ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಸೀಮೆ ಬದನೆಕಾಯಿಯಲ್ಲಿ ಹಳದಿ ಮೊಸಾಯಿಕ್ ನಂಜಾಣು

ಜಯಲಕ್ಷ್ಮೀ ಕೆ
೯೮೪೪೫೨೫೧೬೪
1

ಸೀಮೆ ಬದನೆಕಾಯಿ ಬಹುವಾರ್ಷಿಕ ಕುಂಬಳ ಜಾತಿಗೆ ಸೇರಿದ ತರಕಾರಿ ಬೆಳೆಯಾಗಿದ್ದು, ತಂಪು ಹವಾಗುಣದಲ್ಲಿ ಚೆನ್ನಾಗಿ ಬೆಳೆಯಬಹುದು. ಈ ತರಕಾರಿಯು ಬೆಗ್ಯಾಮೋ ನಂಜಾಣುವಿಗೆ ತುತ್ತಾಗುತ್ತ್ತಿದ್ದು, ಬಿಳಿನೊಣಗಳ ಮೂಲಕ ನಂಜಾಣುಗಳು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಪ್ರಸಾರ ಹೊಂದುತ್ತವೆ. ರೋಗಕ್ಕೆ ತುತ್ತಾದ ಎಲೆಗಳು ಹಸಿರು ಮಿಶ್ರಿತ ಹಳದಿ ಬಣ್ಣದಿಂದ ಕೂಡಿದ್ದು, ಎಲೆಗಳು ಮುದುಡುತ್ತವೆ. ಎಲೆಗಳ ರೂಪ ಮತ್ತು ಗಾತ್ರ ಪರಿವರ್ತನೆ ಹೊಂದುತ್ತದೆ ಹಾಗೂ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇದರಿಂದಾಗಿ ಇಳುವರಿಯ ಪ್ರಮಾಣ ಈ ನಂಜು ರೋಗಕ್ಕೆ ತುತ್ತಾದ ಗಿಡಗಳನ್ನು ಕಿತ್ತು ಸುಡುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು ಹಾಗೂ ಬಿಳಿನೊಣಗಳ ನಿಯಂತ್ರಣಕ್ಕೆ ಶೇ. ೦.೦೫ ರ ಕ್ಲೋರೋಪೈರಿಫಾಸ್ ಅಥವಾ ಶೇ. ೦.೧ ರ ಇಮಿಡಾಕ್ಲೋಪ್ರಿಡ್ ದ್ರಾವಣ ಅಥವಾ ಶೇ. ೦.೧೫ ರ ಟ್ರೈಜೋಫಾಸ್ ಸಿಂಪರಣೆ ಮಾಡುವುದರಿಂದ ರೋಗವನ್ನು ಹತೋಟಿಗೆ ತರಬಹುದು