ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಆಧುನಿಕ ದಿನಗಳಲ್ಲಿ ನಶಿಸುತ್ತಿರುವ ಸೊಪ್ಪಿನ ಪ್ರಭೇದಗಳಲ್ಲಿ ಒಂದಾದ ಗೋಣಿಸೊಪ್ಪು

ದೀಪಿಕಾ, ಸಿ
೯೮೪೪೮೦೪೬೯೪
1

ಭಾರತದ ಹಳ್ಳಿಗಳಲ್ಲಿ ಹೇರಳವಾಗಿ ಬೆಳೆಯುವ ಸೊಪ್ಪಿನ ಜಾತಿಗೆ ಸೇರಿದ ತರಕಾರಿ ಸಸ್ಯಗಳಲ್ಲಿ ಗೋಣಿಸೊಪ್ಪು ಕೂಡಾ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ನಶಿಸುತ್ತಿರುವ ಈ ಜಾತಿಗೆ ಸೇರಿರುವ ಮತ್ತು ತಿನ್ನಲು ಅರ್ಹವಾಗಿರುವ ಈ ಸೊಪ್ಪು ತುಂಬ ಪ್ರಾಮುಖ್ಯತೆಯನ್ನು ಪಡೆದಿದೆ. ಆಧುನಿಕ ದಿನಗಳಲ್ಲಿ ಇದರ ಪರಿಚಯ ಕಡಿಮೆ. ಸಸ್ಯಶಾಸ್ತ್ರದ ಪ್ರಕಾರ ಮೂಲಿಕೆಯಂತಹ ತರಕಾರಿ ಎಲೆಗಳ ಗುಂಪಿನಲ್ಲಿ ಪೋರ್ಚುಲೇಸೀಯ ಎಂಬ ಕುಟುಂಬಕ್ಕೆ ಸೇರಿದ್ದು, ವೈಜ್ಞಾನಿಕವಾಗಿ ಇದನ್ನು ಪೋರ್ಚುಲೇಕ ಜಲರೇಸಿಯಾ ಎಲ್. ಎಂದು ಕರೆಯಲಾಗುತ್ತದೆ. ಇದು ಎಲ್ಲೆಡೆ ಬೆಳೆಯುವಂತಹ ಮತ್ತು ಶುಷ್ಕ ಪರಿಸರದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಈ ಸೊಪ್ಪು ೧೨-೧೫ ಸೆಂ.ಮೀ. ಎತ್ತರವಾಗಿ ಬೆಳೆಯುತ್ತದೆ ಸಾಮಾನ್ಯವಾಗಿ ಎಲೆಗಳನ್ನು ಮುಟ್ಟಿದರೆ ಮೀನಿನ ಮೇಲಿನ ಚರ್ಮ ಎಷ್ಟು ನುಣುಪಾಗಿರುವ ಹಾಗೆ ಭಾಸವಾಗುತ್ತದೆ. ಎಲೆಗಳು ರಸವತ್ತಾಗಿ ಹಚ್ಚ ಹಸಿರಿನಿಂದ ಕೂಡಿರುವವು. ಔಷಧೀಯ ಗುಣಗಳು: ಎಲೆಗಳಲ್ಲಿ ಕೊಬ್ಬಿನ ಅಂಶ ಕಡಿಮೆ ಇದ್ದು, ಜೀವಸತ್ವಗಳು, ನಾರಿನಂಶ ಮತ್ತು ಖನಿಜಾಂಶಗಳು ಸಮೃದ್ಧ ವಾಗಿವೆ. ಈ ಎಲೆಗಳಲ್ಲಿ ಹೇರಳವಾಗಿ (ಐieಟಿeoಟiಛಿ) ಓಮೆಗಾ-೩ ಕೊಬ್ಬಿನಾಮ್ಲಗಳು ಇರುವುದರಿಂದ ಹೃದಯ ಸಂಬಂಧಿ ಖಾಯಿಲೆ ಮತ್ತು ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ’ಎ’ ಜೀವಸತ್ವವು ಹೇರಳವಾಗಿದ್ದು, ಸ್ನಾಯುಗಳು ಮತ್ತು ಚರ್ಮವನ್ನು ಸಹ ನಿರ್ವಹಣೆ ಮಾಡುತ್ತದೆ. ಕ್ಯಾನ್ಸರ್ ರೋಗಕ್ಕೆ ತುಂಬಾ ಸಹಾಯಕಾರಿಯಾಗಿದೆ