್ಲಿ ಸಕ್ಕರೆ ಮತ್ತು ನೀರನ್ನು ಮಿಶ್ರಿಸಬೇಕು. ನಂತರ ಬಾಟಲಿಯನ್ನು ಬಿಸಿನೀರಿನಲ್ಲಿ ೧೦-೧೫ ನಿಮಿಷಗಳವರೆಗೆ ಸಂಸ್ಕರಿಸಬೇಕು. ತದನಂತರ ಇದನ್ನು ಸ್ವಚ್ಛವಾದ ಬಾಟಲಿಯಲ್ಲಿ ತುಂಬಿಡಬೇಕು. ಶೀತಲ ಸಂಸ್ಕರಣ ಯಂತ್ರದಲ್ಲಿ ಶೇಖರಿಸಬೇಕು