ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಮಿಡಿತ-ತುಡಿತ

image_
ರಘು ಸಂವೇದನ್
9902191549
123

ನಾನು ವಲ್ಲಿಕೂಡಿಗೆ ಗ್ರಾಮ, ಮೂಡಿಗೆರೆ ತಾಲ್ಲೂಕು ನಿವಾಸಿ. ನಮ್ಮ ತಂದೆಯ ಕಾಲದಿಂದ ನಮ್ಮದು ಕೃಷಿ ಕುಟುಂಬ. ಅಡಿಕೆ, ಏಲಕ್ಕಿ, ಬಾಳೆ, ಮೆಣಸು ಮತ್ತು ಭತ್ತದ ಕೃಷಿಯನ್ನು ೫ ಎಕರೆ ಜಮೀನಿನಲ್ಲಿ ತೊಡಗಿಸಿಕೊಂಡಿದ್ದೇವೆ. ಇದರ ಜೊತೆ ಜೇನು ಸಾಕಾಣಿಕೆ ಒಂದು ಆಸಕ್ತಿ. ಪ್ರಸ್ತುತ ೩೫ ಜೇನು ಪೆಟ್ಟಿಗೆಗಳಲ್ಲಿ ಜೇನು ಸಾಕುತ್ತಿದ್ದು, ಜೊತೆಗೆ ಜೇನುತುಪ್ಪ ಮಾರಾಟವನ್ನು ಸಹ ಮಾಡುತ್ತಿದ್ದೇನೆ. ಹವ್ಯಾಸದಿಂದ ಶುರುವಾದ ಜೇನುಕೃಷಿ ಮುಂದೆ ೨೦೦೬ ರಿಂದ ಈಚೆಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೆಚ್ಚಿನ ತರಬೇತಿ ಪಡೆದು, ಹವ್ಯಾಸಿ ಜೇನು ಕೃಷಿಕರ ಸಂಘ ಮಾಡಿಕೊಂಡು ಉಚಿತವಾಗಿ ಜೇನು ಹುಳುಗಳ ಕೊಡುವಿಕೆ, ಜೇನು ಕೀಳುವುದು, ಆಧುನಿಕ ಪದ್ಧತಿಯಲ್ಲಿ ಜೇನು ಸಾಕಾಣಿಕೆ ಕುರಿತು ತರಬೇತಿ ಮತ್ತು ಮಾರ್ಗದರ್ಶನ ನೀಡುವುದರೊಂದಿಗೆ ಜೇನುಕೃಷಿಯನ್ನು ಸಂರಕ್ಷಣೆ ಮಾಡುವತ್ತ ಜೀವನ ಸಾಗಿದೆ. ನಾನು ನೇಗಿಲ ಮಿಡಿತ ಪತ್ರಿಕೆಯ ಚಂದಾದಾರ. ಇದರಲ್ಲಿ ಡಾ. ಎಸ್.ಟಿ.ಪ್ರಭು, ಪ್ರಾಧ್ಯಾಪಕರು, ಹನುಮನಮಟ್ಟಿ, ಕೃಷಿ ಕಾಲೇಜು ಇವರು ಮುಜಂಟಿ ಜೇನು(ನಸುರು ಜೇನು) ಬಗ್ಗೆ ಅರಿವು ಮೂಡಿಸುವ ಲೇಖನ ನನಗೆ ತುಂಬಾ ಆಸಕ್ತಿ ಹುಟ್ಟಿಸಿತ್ತು. ಇಷ್ಟೆಲ್ಲ ವಿಶೇಷ ಗುಣ ಹೊಂದಿರುವ ಜೇನಿನ ಸಂರಕ್ಷಣೆ ಮತ್ತು ವೈಜ್ಞಾನಿಕ ಸಾಕಾಣಿಕೆ ಬಗ್ಗೆ ಆಸಕ್ತಿ ಹುಟ್ಟಿತು. ಅದಕ್ಕೆ ನನ್ನದೇ ರೀತಿಯಲ್ಲಿ ನಸುರು ಜೇನಿನ ಸಾಕಾಣಿಕೆಗೆ ಸಣ್ಣ ಮಾದರಿಯ ಮರದ ಪೆಟ್ಟಿಗೆಗಳನ್ನು ತಯಾರಿಸಿದ್ದು, ಅವುಗಳನ್ನು ಕೃಷಿಮೇಳ ಮತ್ತು ಕೃಷಿ ವಸ್ತು ಪ್ರದರ್ಶನದಲ್ಲಿ ಇಟ್ಟು ಜನರಲ್ಲಿ ಈ ಮುಜಂಟಿ ಜೇನಿನ ಬಗ್ಗೆ ಅರಿವು ಮೂಡಿಸುತ್ತಿದ್ದೇನೆ. ನನ್ನ ಈ ಕಾರ್ಯಕ್ಕೆ ಪ್ರೇರೇಪಿಸಿದ ಲೇಖಕರಿಗೆ ನಿಮ್ಮ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ

56