ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಕೃಷಿಯೊಂದು ಕಲೆ

ಬಿ. ಎಮ್. ಚಿತ್ತಾಪೂರ
9448821755
1

ಶ್ರೀ ದೇವೆಂದ್ರಪ್ಪ ಬಳ್ಳೂಟಗಿ ಅವರ ತೋಟಗಾರಿಕೆ ಮತ್ತು ಅರಣ್ಯ ಸಸ್ಯಗಳ ಮಿಶ್ರ ಬೇಸಾಯ ಹುಟ್ಟು ಹಾಕಿದ ರೈತ ತಜ್ಞ. ಬಯಲುನಾಡಿಗೆ ಶ್ರೀಗಂಧವನ್ನು ಪರಿಚಯಿಸಿದವರೂ ಅವರೆ ಹೌದು. ಇಂದು ರಕ್ತಚಂದನದ ೨೦೦೦ ಗಿಡಗಳು ಶ್ರೀಗಂಧದ ೨೫೦೦೦ ಗಿಡಗಳು ಅದರಂತೆ ತೇಗದ ೩೦೦೦ ಮರಗಳು ಜೊತೆಗೆ ಮಾವು ದಾಳಿಂಬೆ ಮತ್ತು ಕಿನೊ ಹಣ್ಣಿನ ಗಿಡಗಳು ಬೇರೆ. ಎಲ್ಲವೂ ಮಿಶ್ರ ಬೇಸಾಯ. ಅವರೆ ಹೇಳುವಂತೆ ’ಒಂದು ಸಾರಿ ಮಾವಿನ ಗಿಡವೊಂದು ತುಂಬ ಜಿಗಿ ಬಿದ್ದು ಇನ್ನೇನೊ ರಾಸಾಯನಿಕ ಹೊಡೆಯಬೇಕೆನ್ನುವ ಹಂತದಲ್ಲಿ ಜೇನು ನೊಣಗಳ ಆಗಮನವಾಗಿ ಜಿಗಿ ತನ್ನಷ್ಟಕ್ಕೆ ತಾನೇ ಕಡಿಮೆಯಾಯಿತು. ಇದು ವಿಚಿತ್ರ ನೈಸರ್ಗಿಕ ವ್ಯವಸ್ಥೆ. ಅದರತ್ತ ನಮ್ಮ ಗಮನವಿರಬೇಕು’ ಎಂದು ಸಭೆಯೊಂದರಲ್ಲಿ ಹೇಳಿದ್ದರು