ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ವನೌಷಧಿ

ಗುಲಾಬಿ

-

ಇದು ಲಘು, ಸ್ನಿಗ್ಧ, ಒಗರು, ಮಧುರ, ರೋಚಕ, ವಿಪಾಕದಲ್ಲಿ ಶೀತವೀರ್ಯವುಳ್ಳದ್ದಾಗಿರುತ್ತದೆ ಮತ್ತು ಹೃದ್ಯವೂ, ತ್ರಿದೋಷ ಶಾಮಕವೂ, ದೀಪನವೂ, ಪಾಚನವೂ, ಅನುಲೋಮನವೂ, ಗ್ರಾಹಿಯೂ, ಮೃದುರೇಚನವೂ, ಮೇದವೂ, ಸೌಮ್ಯನಸ್ಯಜನಕವೂ, ವರ್ಣ್ಯವೂ, ದುರ್ಗಂಧನಾಶಕವೂ, ದಾಹಪ್ರಶಮನವೂ, ಧಾತು ವರ್ಧಕವೂ, ವಾಜೀಕರಣಕಾರಿಯೂ ಆಗಿದ್ದು ಶೋಥ, ವ್ರಣ, ತ್ವಗ್ದೋಷ, ಜ್ವರ, ಪಚನವಿಕಾರ, ಮುಖಪಾಕ, ಮಸ್ತಿಷ್ಕ ದೌರ್ಬಲ್ಯ, ಕೋಷ್ಠವಾತ, ವಿಬಂಧ, ಹೃದ್ರೋಗ, ರಕ್ತಪಿತ್ತ, ರಕ್ತವಿಕಾರ, ಕ್ಲೈಬ್ಯ, ಹುಚ್ಚು ಅಪಸ್ಮಾರ ದೌರ್ಬಲ್ಯಾದಿಗಳನ್ನು ಪರಿಹರಿಸುತ್ತದೆ. ಗುಲಾಬಿಯಲ್ಲಿ ಅನೇಕ ಬಗೆಗಳುಂಟು. ದಿನದಿನವೂ ಹೊಸ ಹೊಸ ಬಗೆಯ ಗುಲಾಬಿಯ ಹೂವುಗಳನ್ನು ವಿಜ್ಞಾನಿಗಳು ಸೃಷ್ಟಿಸುತ್ತಿದ್ದಾರೆ. ಇವುಗಳಲ್ಲಿ ಎಷ್ಟೇ ವಿವಿಧತೆ ಇದ್ದರೂ ಗುಣದಲ್ಲಿ ಮತ್ತು ಔಷಧಪ್ರಯೋಗದಲ್ಲಿ ಮೂಲಗುಲಾಬಿಯೇ (ಪನ್ನೀರು ಗುಲಾಬಿ) ಶ್ರೇಷ್ಠ. ಹೂವ್ವಿನಲ್ಲಿ ಅದರ ದಳವೇ ಔಷಧ ದ್ರವ್ಯವಾಗಿದೆ. ಈ ಹೂವ್ವಿನ ದಳಗಳಿಂದ ಸಿದ್ಧಪಡಿಸಿದ ಗುಲ್ಕಂದ್ ಬಹು ಶ್ರೇಷ್ಠವಾದ ಒಂದು ಪಾಕವಾಗಿದೆ

ಕನ್ನಡ/ಸಂಸ್ಕೃತ/ಹಿಂದಿ/ತಮಿಳು/ತೆಲುಗು/ಇಂಗ್ಲೀಷ್

ಗುಲಾಬಿ/ಶತಪತ್ರಿ, ತರುಣೀ/ಗುಲಾಬ್/ಗುಲಾಬಿ ಪೂವು/ಗುಲಾಬಿ ಪೂವು/Rose

-/ಮಹಾಕುಮಾರೀ/-/-/-/-