ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಆಪ್ ಲೋಕ

ಆಪ್ ಲೋಕ:ಅಗ್ರಿ ಲೈವ್ ಕಿರುತಂತ್ರಾಂಶ (Agri live app)

image_
ಪ್ರದೀಪ್ ಕುಮಾರ್
9538125130

ಅಗ್ರಿ ಲೈವ್ ಕಿರುತಂತ್ರಾಂಶವು ರೈತರು ಬೆಳೆದಿರುವ ಬೆಳೆ ಮತ್ತು ಕೃಷಿ ಉತ್ಪನ್ನಗಳನ್ನು ಆನ್ಲೈನ್ನಲ್ಲಿ ಪ್ರದರ್ಶಿಸಿ ಮಾರಾಟ ಮಾಡುವ ಒಂದು ಉತ್ತಮ ವೇದಿಕೆಯಾಗಿದೆ. ಆಪ್ಅನ್ನು ಉಪಯೋಗಿಸಲು ತಕ್ಕಮಟ್ಟಿನ ಇಂಟರ್ನೆಟ್ ಸೌಲಭ್ಯ ಹಾಕಿಸಿ ಇಟ್ಟುಕೊಂಡಿರಬೇಕು. ಅಗ್ರಿ ಲೈವ್ ಕಿರುತಂತ್ರಾಂಶವನ್ನು ಆಂಡ್ರಾಯ್ಡ್ ಸ್ಮಾರ್ಟ್ಫೋನ್ವುಳ್ಳವರು ಗೂಗಲ್ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಅಗ್ರಿ ಲೈವ್ ಕಿರುತಂತ್ರಾಂಶದ ೧.೪ ಆವೃತ್ತಿಯು ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿದ್ದು ಆಂಡ್ರಾಯ್ಡ್ ೪.೦.೩ ಮತ್ತು ಅದಕ್ಕಿಂತ ಹೆಚ್ಚು ಆವೃತ್ತಿಯ ಸ್ಮಾರ್ಟ್ಫೋನ್ವುಳ್ಳವರು ಡೌನ್ಲೋಡ್ ಮಾಡಿ ಉಪಯೋಗಿಸಬಹುದು. ರೈತರು ಬೆಳೆದ ಧಾನ್ಯಗಳು, ಬೇಳೆಕಾಳುಗಳು, ತರಕಾರಿಗಳು, ಹಣ್ಣುಗಳು, ಹೂವುಗಳು, ಮಸಾಲೆಗಳು, ಮರ, ಜಾನುವಾರು, ಆಕ್ವಾ, ಬೀಜಗಳು ಮುಂತಾದ ಕೃಷಿ ಉತ್ಪನ್ನಗಳ ಮಾಹಿತಿಯನ್ನು ಕಿರುತಂತ್ರಾಂಶದ ಮೂಲಕ ಆನ್ಲೈನ್ ಸೇರಿಸಿ ಆನ್ಲೈನ್ ಮಾರಾಟ ಮಾಡಬಹುದು. ರೈತರು, ಕೃಷಿ ಉತ್ಪನ್ನ ವ್ಯಾಪಾರಿಗಳು, ಕೃಷಿ ಉತ್ಪನ್ನ ರಫ್ತುದಾರರು, ಏಜೆಂಟರು ಮತ್ತು ಪ್ರತಿಯೊಬ್ಬ ಕಿರುತಂತ್ರಾಂಶ ಬಳಕೆದಾರಿಗೆ ಅಗ್ರಿ ಲೈವ್ ಆಪ್ವು ಕೃಷಿ ಉತ್ಪನ್ನಗಳ ದೈನಂದಿನ ಮಂಡಿಯ ಬೆಲೆ ಹಾಗೂ ಮಾರುಕಟ್ಟೆಯ ಬೆಲೆ ಮಾಹಿತಿಯನ್ನು ನೀಡುತ್ತದೆ. ಅಲ್ಲದೆ ಪ್ರತಿ ಕೃಷಿ ಉತ್ಪನ್ನಗಳ ಮಾರಾಟದ ವ್ಯವಹಾರ ಮಾಹಿತಿಯನ್ನು ಬಳಕೆದಾರರಿಗೆ ನೀಡುವ ಮೂಲಕ ಏಕೀಕೃತ ಕೃಷಿ ಮಾರುಕಟ್ಟೆಯನ್ನು ಸೃಷ್ಟಿಸಿ ಕಿರುತಂತ್ರಾಂಶ ಪಾರದರ್ಶಕತೆಯನ್ನು ನೀಡುತ್ತದೆ. ಕಿರುತಂತ್ರಾಂಶವು ಹಲವು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ಅವುಗಳೆಂದರೆ ಬೆಂಗಲಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಪಂಜಾಬಿ, ತಮಿಳು ಮತ್ತು ತೆಲುಗು