ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಸೋಲಾರ್ ಪಂಪ್: ನೀವೇ ಅಳವಡಿಸಿಕೊಳ್ಳಬಹುದಾದಲ್ಲಿ ಸಬ್ಸಿಡಿ ಹಂಗೇಕೆ

image_
ಅನಿಲ್ ಕುಮಾರ್
9449837309

ಸೋಲಾರ್ ಪಂಪ್ಗೆ ಸಂಬಂಧಪಟ್ಟಂತೆ ರೈತರ ನೂರು ಪ್ರಶ್ನೆಗಳು ಅನುಮಾನಗಳು ಇನ್ನೂ ಬಹಳಷ್ಟಿವೆ. ಬೆಲೆ ಎಷ್ಟಾಗುತ್ತೆ? ಸಬ್ಸಿಡಿ ಎಷ್ಟು? ಬ್ಯಾಂಕ್ ಲೋನ್ ಹೇಗೆ? ದಾಖಲಾತಿಗಳೇನು? ಹೀಗೆ ಒಂದು ಬದಿಯ ಪ್ರಶ್ನೆಗಳಾದರೆ, ಇನ್ನೂ ಇದು ಸೂರ್ಯನ ಬೆಳಕು ಕಡಿಮೆ ಇದ್ದಾಗ ಹೇಗೆ ಕೆಲಸ ಮಾಡತ್ತೆ? ನಿರ್ವಹಣೆ ಹೇಗೆ? ಇರುವ ಪಂಪೇ ಆಗತ್ತಾ? ಇತ್ಯಾದಿ ಇನ್ನೊಂದು ಬದಿಯ ಪ್ರಶ್ನೆಗಳು. ಬ್ಯಾಂಕ್ಗೆ ಬೇಕಾದ ದಾಖಲಾತಿ, ಬಡ್ಡಿದರ, ಇತ್ಯಾದಿಗಳನ್ನೆಲ್ಲಾ ಗಮನಿಸಿ. ಅನೇಕರು ಸಬ್ಸಿಡಿ ಗೊಡವೆಯೇ ಬೇಡ ಎಂದು ತೀರ್ಮಾನಿಸಿದ್ದು ಇದೆ. ಸಬ್ಸಿಡಿ ಬೇಕಾದಲ್ಲಿ ಬ್ಯಾಂಕ್ ಸಾಲ ಅವಶ್ಯ ಅಲ್ಲದೇ ಓಂಃಂಖಆ ನೊಂದಾಯಿತ ತಯಾರಿಕರಿಂದ ಮಾತ್ರ ಖರೀದಿಸಬೇಕು. ಇರುವ ಪಂಪ್ ಬದಲಾಯಿಸಿ ಹೊಸ ಪಂಪ್ ಅಳವಡಿಸಬೇಕು ಇತ್ಯಾದಿ ನಿಬಂಧನೆಗಳೂ ಇವೆ. ಸೋಲಾರ್ ಪಂಪ್ ಅಳವಡಿಸುವುದು ಕಷ್ಟವೇನಲ್ಲ. ಪಂಪ್ ವೈರಿಂಗ್ ಬಗ್ಗೆ ಅನುಭವವಿರುವ ಯಾವುದೇ ಎಲೆಕ್ಟ್ರಿಷಿಯನ್ ಇದನ್ನು ಅಳವಡಿಸಬಲ್ಲ. ಒ.ಓ.ಖ.ಇ (ನವೀಕರಿಸಬಹುದಾದ ಇಂಧನ ಇಲಾಖೆ)ಯಿಂದ ಅನುಮೋದಿಸಲ್ಪಟ್ಟ, ಮಾನ್ಯತೆ ಪಡೆದ ಪ್ಯಾನಲ್ ಹಾಗೂ ಇತರ ಉಪಕರಣ ಖರೀದಿಸಿ ಅಳವಡಿಸಿಕೊಳ್ಳಬಹುದು. ಇದರಿಂದ ಶೇ. ೨೦-೩೦% ಉಳಿತಾಯ ಸಾಧ್ಯ ಅಲ್ಲದೇ ಇರುವ ಪಂಪ್ಗೇ ಅಳವಡಿಸಿದಲ್ಲಿ ಇನ್ನೂ ಹೆಚ್ಚು ಉಳಿತಾಯ. ಅಳವಡಿಸುವ ರೀತಿ: ಅವಶ್ಯ ಸಾಮಗ್ರಿಗಳು, ೧) ಸೋಲಾರ್ ಫಲಕ - ೧೫ ಸಂಖ್ಯೆ ವಿವರಗಳಿಗೆ ಕೋಷ್ಠಕ ಗಮನಿಸಿ, ೨)ವಿ.ಎಫ್.ಡಿ ೧ ಸಂಖ್ಯೆ, ಇದು ಪಂಪ್ನ ಸಾಮರ್ಥ್ಯಕ್ಕೆ ಅನುಗುಣವಾಗಿರಬೇಕು. ವಿ.ಎಫ್.ಡಿ - ಸೂರ್ಯನ ಬೆಳಕಿನ ಲಭ್ಯತೆ ಆಧರಿಸಿ ಪಂಪ್ನ ತಿರುಗುವ ವೇಗವನ್ನು ಬದಲಾಯಿಸುತ್ತದೆ. ಪಂಪ್ನ ತಿರುಗುವ ವೇಗ ಬದಲಾದಂತೆ ನೀರಿನ ಹೊರಹರಿವೂ ಬದಲಾಗುತ್ತದೆ. ಸೂರ್ಯನ ಬೆಳಕು ಪೂರ್ಣ ಲಭ್ಯವಿದ್ದಾಗ ಪಂಪ್ ಸಾಮಾನ್ಯ ವಿದ್ಯುತ್ ಪಂಪ್ನಷ್ಟು ಹೊರಹರಿವು ಕೊಡುತ್ತದೆ. ಉಳಿದ ಸಮಯದಲ್ಲಿ ಹರಿವು ಕಡಿಮೆ ಇರುತ್ತದೆ. ವಿ.ಎಫ್.ಡಿ ಗಳಲ್ಲಿ ವಿದೇಶಿ ಕಂಪೆನಿಗಳಲ್ಲದೆ ದೇಶೀಯವಾಗಿ ತಯಾರಿಸಿದ ಮಾದರಿಗಳೂ ಲಭ್ಯವಿದ್ದು, ಉತ್ತಮ ಗುಣಮಟ್ಟದ ಹಾಗೂ ಸೇವಾ ಸೌಲಭ್ಯವಿರುವ ಗ್ಯಾರಂಟಿ ಇರುವ ದೇಶೀಯ ತಯಾರಿಕೆಗೆ ಆದ್ಯತೆ ನೀಡಿ. ೩) ಪಂಪಿರುವ ಪಂಪ್ಸೆಟ್ಟನ್ನೇ ಉಪಯೋಗಿಸಲು ಯಾವ ತೊಂದರೆಯೂ ಇಲ್ಲ. ಆದರೆ ಹೊಸದಾಗಿ ಖರೀದಿಸುವುದಿದ್ದಲ್ಲಿ ಅವಶ್ಯವಿರುವಷ್ಟೆ ಸಾಮರ್ಥ್ಯದ, ಉತ್ತಮ ಕಾರ್ಯಕ್ಷಮತೆ ಇರುವ ಪಂಪ್ ಖರೀದಿಸಿ. ೪) ಫಲಕ ಅಳವಡಿಸಲು ಸ್ಟ್ಯಾಂಡ್(ಹಂದರ) ಇದನ್ನು ಸ್ಥಳ ಲಭ್ಯತೆ ಆಧಾರದ ಮೇಲೆ ಫಲಕದ ಅಳತೆಗೆ ತಕ್ಕಂತೆ ತಯಾರು ಮಾಡಿಸಬೇಕು. ತುಕ್ಕು ಹಿಡಿಯದಂತೆ ಜಿ.ಐ. ಬಳಸಿದರೆ ಉತ್ತಮ. ಇಲ್ಲವಾದಲ್ಲಿ ತುಕ್ಕು ನಿರೋಧಕ ಬಣ್ಣ ಬಳಿಯಬೇಕಾಗಬಹುದು. ಸ್ಥಳೀಯ ಕಬ್ಬಿಣ ಕೆಲಸಗಾರರು ಇದನ್ನು ತಯಾರಿಸಬಲ್ಲರು. ಫಲಕ ತಯಾರಕರ ಬಳಿ ಮೊದಲೇ ತಯಾರಿಸಿದ ಸ್ಟ್ಯಾಂಡ್ಗಳೂ ಲಭ್ಯ. ಆದರೆ ಇದು ದುಬಾರಿ. ೫) ವೈರಿಂಗ್: ಪಂಪ್ನ ಸಾಮರ್ಥ್ಯಕ್ಕೆ ತಕ್ಕಂತೆ ಇರಬೇಕು. ಸೋಲಾರ್ ಫಲಕಗಳಿಗೆ ಅವಶ್ಯವಿರುವ ವೈರಿಂಗ್ ವಿವರ ಈ ಕೆಳಗೆ ಕೊಡಲಾಗಿದೆ. ಅಳವಡಿಕೆ ಸ್ಥಳ: ಸ್ಥಳದ ಆಯ್ಕೆಗೆ ಈ ಅಂಶಗಳನ್ನು ಗಮನಿಸಿ. ಸೂರ್ಯನ ಬೆಳಕಿನ ಲಭ್ಯತೆ, ದಿನವಿಡೀ ಗಮನಿಸಿ, ನೆರಳು ಬೀಳುತ್ತಿಲ್ಲವೆಂದು ಖಚಿತಪಡಿಸಿ. ಸುಮಾರು ೧೫ ಫಲಕ ಅಳವಡಿಸಲು ಸ್ಥಳ: ಫಲಕಗಳು ಉತ್ತರ-ದಕ್ಷಿಣವಾಗಿದ್ದು ಉತ್ತರದಲ್ಲಿ ಎತ್ತರ ಹಾಗೂ ದಕ್ಷಿಣದಲ್ಲಿ ಕೆಳಗೆ ಸುಮಾರು ೧೫೦ ಕೋನದಲ್ಲಿರಬೇಕು. ಪಂಪ್ಗೆ ಸಾಧ್ಯವಾದಷ್ಟು ಸಮೀಪದಲ್ಲಿ ಅಳವಡಿಸಿ. ಇದರಿಂದ ವೈರಿಂಗ್ ವೆಚ್ಚ ಕಡಿಮೆಯಾಗುವುದಲ್ಲದೇ ವಿದ್ಯುತ್ ನಷ್ಟವೂ ಕಡಿಮೆಯಾಗುತ್ತದೆ. ಮೇಲಿನ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ, ಉತ್ತಮ ಎಲೆಕ್ಟ್ರಿಷಿಯನ್ ಸಹಕಾರದಿಂದ ಅಳವಡಿಸಿಕೊಳ್ಳಿ

2