ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಕೃಷಿರಂಗ

ತಬ್ಬಲಿಗಳು

ಡಾ. ಮಿರ್ಜಾ ಬಷೀರ್
೯೪೪೮೧೦೪೯೭೩

ದೃಶ್ಯ – ೧: ಒಬ್ಬ ರೈತ: ನಮಸ್ಕಾರ, ಎಲ್ರಿಗೂ ನಮಸ್ಕಾರ, ನಮಸ್ಕಾರ. ಇದು ನಮ್ಮೂರಿನ ಪಶು ಆಸ್ಪತ್ರೆ ನೋಡ್ರಿ. ಇದನ್ನ ಬೇಕಾದ್ರೆ ಶಿಶು ಆಸ್ಪತ್ರೆ ಅಂತಾನೂ ಕರೀಬಹ್ದು. ಯಾಕಂದ್ರೆ ನೋಡ್ರಿ.... ಪಶುಗಳೂ ಮಾತಾಡಲ್ಲ ಶಿಶುಗಳೂ ಮಾತಾಡಲ್ಲ. ಬಾಯಿಲ್ಲದ ರೋಗಿಗಳ ಪರೀಕ್ಷಿಸಿ ರೋಗ ಕಂಡುಹಿಡಿಬೇಕು! ಮತ್ತೆನಪ್ಪಾಂದ್ರೆ ಪಶು-ಶಿಶು ಇಬ್ರತ್ರಾನೂ ಸುಳ್ಳು ಮೋಸ, ಧಗ, ವಂಚನೆ ಯಾವ್ದೂ ಇಲ್ಲ. ಅದ್ಕೆ ಹೇಳ್ತೀನಿ ನಾನು ಶಿಶು ಮತ್ತು ಪಶುಗಳು ದೇವರಿದ್ದಂಗೆ. ಶಿಶುಗಳಾದ್ರೂ ದೊಡ್ಡವಾಗ್ತ ದೊಡ್ಡವಾಗ್ತ ದೊಡ್ಡವರನ್ನೋಡಿ ಅದೇ ನನ್ನಂಥವನ್ನ ಮತ್ತು ನಿಮ್ಮಂಥವರನ್ನ ನೋಡಿ ಕಳ್ಳಾಟ ಕಲೀತವೆ. ಆದ್ರೆ ಪಶುಗಳು ಮಾತ್ರ ಹೆಂಗೆ ಹುಟ್ತವೊ ಕೊನೆವರ್ಗೂ ಹಂಗೇ ಇರ್ತವೆ ನೋಡ್ರಿ. ಅದ್ಕೆ ನಮ್ಮಳ್ಳೀಲಿ ಈ ಪಶು ಆಸ್ಪತ್ರೆ ಏನಯ್ತಲ್ಲಾ ಅದು ದೇವರ ಮನೆ ಇದ್ದಂಗೆ. ಬರ್ರಿ ಈ ಆಸ್ಪತ್ರೆ ಒಳ ಹೊಕ್ಕ ನೋಡನ ನನ್ದು ಒಂದು ಸ್ಪಲ್ಪ ಕೆಲಸ್ವೈತೆ.....(ಪಶು ಆಸ್ಪತ್ರೆಯಲ್ಲಿ ಪಶು ವೈದ್ಯರು ಕುಳಿತಿದ್ದಾರೆ. ಬೆಂಚಿನ ಮೇಲೆ ೪-೫ ಜನ ರೈತರು ಹಾಗೂ ಒಬ್ಬ ರೈತ ಮಹಿಳೆ ಕುಳಿತಿದ್ದಾರೆ.)

ರೈತ ೧: ಸಾರ್ ಸಾರ್ ಡಾಕ್ಟ್ರೇ.... ನನ್ಮಗ ಬಿದ್ದು ಬುಲ್ಡೆ ಹೊಡಕೊಂಡಿದಾನೆ. ಸ್ವಲ್ಪ ಟಿಂಚರ್ ಕೊಡಿ. ಪಶು ವೈದ್ಯ: ಇದು ದನಿನಾಸ್ಪತ್ರೆ ಕಣ್ರಿ. ನೀವು ಮನುಷ್ಯರಾಸ್ಪತ್ರೆಗೋಗ್ರಿ

ರೈತ ೧: ಇಲ್ಲ ಸಾರ್, ದನಿನಾಸ್ಪತ್ರೆ ಟಿಂಚರ್ರೇ ಬೆಸ್ಟು. ದನಿಗಾಕ ಟಿಂಚರ್ ಬಾಳ ಸ್ಟ್ರಾಂಗಾಗಿರ್ತೈತೆ. ಗಾಯ ಅನ್ನೋದು ಎಲ್ಡು ದಿನದಾಗ ಒಣಗೋಗ್ತೈತೆ

ಪ.ವೈ: ಮಹಾರಾಯ..... ಬೆಳಗ್ಗೆ ಬೆಳಗ್ಗೆ ನನ್ನ ತಲೆ ತಿನ್ನಬ್ಯಾಡ. ದನಿನಾಸ್ಪತ್ರೆಗೆ ಜನ ಹೋಗೋದು, ಜನರ ಆಸ್ಪತ್ರೆಗೆ ದನಗಳನ್ನಿಡಕೊಂಡು ಹೋಗೋದು ಈ ಉಲ್ಟಾ ವ್ಯವಹಾರಗಳೆಲ್ಲ ನನಗೆ ಸರಿಹೋಗಲ್ಲ. ಕೂಡ್ಲೆ ನೀನು ಜನಗಳಾಸ್ಪತ್ರೆಗೋಗು. ರೈತ ೧: ಏನ್ಸಾರ್....ದನಿನಾಸ್ಪತ್ರೆ ಟಿಂಚರಿಗಿಂತ ನೀವೇ ಸ್ಟ್ರಾಂಗಾಗಿದೀರ!

ರೈತ ೨: ನನನಮುಸ್ಕಾರ ಡಾಡಾಡಾಕು.... ಡಾಕುಟ್ರೆ. ಸುಮ್ಮನೆ ಎತ್ತು... ಅದದದೆ ಸಾ... ಕಕಕಕಪ್ಪೆತ್ತಿಂದು ಬಾಬಾಲ ಉ ದ್ದು ದು ರೋ ಗೈ ತೆ.... ಏನಾದ್ರೂ ಔ ಔ ಔ ಸ್ದಿ ಕೊ ಕ್ಕೊ ಕ್ಕೊ ಕ್ಕೊ ಕ್ಕೊಡಿ..

ಪ.ವೈ: ಏನು ಏನು ಏನು? ಎತ್ತು ಕಪ್ಪೆ ತಿಂದಿದ್ಯ? ಅದ್ಯಾವುದ್ರೀ ಅದು ನಾನ್-ವೆಜಿಟೇರಿಯನ್ ಎತ್ತು? ಕಪ್ಪೆ ತಿಂದ್ರೆ ಎತ್ತಿನ ಬಾಲ ಉದುರೋಗುತ್ತೇನ್ರಿ?

ರೈತ ೨: ಅ ಲ್ಲ ಲ್ಲ ಲ್ಲ ಲ್ಲ ಲ್ಲ ಸಾ.... ಕ ಕ್ಕ ಕ್ಕ ಕ್ಕ ಪ್ಪೆ ಪ್ಪೆ ಪ್ಪೆ ತ್ತಿ ತ್ತಿಂದು ಬಾಲ ಉ ದು ದು ದು ದು ರೈತೆ... ಔ ಔ ಔ ಸ್ದಿ ಕೊ ಕ್ಕೊ ಕ್ಕೊ ಕ್ಕೊ

ರೈತ ೧: ಇವುನ್ಯಾರಯ್ಯ ಕೊಕ್ಕೊ ಆಟಗಾರ ದನಿನಾಸ್ಪತ್ರೆಗೆ ಬಂದಿದ್ದಾನೆ!

ಪ.ವೈ: ಏನೂ ಅರ್ಥ ಆಗ್ತಾ ಇಲ್ಲಪ್ಪ ನಂಗೆ| ಏನು ಪುಟ್ಟಯ್ಯ ಈತನ ಕೇಸು?, ಪುಟ್ಟಯ್ಯ: ಸಾರ್ ... ಇವರ್ಮನೇಲಿ ಒಂದು ಕಪ್ಪು ಬಣ್ಣದ ಎತ್ತಿದೆ. ಅದರ ಬಾಲದ ಕೂದಲು ಉದುರ್ತ ಇವೆಯಂತೆ. ಅದಕ್ಕೇನಾದ್ರೂ ಔಸ್ದಿ ಬೇಕಂತೆ. ಇವರು ಉಗ್ಗುವುದರಿಂದ ಈ ಥರ ಯಡವಟ್ಟಾಗುತ್ತೆ ಸಾರ್!

ಪ.ವೈ: ಒಹೊಹೊ! ಅರ್ಥ ಆಯ್ತು ಬಿಡು! ಕಪ್ಪು + ಎತ್ತಿಂದು = ಕಪ್ಪೆತ್ತಿಂದು!!, ರೈತ ೧: ಯಾವ ಸಂದಿ ಸಾರ್?

ಪುಟ್ಟಯ್ಯ: ಸಂದಿ ಸಮಾಸ ವಿವರಿಸಕ್ಕೆ ಇದೇನು ಕನ್ನಡ ಸ್ಕೂಲೇನ್ರಿ? ಇದು ದನಿನಾಸ್ಪತ್ರೆ ನೆನಪಿಟ್ಕಳಿ, ರೈತ ೩: ಸಾರ್, ಈ ನಮ್ಮ ಎಂತದಪ್ಪ ಇದೂ .... ಇದೂ ...... ನಮಿದ್ದುಕ್ಕೆ ಇದಾಗೈತೆ ಸ್ವಲ್ಪ ಇದ್ಕೊಡಿ ಸಾರ್, ರೈತ ೧: ಸಂಧಿ ಸಮಾಸದ ಚರ್ಚೆ ಮುಗಿದ ಮೇಲೆ ಇವ್ನದ್ದೇನೋ ಒಗಟು ಶುರುವಾಯಿತಪ್ಪ

ಪ.ವೈ: ಹ್ಞಾ ಞಂ! ಇದ್ಕದಾಗೈತೆ ಇದ್ಕೊಡಿ!, ರೈತ ೧: ಅಲ್ಲಲೇ ... ಅದೇನು ಸರಿಯಾಗಿ ಹೇಳು. ಇದ್ಕದಾಗೈತೆ ಇದ್ಕೊಡಿ ಅಂದ್ರೇನು? ಇದ್ಕೆ ಅಂದ್ರೆ ದನಾನೋ ಕತ್ತೆನೋ ಹಂದಿನೋ?, ರೈತ ೪: ಇದಾಗೈತೆ ಅಂದ್ರೆ ಬೆದೆನೊ ಭೇದಿನೊ ಅಥವಾ ಗೂದೆ ಹೊಟೈತೊ?, ರೈತ ೫: ಇದ್ಕೊಡಿ ಅಂದ್ರೆ ಔಸ್ದಿ ಕೊಡ್ಬೇಕೋ ಅಥವಾ ನಿನ್ನ ಬುಲ್ಡೆಗೆರಡು ಕೊಡ್ಬೆಕೊ?

ಪ.ವೈ: ಹ್ಞಾ ಞಂ! ಇದ್ಕದಾಗೈತೆ ಇದ್ಕೊಡಿ!, ರೈತ ೧: ಅಲ್ಲಲೇ ... ಅದೇನು ಸರಿಯಾಗಿ ಹೇಳು. ಇದ್ಕದಾಗೈತೆ ಇದ್ಕೊಡಿ ಅಂದ್ರೇನು? ಇದ್ಕೆ ಅಂದ್ರೆ ದನಾನೋ ಕತ್ತೆನೋ ಹಂದಿನೋ?, ರೈತ ೪: ಇದಾಗೈತೆ ಅಂದ್ರೆ ಬೆದೆನೊ ಭೇದಿನೊ ಅಥವಾ ಗೂದೆ ಹೊಟೈತೊ?, ರೈತ ೫: ಇದ್ಕೊಡಿ ಅಂದ್ರೆ ಔಸ್ದಿ ಕೊಡ್ಬೇಕೋ ಅಥವಾ ನಿನ್ನ ಬುಲ್ಡೆಗೆರಡು ಕೊಡ್ಬೆಕೊ?

ರೈತ ೩: ಐಯ್ಯ... ಎಂತದಪ್ಪ ಇದು.... ನಮ್ಮ ಎಮ್ಮೆ ಮಣಕ ಬೆದೆಗೆ ಬಂದಿಲ್ಲ. ಔಸ್ದಿ ಬೇಕಿತ್ತು ಸಾರ್..., ಪ.ವೈ: ಆಯ್ತಪ್ಪ. ಪುಟ್ಟಯ್ಯ... ಬೆದೆಗೆ ಬರೊ ಮಾತ್ರೆ ಇದವಲ್ಲ ಅವುನ್ನ ಇವ್ರಿಗೆ ಕೊಡು, ಪುಟ್ಟಯ್ಯ: ನೋಡಣ್ಣ ಈ ಮಾತ್ರೆಗಳನ್ನು ಎಮ್ಮೆಗೆ ತಿನ್ನಿಸು. ಪರ್ಪಾಟಿನ ಮೇಲೆ ನೀನೆ ತಿಂದ್ರೆ... ನೀನೇ ಬೆದೆ ಹತ್ತಿ ಕುಣಿಯಕೆ ಸುರುಹಚ್ಚಿಕೊಳ್ತೀಯ ನೋಡು. ದನಿನಾಸ್ಪತ್ರೆಯವರನ್ನ ಬೈಬೇಡ ಆಮ್ಯಾಲೆ. (ಎಲ್ಲರೂ ನಗುವರು)

ರೈತ ೩: ಇಲ್ಲ ಬಿಡಿ. ಎಮ್ಮೆ ಮಾತ್ರೆ ನಾನ್ಯಾಕೆ ನುಂಗನ?, ರೈತ ಮಹಿಳೆ: ನಮ್ಮ ಹಸು ಹೀಟಿಗೆ ಬಂದಿತ್ತು ಅಂತ ಹಿಡುಕೊಂಡು ಬಂದಿದ್ದೆ, ನೀವು ಇಂಜೆಕ್ಷನ್ ಮಾಡಿದ್ರಿ. ನಾನು ಹೋಗ್ ಬೌದ?, ಪ.ವೈ: ಹೌದು, ಹಸು ಬೆದೆಗೆ ಬಂದ ಕೂಡ್ಲೆ ಆಸ್ಪತ್ರೆಗೆ ತಂದು ಬಿಟ್ಟಿದಿಯಮ್ಮ, ಇನ್ನೊಂದು ಸಲ ವೀರ್ಯ ಕೊಡೋದು ಒಳ್ಳೇದು. ಸಾಯಂಕಾಲ ಹಿಡಿದು ಕೊಂಡು ಬಂದು ವೀರ್ಯ ಕೊಡಿಸ್ಕೊಂಡು ಹೋಗಮ್ಮ

ರೈತ ಮಹಿಳೆ: ಸಾಯಂಕಾಲ ವೀರ್ಯ ಕೊಡೋದಿಕ್ಕೆ ಹಸುವನ್ನು ಹಿಡಕೊಂಡು ಬರ್ಬೇಕೋ ಅಥವಾ ನಾನೊಬ್ಬಳೆ ಬಂದರೆ ಸಾಕೊ ಸಾರ್?, ರೈತ: ಥೊ ಥೊ ಥೋ! ವೀರ್ಯ ಕೊಡೋದು ಹಸುಗೆ. ಹಸುವನ್ನೂ ಹಿಡಿಕೊಂಡು ಬಾರವ್ವ, ರೈತ ಮಹಿಳೆ: ಸರಿ ಆಯ್ತು

(ಅಷ್ಟರಲ್ಲಿ ೩೦-೩೫ ವರ್ಷದ ಒಬ್ಬ ರೈತ ಸೈಕಲಿನಲ್ಲಿ ಸ್ಪೀಡಾಗಿ ಬಂದು ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿ ವೈದ್ಯರ ಎದುರು ನಿಲ್ಲುತ್ತಾನೆ. ಅಲ್ಲಲ್ಲಿ ಹರಿದಿರುವ ನೀಲಿ ಬಣ್ಣದ ಅಗ್ಗದ ಬನಿಯನ್ ತೊಟ್ಟು ತೇಪೆ ಹಾಕಿದ ಚಡ್ಡಿ ತೊಟ್ಟಿದ್ದಾನೆ. ದೂರದಿಂದ ಸೈಕಲ್ ತುಳಿದಿರುವುದರಿಂದ ಮೈಮೇಲೆಲ್ಲ ಬೆವರು ಹರಿಯುತ್ತಿದೆ. ತಲೆ ಕೆದರಿದೆ. ವಿನೀತ ಭಾವದಿಂದ ವೈದ್ಯರಿಗೆ ಕೈಮುಗಿದು ನಿಲ್ಲುತ್ತಾನೆ.)

ನಂಜಪ್ಪ: ನಮಸ್ಕಾರ ದೇವ್ರು. ನನ್ನೆಸ್ರು ನಂಜ ಅಂತ. ಇಲ್ಲೇ ಹುಲ್ಲೇನಹಳ್ಳಿಯಲ್ಲಿ ನನ್ನದೊಂದು ಮೂರು ವರ್ಷದ ಹೋರಿ ಕರುಗೆ ಹುಶಾರಿಲ್ಲ. ಕೂಡ್ಲೆ ಬನ್ನಿ ದೇವ್ರು.

ಪ.ವೈ: ಏನಾಗಿದೆಯಪ್ಪ ಹೋರಿಗೆ?

ನಂಜಪ್ಪ: ನಿನ್ನೆ ಸಾಯಂಕಾಲ ಕುಂಟೋದಿಕ್ಕೆ ಪ್ರಾರಂಭಿಸ್ತು ದೇವ್ರು. ಎಡಚಪ್ಪೆಯಲ್ಲಿ ಊತ ಕಾಣಿಸಿ ಕೊಂಡಿದೆ. ನಿನ್ನೆ ಸಾಯಂಕಾಲದಿಂದಾನೂ ಏನೂ ತಿಂದಿಲ್ಲ, ಕುಡಿದಿಲ್ಲ, ಮೆಲುಕು ಹಾಕಿಲ್ಲ, ಮೇಲಕ್ಕೆ ಎದ್ದಿಲ್ಲ. ಅಡ್ಡತಲೆಹಾಕಿ ಮಲಗಿ ಬಿಟ್ಟಿದೆ. ಮನೆಯಲ್ಲಿ ನಾವ್ಯಾರೂ ರಾತ್ರಿ ಇಡೀ ಮಲಗಿಲ್ಲ ದೇವ್ರು