ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಚಿತ್ರ ಲೇಖನ

ಲದ್ದಿಹುಳು

image_
ಡಾ. ಎಸ್. ಟಿ. ಪ್ರಭು,
9448182225
1

‘ಲದ್ದಿಹುಳು’ ಅಥವಾ ‘ಸೈನಿಕ ಹುಳು’ ಎಂದು ಕರೆಯಲ್ಪಡುವ ಈ ಕೀಟ ಪತಂಗ ಜಾತಿಗೆ ಸೇರಿದ್ದು ವೈಜ್ಞಾನಿಕವಾಗಿ ’ಮೈತಿಮ್ನ ಸೆಪರೇಟ’ (ಒಥಿಣhimಟಿಚಿ seಠಿಚಿಡಿಚಿಣಚಿ) ಎಂದು ಗುರುತಿಸಲಾಗಿದೆ. ಪ್ರೌಢ ಪತಂಗವು ದಪ್ಪ ಮತ್ತು ಸದೃಢವಾಗಿದ್ದು ೧.೫ ಇಂಚು ರೆಕ್ಕೆಯಗಲವುಳ್ಳದಾಗಿರುತ್ತದೆ. ರೆಕ್ಕೆಗಳ ಬಣ್ಣವು ಒಣ ಹುಲ್ಲಿನ ಬಣ್ಣದಂತೆ ಮಾಸಿದ ಬಿಳಿ ಬೂದು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಪತಂಗವು ಸುಮಾರು ೮೦೦ ರಿಂದ ೧೦೦೦ ಮೊಟ್ಟೆಗಳನ್ನು ಬದುಗಳಲ್ಲಿರುವ ಒಣ ಹುಲ್ಲಿನ ಮೇಲೆ ಮತ್ತು ಮೆಕ್ಕೆಜೋಳದ ಒಣಗಿದ ಎಲೆಗಳ ಮೇಲೆ ಇಡುತ್ತದೆ. ಪೂರ್ಣ ಬೆಳೆದ ಸೈನಿಕ ಹುಳುವು ೧.೫ ಇಂಚು ಉದ್ದವಿದ್ದು, ತೆಳು ಹಸಿರು ಅಥವಾ ಕಪ್ಪು ಬಣ್ಣದವಾಗಿರುತ್ತವೆ. ಮೈಮೇಲೆ ಉದ್ದನಾಗಿ ಬೆನ್ನಿನ ಮಧ್ಯದಲ್ಲಿ ಮತ್ತು ಇಕ್ಕೆಲಗಳಲ್ಲಿ ಮಾಸಿದ ಬಿಳಿ ಗೆರೆಗಳನ್ನು ಹೊಂದಿರುತ್ತದೆ. ೧೨ ರಿಂದ ೧೫ ದಿನಗಳಲ್ಲಿ ಮರಿಹಂತವನ್ನು ಮುಗಿಸಿ ಮಣ್ಣಿನೊಳಗೆ ಕೋಶಾವಸ್ಥೆಗೆ ಹೋಗುತ್ತವೆ. ೫ ರಿಂದ ೭ ದಿನಗಳೊಳಗೆ ಕೋಶಾವಸ್ಥೆಯನ್ನು ಮುಗಿಸಿ ಪತಂಗವಾಗಿ ಹಾರಿ ಸಂತಾನೋತ್ಪತ್ತಿ ಯನ್ನು ಮುಂದುವರೆಸುತ್ತವೆ. ಜೂನ್ನಿಂದ ಡಿಸೆಂಬರ್ವರೆಗೆ ೬ ಸಂತತಿಗಳನ್ನು ಮುಗಿಸುತ್ತದೆ

3

ಈ ಕೀಟದ ಹಾವಳಿ ಜುಲೈನಿಂದ ಅಕ್ಟೋಬರ್ವರೆಗೆ ತೀವ್ರವಾಗಿರುತ್ತದೆ. ಈ ಕೀಟವು ಗುಂಪು ಗುಂಪಾಗಿ ಹೊಲದಿಂದ ಹೊಲಕ್ಕೆ ಚಲಿಸುತ್ತಾ ವಿಪರೀತ ನಷ್ಟವನ್ನುಂಟು ಮಾಡುತ್ತದೆ. ಮರಿಹುಳುಗಳು ಹಗಲು ಹೊತ್ತಿನಲ್ಲಿ ಮೆಕ್ಕೆಜೋಳದ ಎಲೆಗಳ ಮತ್ತು ತೆನೆಗಳ ಪಕ್ಕದಲ್ಲಿ ಅಥವಾ ಭೂಮಿಯಲ್ಲಿ ಹೆಂಟೆಗಳ ಕೆಳಗೆ ಅಥವಾ ಬಿರುಕುಗಳಲ್ಲಿ ಅಡಗಿದ್ದು ಮುಂಜಾನೆ, ಸಂಜೆ ಮತ್ತು ರಾತ್ರಿ ಸಮಯದಲ್ಲಿ ಚಟುವಟಿಕೆ ಯಿಂದಿರುತ್ತವೆ. ಈ ಕೀಟ ಪ್ರತಿ ವರ್ಷ ಬಾರದೆ, ಹಲವಾರು ವರ್ಷಗಳಿಗೊಮ್ಮೆ ಈ ಕೀಡೆ ಸಾಂಕ್ರಾಮಿಕ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಸುಮಾರು ಒಂದೆರಡು ತಿಂಗಳು ಮಳೆ ಬೀಳದೆ ತರುವಾಯ ಭಾರಿ ಮಳೆಯಾದಲ್ಲಿ ಇದು ತೀವ್ರ ರೂಪದಲ್ಲಿ ಕಾಣಿಸಿಕೊಳ್ಳುವುದು. ಈ ಕೀಟದ ಮರಿಹುಳುಗಳು ಮೆಕ್ಕೆಜೋಳ, ಜೋಳ, ನವಣೆ, ರಾಗಿ, ಸಜ್ಜೆ, ಸಾವೆ, ಭತ್ತ ಮುಂತಾದ ಏಕದಳ ಧಾನ್ಯಗಳನ್ನು ಮುಖ್ಯವಾಗಿ ಆಕ್ರಮಣ ಮಾಡುತ್ತವೆ. ಪೈರಿನಲ್ಲಿ ಎಲೆಗಳನ್ನು ಪೂರ್ಣವಾಗಿ ತಿಂದು ನಡುದೇಟನ್ನು ಮಾತ್ರ ಉಳಿಸಿರುತ್ತವೆ. ನಂತರ ತೆನೆಗಳನ್ನು ಕೊರೆದು ತಿನ್ನುತ್ತವೆ. ಬೆಳೆಯ ಹಂತವನ್ನಾಧರಿಸಿ ಈ ಕೀಟದಿಂದ ಸುಮಾರು ೩೦ ರಿಂದ ೧೦೦ ಪ್ರತಿಶತ ಹಾನಿಯಾಗುತ್ತದೆ. ಇವು ಇದ್ದಕ್ಕಿದ್ದಂತೆ ವಿಶೇಷವಾಗಿ ಕಾಣಿಸಿಕೊಂಡು ಹೊಲದಿಂದ ಹೊಲಕ್ಕೆ, ಗದ್ದೆಯಿಂದ ಗದ್ದೆಗೆ ‘ಸೈನ್ಯದಂತೆ’ ಸಾಗುತ್ತವೆ. ಇದರ ಆರ್ಥಿಕ ಹಾನಿಯ ಮಟ್ಟ ಒಂದು ಗಿಡಕ್ಕೆ ಒಂದು ಕೀಡೆ

567

ನಿರ್ವಹಣೆ: ೧. ಸೈನಿಕ ಹುಳುವಿನ ಹಾವಳಿಯನ್ನು ಪ್ರಾರಂಭ ಹಂತದಲ್ಲೆ ಗುರುತಿಸಬೇಕು, ೨. ವಿಷ ತಿಂಡಿ ಬಳಸಿ ಸೈನಿಕ ಹುಳುಗಳನ್ನು ಯಶಸ್ವಿಯಾಗಿ ಹತೋಟಿ ಮಾಡಬಹುದಾಗಿದೆ, ೩.ಒಂದು ಎಕರೆ ಪ್ರದೇಶಕ್ಕೆ ವಿಷ ತಿಂಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು: ೨೫೦ ಮಿ.ಲೀ. ಮೋನೋಕ್ರೋಟೋಫಾಸ್ ೩೬ ಎಸ್. ಎಲ್., ೨ ಕೆ.ಜಿ. ಬೆಲ್ಲ, ೫ ಲೀಟರ್ ನೀರು ಮತ್ತು ೨೦ ಕೆ.ಜಿ. ಅಕ್ಕಿ ಅಥವಾ ಗೋದಿ ತೌಡು, ೪.ತಯಾರಿಸುವ ವಿಧಾನ: ಮೊದಲು ಬೆಲ್ಲವನ್ನು ನೀರಿನಲ್ಲಿ ಕರಗಿಸಿಕೊಳ್ಳಬೇಕು. ಹಾಗೆಯೆ ಮೋನೋಕ್ರೋಟೊಫಾಸ್ನ್ನು ನೀರಿಗೆ ಬೆರೆಸಿ. ಈ ದ್ರಾವಣವನ್ನು ಅಕ್ಕಿ ತೌಡು ಜೊತೆ ಮಿಶ್ರ ಮಾಡಿ ಮುದ್ದೆಯಂತೆ ಮಾಡಿ ೨೪ ತಾಸು ನೆನೆಯಿಸಬೇಕು (ಕಳಿಯಲು ಬಿಡಬೇಕು). ಹೊಲಗಳಲ್ಲಿ ಸಾಯಂಕಾಲ ಸಮಯದಲ್ಲಿ ಎರಚಬೇಕು. ವಿಷತಿಂಡಿ ತಯಾರಿಸುವಾಗ ಕೈಗವಸುಗಳನ್ನು ಬಳಸಬೇಕು,೫. ಎಚ್ಚರಿಕೆ: ಈ ಸಮಯದಲ್ಲಿ ವಿಷ ತಿಂಡಿಯಿಂದ ಸಾಕು ಪ್ರಾಣಿಗಳನ್ನು ದೂರವಿಡಿ, ೬. ಈ ಸೈನಿಕ ಹುಳುಗಳು ಒಂದು ಹೊಲದಿಂದ ಇನ್ನೊಂದು ಹೊಲಕ್ಕೆ ವಲಸೆ ಹೋಗುವಾಗ ಹೊಲದ ಸುತ್ತಲೂ ಒಂದು ಅಡಿ ಆಳದ ಕಂದಕ ತೋಡಿ ಅದರಲ್ಲಿ ಮೆಲಾಥಿಯಾನ್ ೫% ಕೀಟನಾಶಕದ ಪುಡಿಯನ್ನು ಉದುರಿಸುವುದು. ಬದುಗಳ ಮೇಲೆಯೂ ಕೀಟನಾಶಕದ ಪುಡಿಯನ್ನು ಹರಡಿ ಕೀಟವು ಹೊಲಗಳನ್ನು ಪ್ರವೇಶಿಸುವುದನ್ನು ತಡೆಯಬಹುದು. ೭. ಸೈನಿಕ ಹುಳುವಿನ ನಂಜು ರೋಗ ಬರಿಸುವ ಎನ್.ಪಿ.ವಿ. ಕೀಟನಾಶಕವನ್ನು ಸಹ ಜೈವಿಕ ಹತೋಟಿಯಾಗಿ ಬಳಸಬಹುದು. ೮. ಸೈನಿಕ ಹುಳುವಿನ ಹತೋಟಿಯನ್ನು ಸಾಮೂಹಿಕ ವಾಗಿ ಮತ್ತು ತುರ್ತಾಗಿ ಕೈಗೊಳ್ಳಬೇಕು

9