ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಪಂಪ್ಸೆಟ್ ನಡೆಸುವಾಗ ವಹಿಸಬೇಕಾದ ಎಚ್ಚರಿಕೆ ಕ್ರಮಗಳು

image_
ಅನಿಲ್ ಕುಮಾರ್
9449837309
1

ಪಂಪ್ಸೆಟ್ಗಳಿಗೂ ತನ್ನದೇ ಆದ ಕಾರ್ಯನಿರ್ವಹಿಸುವ ಮಿತಿ ಇರುತ್ತದೆ. ವೋಲ್ಟೇಜ್ ವಿಚಾರದಲ್ಲಿ ೩೫೦ವಿ - ೪೧೫ವಿ ವರೆಗೆ ಕಾರ್ಯನಿರ್ವಹಿಸಬಲ್ಲದು. ಅನಧಿಕೃತ ಪಂಪ್ಗಳು ಹಾಗೂ ಬೇಸಿಗೆಯ ಅತಿ ಬಳಕೆಯಿಂದ ಟ್ರಾನ್ಸ್ಫಾರ್ಮರ್ಗಳು ಲೋಡ್ ಆಗುತ್ತವೆ. ಇದಲ್ಲದೇ ಕಡಿಮೆ ಗೇಜ್ನ ಹಳೇ ವೈರ್ಗಳು, ಲೂಸ್ ಕಾಂಟ್ಯಾಕ್ಟ್ಗಳು ಲೋವೋಲ್ಟೇಜ್ಗೆ ಕಾರಣವಾಗುತ್ತವೆ. ಈ ಸಂದರ್ಭದಲ್ಲಿ ಮೋಟಾರ್ ತಿರುಗಲು ಶಕ್ತಿ ಸಾಲದೇ, ವಿದ್ಯುತ್ ಎಲ್ಲಾ ಶಾಖವಾಗಿ ಪರಿವರ್ತನೆಯಾಗಿ ವೈಂಡಿಂಗ್ ಸುಡುತ್ತದೆ. ಹೀಗೆ ಅಧಿಕ ವೋಲ್ಟೇಜ್ ಕೂಡಾ ಅಪಾಯಕಾರಿ. ವೋಲ್ಟೇಜ್ ಹೆಚ್ಚಿದಂತೆಲ್ಲಾ ಕರೆಂಟ್ ಕೂಡಾ ಹೆಚ್ಚುತ್ತದೆ. ಇದೂ ಕೂಡಾ ಮೋಟಾರ್ ಸುಡಲು ಕಾರಣವಾಗುತ್ತದೆ. ಟ್ರಾನ್ಸ್ಫಾರ್ಮರ್ನಿಂದ ದೂರದಲ್ಲಿರುವ ಪಂಪ್ಗಳಲ್ಲಿ ಇದರ ಸಾಧ್ಯತೆ ಹೆಚ್ಚು

ಇದರ ಜೊತೆ ಉತ್ತಮ ಕಾರ್ಯನಿರ್ವಹಣೆಗೆ ಗಮನಿಸಬೇಕಾದ ಅಂಶಗಳು: 1.ಕೆಲವೊಮ್ಮೆ ಲೈನ್ನಲ್ಲಿ ಅಥವಾ ಪ್ಯಾನಲ್ನಲ್ಲಿ ’ಚಿರ್-ಚಿರ್’ ಎಂಬ ಸಣ್ಣ ಶಬ್ದ ಗಮನಿಸಿರಬಹುದು. ಇದರ ಅರ್ಥ ಎಲ್ಲೂ ’ಸಂಪರ್ಕ’ ಸರಿಯಾಗಿಲ್ಲವೆಂದು. ಲೈನ್ನಲ್ಲಿ ಸಣ್ಣದಾಗಿ ಕಿಡಿ ಅಥವಾ ಬೆಂಕಿ ಕಾಣಿಸಬಹುದು. ಇದನ್ನು ದೂರು ನೀಡಿ ಸರಿಪಡಿಸಿ. 2. ಇನ್ನೂ ಪ್ಯಾನಲ್ನಲ್ಲಿ ಸ್ಟಾರ್ಟರ್ ಅಥವಾ ಫ್ಯೂಸ್ ಬಿಸಿಯಾಗುತ್ತಿದ್ದಲ್ಲಿ ಎಲೆಕ್ಟ್ರಿಷಿಯನ್ ಸಂಪರ್ಕಿಸಿ. ಫ್ಯೂಸ್ ಪದೇ ಪದೇ ಹೋಗುತ್ತಿದ್ದಲ್ಲಿ ಅದನ್ನು ದಪ್ಪ ವೈರ್ ಹಾಕುವ ಅಥವಾ ನೇರ ಸಂಪರ್ಕ ಕಲ್ಪಿಸುವ ಕೆಲಸ ಮಾಡಬೇಡಿ. 3. ಫೇಸ್ ಸೀಕ್ವೆನ್ಸ್ ರಿಲೇ ಸಂಪರ್ಕ ತಪ್ಪಿಸುವುದು. ಸಿಂಗಲ್ ಫೇಸ್ನಲ್ಲಿ ಕೆಪಾಸಿಟರ್ ಬಳಸಿ ಪಂಪ್ ನಡೆಸುವುದೂ ಪಂಪ್ಗೆ ಮಾರಕವೇ. 4.ಅಗತ್ಯಕ್ಕಿಂತ ಹೆಚ್ಚಿನ ಕೆಪಾಸಿಟರ್ ಬಳಕೆಯಿಂದ ಮೋಟಾರ್ ಸುಟ್ಟ ಘಟನೆಗಳು ಬಹಳಷ್ಟಿವೆ. 4. ಬೇಸಿಗೆಯಲ್ಲಿ ‘ನೀರಿಲ್ಲದೇ’ ಪಂಪ್ಗಳು ಓಡಿದಾಗ ಸುಡುವ ಅಪಾಯವಿದೆ. 5. ಮಳೆಗಾಲದಲ್ಲಿ ಮಿಂಚು, ಸಿಡಿಲುಗಳ ಅಪಾಯ ಪ್ರಮುಖವಾದದ್ದು. ಇದಲ್ಲದೇ ಪ್ಯಾನಲ್ಗಳಲ್ಲಿ ನೀರು ಸೇರುವುದು. ಭೂಗತ ಕೇಬಲ್ಗಳಲ್ಲಿ ನಿರೋಧಕತೆ ಹಾಳಾಗುವುದು ಇತರೆ ಸಾಧ್ಯತೆಗಳಿವೆ. 6. ಕೆಲವೊಮ್ಮೆ ವೋಲ್ಟೇಜ್ ಸರಿಯಾಗಿ ತೋರಿದರೂ, ಒಂದು ಫೇಸ್ಗೂ ಮತ್ತೊಂದು ಫೇಸ್ಗೂ ಸಮಾನತೆ ಇಲ್ಲದಾದಲ್ಲಿ ಮೋಟಾರ್ಗಳು ಹೆಚ್ಚು ವಿದ್ಯುತ್ ತಿನ್ನುತ್ತವೆ. ಈ ಅಸಮಾನತೆಯ ಮಿತಿ ೧೦-೧ ಒಳಗಿದ್ದರೆ ಕ್ಷೇಮ. 7. ಪಂಪ್ನ ಇಂಪೆಲ್ಲರ್ ಅಥವಾ ಬೇರಿಂಗ್ಗಳು ಸುಸ್ಥಿತಿಯಲ್ಲಿರದಿದ್ದಲ್ಲಿ ಅವೂ ಕೂಡಾ ಮೋಟಾರ್ ಹೊರೆಯಾಗಿ ಪರಿಣಮಿಸಲಿವೆ

ಇನ್ನು ಪಂಪ್ಸೆಟ್ ಸುಡದಂತೆ, ಸುರಕ್ಷೆಯಿಂದಿರುವಂತೆ ವಹಿಸಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ: ೧) ಪ್ಯಾನಲ್ನ ಫ್ಯೂಸ್, ಮಿತಕ, ಸ್ಟಾರ್ಟರ್, ಸಿಂಗಲ್ ಫೇಸ್ ರಿಲೇ, ಫೇಸ್ ಸೀಕ್ವೆನ್ಸ್ ರಿಲೇ ಸರಿಯಾಗಿವೆಯೇ ಪರೀಕ್ಷಿಸಿ, ಇವುಗಳ ಸಂಪರ್ಕ ಎಂದೂ ತಪ್ಪಿಸಬೇಡಿ, ೨) ವೋಲ್ಟೇಜ್ ಕಡಿಮೆ ಅಥವಾ ಹೆಚ್ಚು ಇದ್ದಾಗ ಪಂಪ್ ಸಂಪರ್ಕ ತಪ್ಪಿಸುವ ಉಪಕರಣ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದನ್ನು ಬಳಸಿ, ೩) ಪಂಪ್ಗಳು ನೀರಿಲ್ಲದೇ ಓಡುವುದನ್ನು ತಪ್ಪಿಸುವ ಹಾಗೂ ಅಧಿಕ ಕರೆಂಟನ್ನು ತಪ್ಪಿಸುವ ಉಪಕರಣಗಳು ಲಭ್ಯವಿದೆ, ೪) ಮಿಂಚು, ಗುಡುಗಿನ ಸಮಯದಲ್ಲಿ ಪಂಪ್ ಬಳಸದಿರುವುದೇ ಕ್ಷೇಮ. ಭೂ ಸಂಪರ್ಕ, ಗ್ರೌಂಡಿಂಗ್ ಬಗ್ಗೆ ಹೆಚ್ಚು ಎಚ್ಚರವಹಿಸಿ, ೫) ಪ್ರತೀ ಫೇಸ್ನ ವೋಲ್ಟೇಜ್ ಅಳೆಯಲು ವೋಲ್ಟ ಮೀಟರ್ಗೆ ಆಯ್ಕೆ ಸ್ವಿಚ್ ಅಳವಡಿಸಿ. ಯಾವುದೇ ಫೇಸ್ನ ವೋಲ್ಟೇಜ್ ಮಿತಿಯ ಹೊರಗಿದ್ದರೆ ಅಥವಾ ೩೦ವಿ ಗೂ ಹೆಚ್ಚು ಅಸಮಾನತೆ ಇದ್ದರೆ ಇಲಾಖೆಯನ್ನು ಸಂಪರ್ಕಿಸಿ, ೬) ೧೧ಕೆವಿ ಲೈನ್ ಹಾದು ಹೋಗಿದ್ದಲ್ಲಿ, ಅದಕ್ಕೂ ನಿಮ್ಮ ೩ ಫೇಸ್ನ (೪೪೦ವಿ) ವಿದ್ಯುತ್ ಲೈನ್ಗೂ ಗಾಳಿ ಬಂದಾಗ ಒಂದಕ್ಕೊಂದು ತಾಗದಂತೆ ಇವೆಯೇ ಗಮನಿಸಿ. ಹಾಗೇ ೧೧ಕೆವಿ ಲೈನ್ಗೆ ಗಾರ್ಡಿಂಗ್ ಇದ್ದರೆ ಸೂಕ್ತ. ೭) ಪಂಪ್ನ ರೀವೈಂಡಿಂಗ್ ಸಂದರ್ಭದಲ್ಲಿ ಉಪಯೋಗಿಸಿದ ತಂತಿಯ ಗಾತ್ರ, ಅದರ ಗುಣಮಟ್ಟ, ಸುರಳಿಗಳ ಸಂಖ್ಯೆ (turns) ಹಾಗೂ ನಿರೋಧಕ (Insulator) ಇದರ ಬಗ್ಗೆ ವಿಚಾರಿಸಿ. ಮೇಲಿನ ಎಲ್ಲಾ ವಿಚಾರಗಳ ಆಧಾರದ ಮೇಲೆ ನಿಮ್ಮ ಪಂಪ್ ಸುರಕ್ಷವಾಗಿದೆಯೇ ಎಂದು ಪರಿಶೀಲಿಸಿ. ಅಯ್ಯೋ ಯಾವಾಗೋ ಒಂದು ಸಾರಿ ಹಾಳಾಗೋದಕ್ಕೆ ಇಷ್ಟೆಲ್ಲಾ ಯಾಕೆ? ಎಂಬ ನಿರ್ಲಕ್ಷ ಬೇಡ. ಇದು ಆರ್ಥಿಕ ನಷ್ಟ ಮಾತ್ರವಲ್ಲ ಜೀವಕ್ಕೂ ಅಪಾಯವೂ ಹೌದು