ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಶಲ್ಕ ಕೀಟಗಳು ಮತ್ತು ಅವುಗಳ ನಿರ್ವಹಣೆ

ಪ್ರಕಾಶ
೮೨೭೭೦೫೯೩೯೨
1

ಶಲ್ಕ ಕೀಟಗಳು, ಕೀಟ ಪ್ರಪಂಚದಲ್ಲಿ ಬರುವ ಒಂದು ತರಹದ ಕೀಟಗಳಾಗಿದ್ದು, ಇತ್ತಿಚಿನ ದಿನಗಳಲ್ಲಿ ಈ ಕೀಟಗಳು, ವಿವಿಧ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ, ಅದರಲ್ಲೂ ಹಣ್ಣು ಮತ್ತು ಅಲಂಕಾರಿಕ ಸಸ್ಯಗಳಲ್ಲಿ ಕಾಣಿಸಿಕೊಂಡು, ಬೆಳೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿ ಇಳುವರಿಯನ್ನು ಕಡಿಮೆಗೊಳಿಸುತ್ತಿವೆ. ತೋಟಗಾರಿಕೆ ಬೆಳೆಗಳಲ್ಲಿ, ಮುಖ್ಯವಾಗಿ ಸೇಬು, ಮಾವು, ಲಿಂಬೆ, ಕಾಫಿ ಇತ್ಯಾದಿ ಔಷಧಿ ಮತ್ತು ಅಲಂಕಾರಿಕ ಸಸ್ಯಗಳಲ್ಲಿ ಮುಖ್ಯವಾಗಿ ಸೇವಂತಿಗೆ, ಮಲ್ಲಿಗೆ, ಕ್ರೋಟಾನ್ ಇತ್ಯಾದಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಹತ್ತಿಯ ಮತ್ತು ಕಬ್ಬು ಬೆಳೆಯಲ್ಲಿ ಕೂಡ ಈ ಶಲ್ಕ ಕೀಟಗಳು ಗಣನೀಯ ಸಂಖ್ಯೆಯಲ್ಲಿ ಕಾಣಿಸಿಕೊಂಡು ಬೆಳೆಯನ್ನು ಭಾದಿಸುತ್ತಿರುವುದು ರೈತರಿಗೆ ಮತ್ತು ವಿಜ್ಞಾನಿಗಳಿಗೆ ಚಿಂತೆಯ ವಿಷಯವಾಗಿದೆ. ಮೂಲತಃ ಈ ಶಲ್ಕ ಕೀಟಗಳು, ನೋಡುವುದಕ್ಕೆ ಕೀಟಗಳಂತೆ ಕಾಣಿಸಿಕೊಳ್ಳುವುದಿಲ್ಲ ಏಕೆಂದರೆ, ಇವುಗಳ ದೇಹ ರಚನೆ, ಅಂಗಾಂಗಳ ರೂಪರೇಷಗಳು ಇತರೇ ಕೀಟಗಳಿಗಿಂತ ತೀರ ಭಿನ್ನವಾಗಿ ಕಾಣಿಸುತ್ತವೆ. ಈ ಕೀಟಗಳು ನೋಡಲು ಅತೀ ಚಿPದಾಗಿದ್ದು, ಅವುಗಳು ಒಮ್ಮೆ ಬೆಳೆಗಳ ಮೇಲೆ ಅಥವಾ ಯಾವುದೇ ಗಿಡಗಳ ಮೇಲೆ ಆವರಿಸಿ ಕುಳಿತುಕೊಂಡರೆ, ಮೊದಲ ಹಂತದ ಮರಿಗಳು ಗಿಡದ ತೆಳುವಾದ ಮತ್ತು ರಸಭರಿತವಾದ ಭಾಗದಲ್ಲಿ ಕುಳಿತುಕೊಂಡು ರಸವನ್ನು ಹೀರುತ್ತಾ ಅದೇ ಭಾಗಕ್ಕೆ ಹತ್ತಿಕೊಂಡು ತಮ್ಮ ಬಾಯಿಯ ಸೂಜಿಯಾಕಾರದ ಮೊನಚಾದ ಸೊಂಡಿಲನ್ನು ಗಿಡದ ಭಾಗದೊಳಗೆ ಸೇರಿಸಿ ಅಲ್ಲಿಯೇ ಅಂಟಿಕೊಳ್ಳುತ್ತವೆ. ಒಂದು ಸಲ ಆ ಭಾಗಕ್ಕೆ ಅಂಟಿಕೊಂಡರೆ, ಜೀವನ ಪೂರ್ತಿ ಆ ಭಾಗವನ್ನು ಬಿಟ್ಟು ಕದಲುವುದಿಲ್ಲ. ಈ ರೀತಿಯಾಗಿ ಅಂಟಿಕೊಂಡ ಈ ಶಲ್ಕ ಕೀಟಗಳು ಸತತವಾಗಿ ರಸವನ್ನು ಗಿಡದ ವಿವಿಧ ಭಾಗಗಳಾದ, ಹಣ್ಣು, ಎಲೆ, ರೆಂಬೆ ಕಾಂಡಗಳಿಂದ ರಸವನ್ನು ಹೀರುತ್ತಾ, ಅಂಟಾದ zವವನ್ನು ವಿಸುತ್ತಾ ಜೀವನ ಸಾಗಿಸುತ್ತವೆ. ಈ ರೀತಿಯಾದ ಅಂಟೂ-ಅಂಟಾದ zವವು ಗಿಡದ ಕೆಳಭಾಗದಲ್ಲಿ ಗಿಡದ ಇತರ ಭಾಗಗಳ ಮೇಲೆ ಬೀಳಲಾರಂಭಿಸುತ್ತದೆ. ಈ ಅಂಟಾದ ಪದಾರ್ಥದ ಮೇಲೆ, ’ಕ್ಯಾಪ್ನೊಡಿಯಂ’ ಎಂಬ ಶಿಲೀಂಧ್ರವು ಬೆಳೆದು ಕಪ್ಪು ಬಣ್ಣವಾಗಿ ಗೋಚರಿಸುತ್ತದೆ. ಈ ರೀತಿಯಾಗಿ ಬೆಳೆದ ಶಿಲೀಂಧ್ರವು ಗಿಡದ ಅನೇಕ ಭಾಗಗಳ ಮೇಲೆ ಆವರಿಸಿ ಎಲೆಗಳ ಸಂಖ್ಯೆ, ಹಣ್ಣುಗಳ ಗುಣಮಟ್ಟವನ್ನು ಕುಂಠಿತಗೊಳಿಸುತ್ತದೆ. ಎಲೆಗಳ ಮೇಲೆ ಆವೃತವಾದ ಶಿಲೀಂಧ್ರವು ಎಲೆಗಳ ’ದ್ಯುತಿಸಂಶ್ಲೇಷಣೆ’ ಕ್ರಿಯೆಯನ್ನು ಕಡಿಮೆಗೊಳಿಸಿ ಗಿಡಗಳ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತದೆ. ಅಲ್ಲದೇ ಈ ಕೀಟಗಳು ಎಲೆಯ ಕೆಳಭಾಗದಿಂದ ಮತ್ತು ಹೆಚ್ಚಾಗಿ ರೆಂಬೆಗಳು ಮತ್ತು ಕಾಂಡಗಳಿಂದ ರಸ ಹೀರುತ್ತವೆ. ಎಲೆಗಳು ಹಳದಿಯಾಗಿ ಕೆಳಗೆ ಬಿಳುತ್ತವೆ ಗಿಡಗಳು ಬಾಗಿ ನಂತರ ಸಾಯುತ್ತವೆ

ಲಾಭದಾಯಕ ಅರಗು ಶಲ್ಕ ಕೀಟ: ಇಲ್ಲಿಯವರೆಗೆ ಹಾನಿಕಾರಕ ಶಲ್ಕ ಕೀಟಗಳ ಬಗ್ಗೆ ನೋಡಿದ ನಂತರ ಕೆಲವು ಶಲ್ಕ ಕೀಟಗಳು ಮಾನವನಿಗೆ ಅವುಗಳಿಂದ ಅನುಕೂಲವು ಮತ್ತು ಲಾಭದಾಯಕವಾಗಿದೆ. ಲ್ಯಾಸೆಪೆರಾ ಲೆಕ್ಕಾ, ಲೆಕ್ಕಾ ಕೆರಿಯಾ ಎಂಬ ಜಾತಿಯ ಶಲ್ಕ ಕೀಟಗಳು ತಮ್ಮ ಮೈಯಿಂದ ಹೊರಸೊಸುವ ಮೇಣದ ಪದಾರ್ಥದಿಂದ ಅರಗನ್ನು ಉತ್ಪಾದಿಸಿ, ವಿವಿಧ ಕೈಗಾರಿಕೆ ಕ್ಷೇತ್ರಗಳಲ್ಲಿ, ಬಂಗಾರದ ಸಾಮಾನುಗಳ ತಯಾರಿಕೆಯಲ್ಲಿ, ಆಟಿಕೆಗಳ ತಯಾರಿಕೆಯಲ್ಲಿ ಅರಗನ್ನು ಉಪಯೋಗಿಸಿಕೊಂಡು ಲಾಭದಾಯಕ ಉದ್ಯಮವಾಗಿಸಿಕೊಂಡಿದ್ದಾರೆ. ಅನೇಕ ರೈತರು, ಸಂಘ ಸಂಗಳೂ ಕೂಡ ಪ್ರಾಕೃತಿಕವಾಗಿ ಸಿಗುವ ಗಿಡಗಳ ಮೇಲೆ ಈ ಅರಗು ಶಲ್ಕ ಕೀಟಗಳನ್ನು ಗುರುತಿಸಿ, ಕಟಾವು ಮಾಡಿ ಮಾರುಕmಯಲ್ಲಿ ಅಧಿಕ ಆದಾಯ ಪಡೆಯುತ್ತಿದಾರೆ. ಇನ್ನು ಕೆಲವು gತರು ಸಮಗ್ರ ಕೃಷಿಯಲ್ಲಿ ಅರಗು ಕೃಷಿಯನ್ನು ಲಾಭದಾಯಕ ಕೃಷಿಯೆಂದು ಗುರುತಿಸಿಕೊಂಡಿದ್ದಾರೆ. ಈ ರೀತಿಯಾಗಿ ಶಲ್ಕ ಕೀಟಗಳು, ಕೆಲವು ಜಾತಿಯಿಂದ ಬೆಳೆಗಳಲ್ಲಿ ಪೀಡೆಗಳಾಗಿ ಬೆಳೆಗಳನ್ನು ಭಾದಿಸಿ ಹಾನಿಯನ್ನುಂಟುಮಾಡುತ್ತವೆ. ಬೆರಳೆಣಿಕೆಯಷ್ಟು ಮಾತ್ರ ಕೆಲವು ಶಲ್ಕ ಕೀಟಗಳು ಲಾಭದಾಯಕವಾಗಿವೆ. ಇತ್ತೀಚಿನ ದಿನಗಳಲ್ಲಿ ಈ ಶಲ್ಕ ಕೀಟಗಳು ಎಲ್ಲಾ ಬೆಳೆಗಳಲ್ಲಿ ತೀವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಅವುಗಳ ನಿರ್ವಹಣೆ ಅತೀ ಅವಕವಾಗಿದೆ. ಆzರಿಂದ ಅವುಗಳ ನಿರ್ವಹಣಾ ಕ್ರಮಗಳು ಈ ಕೆಳಗಿನಂತಿವೆ

4

೧.ಶಲ್ಕ ಕೀಟಗಳು ಮೊದಲ ಹಂತದಲ್ಲಿ ಆಕ್ರಮಿಸಿದಂತಹ/ ಬಾಧಿತ ಗಿಡದ ಭಾಗಗಳಾದ, ರೆಂಬೆ, ಕೊಂಬೆ, ಎಲೆಗಳನ್ನು ಸೀಕೆಚರನಿಂದ ಕತ್ತರಿಸಿ ನಾಶಪಡಿಸಬೇಕು. ೨. ಈ ಶಲ್ಕ ಕೀಟಗಳು ಕೆಲವೊಂದು ಬಾರಿ, ಬೆಳೆಗಳ ಮೇಲೆ ಆವರಿಸುವುದಕ್ಕಿಂತ. ಮೊದಲು ತೋಟದ ಸುತ್ತಲಿರುವ ಆಶ್ರಯ ಸಸ್ಯಗಳು, ಕಳೆಗಳ ಮೇಲೆ ಆಯವಾಗಿರುತ್ತವೆ. ಅವುಗಳನ್ನು ಕಿತ್ತು ನಾಶಪಡಿಸಬೇಕು. ೩. ನೈಸರ್ಗಿಕವಾಗಿ-ಪ್ರಾಕೃತಿಕವಾಗಿ ಕೆಲವೊಂದು ಕೀಟಗಳು ಈ ಶಲ್ಕ ಕೀಟಗಳ ಮೇಲೆ ಪರಭಕ್ಷಕ ಮತ್ತು ಪರತಂತ್ರ ಜೀವಿಗಳಾಗಿ ವರ್ತಿಸಿ ಅವುಗಳನ್ನು ಕ್ರಮೇಣವಾಗಿ ನಿಯಂತ್ರಿಸುತ್ತವೆ. ಈ ರೀತಿಯ ಪರಭಕ್ಷಕ ಮತ್ತು ಪರತಂತ್ರ ಕೀಟಗಳ ಸಂಖ್ಯೆ ಹೆಚ್ಚು ಕಂಡುಬಂದಲ್ಲಿ ಯಾವುದೇ ಕೀಟನಾಶಕ ಸಿಂಪಡಿಸಬಾರದು. ಉದಾ - ಕೈಲೋಕೋರಸ್ ನಿಗ್ರಟಸ್, ಕ್ರೈಸೋಪರ್ಲಾ ಇತ್ಯಾದಿ. ೪. ಶಲ್ಕ ಕೀಟಗಳ ಮೊದಲನೇ ಹಂತದ ಮರಿಗಳನ್ನು (ಕ್ರಾಲರ್ಸ) ರಭಸವಾಗಿ ಪೈಪಿನಿಂದ ನೀರನ್ನು ಅವುಗಳ ಮೇಲೆ ಸಿಂಪಡಿಸುವುದರಿಂದ ಕೂಡ ನಾಶಮಾಡಬಹುದು. ೫. ಕೊನೆಯದಾಗಿ ಕೀಟನಾಶಕಗಳಾದ, ಪೆಜಿನ್ ೨೫ ಎಸ್,ಸಿ @ ೧.೨೫ ಮಿ.ಲೀ, ಅಥವಾ ಕ್ಲೋರೊಫೈರಿಪಾಸ್ ೨೦ ಇ.ಸಿ @ ೨ ಮಿ.ಲೀ. ಅಥವಾ ಅಸಿಪೇಟ್ ೭೫ ಎಸ್,ಪಿ @ ೧ ಗ್ರಾಂ, ಲ್ಯಾಂಬ್ಡಾಸೈಲೋಥ್ರಿನ್ ೫ ಇ.ಸಿ @ ೦.೫ ಮಿ.ಲೀ., ಪ್ರೋಪೆನೋಪಾಸ್ ೫೦ ಇ.ಸಿ @ ೨ ಮಿ.ಲೀ. ಮತ್ತು ಡೈಕ್ಲೋರೋವಾಸ್ ೭೬ ಇ.ಸಿ @ ೧ ಮಿ.ಲೀ. ಪ್ರತಿ ಲೀಟರ್ಗೆ ಮೇಲ್ಕಾಣಿಸಿದ ಯಾವುದಾದರೊಂದು ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಿಸಬೇಕು