ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಟೊಮ್ಯಾಟೋದಲ್ಲಿ ಹೂವು ಉದುರುವಿಕೆ

ಡಾ. ಬಿ.ಸಿ.ಹನುಮಂತಸ್ವಾಮಿ
೯೪೮೦೮ ೩೮೯೭೬
1

ಟೊಮಾಟೊದಲ್ಲಿ ಹೂವುಗಳು ಕಾಯಿ ಆಗುವ ಮೊದಲೇ ಉದುರಿಹೋಗುವ ಮೂಲಕ ಟೊಮಾಟೊ ಬೆಳೆಯ ಇಳುವರಿ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಟೊಮಾಟೊದಲ್ಲಿ ಶೇ.೯೮ ರಷ್ಟು ಹೂಗಳು ಸ್ವಯಂ ಪರಾಗಸ್ಪರ್ಶವನ್ನು (Self Pollination) ಹೊಂದುತ್ತವೆ. ಈ ಪರಾಗಸ್ಪರ್ಶ ಕ್ರಿಯೆಯು ಮುಂಜಾನೆ ೮ ಗಂಟೆಯಿಂದ ೧೧ ರವರೆಗೂ ನಡೆಯುತ್ತದೆ. ಪರಾಗಸ್ಪರ್ಶ ಕ್ರಿಯೆ ಆದ ೯೬ ಗಂಟೆಗಳ ನಂತರ ಕಾಯಿಕಚ್ಚಲು ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ರೈತರು ಹೂವು ಉದುರುವ ಸಮಸ್ಯೆಯನ್ನು ಎದುರಿಸುತ್ತಾರೆ

ಕಾರಣಗಳು: ೧) ವಾತಾವರಣದಲ್ಲಿ ಏರುಪೇರು: ಅಂದರೆ ತಂಪಾದ ರಾತ್ರಿ (೧೨o ಸೆ.ಗಿಂತ ಕಡಿಮೆ) ಅಥವಾ ಅತಿಯಾದ ಹಗಲಿನ ತಾಪಮಾನ (೩೦o ಸೆ.ಗಿಂತ ಹೆಚ್ಚು) ಪುಷ್ಪರೇಣುವನ್ನು ಒಣಗಿಸಿ, ಪುಷ್ಪಧೂಳಿಯ ಶಕ್ತಿಯನ್ನೇ ನಂದಿಸಿ ಉದುರುವಂತೆ ಮಾಡುತ್ತದೆ. ಕಾಯಿಕಟ್ಟಲು ಟೊಮಾಟೊ ಹೂಗಳಿಗೆ ಬೇಕಾದ ಹಗಲಿನ ತಾಪಮಾನ ೨೧-೨೯o ಸೆ.. ೨) ಕಳಪೆ ಪರಾಗಸ್ಪರ್ಶ: ತಾಪಮಾನದಲ್ಲಿ ಏರಿಳಿತ ಉಂಟಾದಾಗ, ಪರಾಗಸ್ಪರ್ಶದ ಕೀಟಗಳು ಪರಾಗಸ್ಪರ್ಶ ಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೂವುಗಳು ಉದುರಿ ಹೋಗುತ್ತವೆ. ಅಂತೆಯೇ ವಾತಾವರಣದ ಆರ್ದ್ರತೆ ಶೇ. ೪೦-೭೦ ಇಲ್ಲದಿದ್ದರೆ, ಪರಾಗರೇಣುಗಳು ಹೂಗಳಿಂದ ಬರದೇ ಇರಬಹುದು ಅಥವಾ ಅಂಟು ದ್ರಾವಣವಿಲ್ಲದೇ ಇರಬಹುದು. ೩) ಒತ್ತಡ: ಸಾಮಾನ್ಯವಾಗಿ ಟೊಮಾಟೊ ಗಿಡಗಳು ಆಳವಾದ ಬೇರಿನ ವ್ಯವಸ್ಥೆಯನ್ನು ಹೊಂದಿವೆ. ಅತೀ ಕಡಿಮೆ ನೀರಿನ ವ್ಯವಸ್ಥೆಯನ್ನು ಟೊಮಾಟೊ ಗಿಡಗಳಿಗೆ ನೀಡಿದ್ದಲ್ಲಿ, ಗಿಡಗಳ ಬೇರುಗಳು ದುರ್ಬಲಗೊಂಡು, ಒತ್ತಡದ ಛಾಯೆ ಮೂಡಿಸಿ, ಗಿಡಗಳಿಂದ ಹೂಗಳು ಉದುರುವಂತೆ ಮಾಡುತ್ತವೆ. ೪) ಅನುಚಿತ ಪೋಷಣೆ: ಟೊಮಾಟೊ ಬೆಳೆಗೆ ಹೆಚ್ಚಿನ ಅಥವಾ ಕಡಿಮೆ ಪ್ರಮಾಣದಲ್ಲಿ ಸಾರಜನಕಭರಿತ ಗೊಬ್ಬರ ನೀಡುವುದರಿಂದ ಸಸಿಗಳು ಕೇವಲ ಎಲೆಗಳ ವೃದ್ಧಿ (vegeಣಚಿಣive gಡಿoತಿಣh) ಮಾಡುತ್ತವೆಯೇ ಹೊರತು ಹಣ್ಣುಗಳ ವೃದ್ಧಿಯಾಗುವುದಿಲ್ಲ. ೫) ಗಿಡದಲ್ಲಿ ಹೆಚ್ಚು ಹೂವುಗಳ ಕಟ್ಟುವಿಕೆ: ಆರೋಗ್ಯಕರ ಟೊಮಾಟೊ ಸಸ್ಯವು ಹೆಚ್ಚು ಹೂವುಗಳನ್ನು ಹೊಂದಿದ್ದರೆ, ಆಹಾರದಲ್ಲಿ ಪೈಪೋಟಿ ಉಂಟಾಗಿ, ಅನೇಕ ಹೂಗಳು ಉದುರಿಹೋಗುತ್ತವೆ

4

ಹೂವು ಉದುರುವಿಕೆಯ ನಿಯಂತ್ರಣ : ವಾತಾವರಣದ ತಾಪಮಾನ ಅಥವಾ ಆರ್ದ್ರತೆಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಆದರೆ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ಗಿಡದಲ್ಲಿ ಹೂ ಕಟ್ಟಿ ಕಾಯಿ ಕಟ್ಟುವಂತೆ ಮಾಡಬಹುದು. ೧. ಕೀಟಗಳನ್ನು ಆಕರ್ಷಿಸುವ ಬಲೆ ಬೆಳೆಯಾದ ಆಫ್ರಿಕನ್ ಚೆಂಡುಹೂವನ್ನು ಪ್ರತಿ ಹದಿನಾರು ಟೊಮಾಟೊ ಸಾಲುಗಳಿಗೆ ಒಂದು ಸಾಲು ಬೆಳೆಯುವುದರಿಂದ ಹಣ್ಣು ಕೊರಕದ ಬಾಧೆಯನ್ನು ಕಡಿಮೆ ಮಾಡುವುದರ ಜೊತೆಗೆ ಸಸಿಗಳಲ್ಲಿ ಪರಾಗಸ್ಪರ್ಶ ಕ್ರಿಯೆಯನ್ನು ಹೆಚ್ಚಿಸಬಹುದು. ೨. ಮಣ್ಣು ಪರೀಕ್ಷೆಯ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಸಾರಜನಕ, ರಂಜಕ, ಪೊಟ್ಯಾಷ್ ರಸಗೊಬ್ಬರ ನೀಡಬೇಕು. ಅಂತೆಯೇ ಪ್ರತಿ ಹೆಕ್ಟೇರ್ಗೆ ೧೧೫:೧೦೦:೬೦ ಕಿ.ಗ್ರಾಂ (ಸಾ.ರಂ.ಪೋ) ತಳಿಗಳಿಗೆ ಹಾಗೂ ೨೫೦:೨೫೦:೨೫೦ ಕಿ.ಗ್ರಾಂ (ಸಾ.ರಂ.ಪೊ) ಸಂಕರಣ ತಳಿಗಳಿಗೆ ಹಾಕಬೇಕು. ಒಟ್ಟಿನಲ್ಲಿ ಸಮತೋಲಿತ ರಸಗೊಬ್ಬರ ಬಳಕೆ ಮಾಡಿದಲ್ಲಿ ಹೂ ಉದುರುವಿಕೆಯ ಸಮಸ್ಯೆ ಕಡಿಮೆ ಮಾಡಬಹುದು. ೩. ಹೂ ಬಿಡುವ ಹಂತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಪೂರೈಸಿದಲ್ಲಿ ಬೇರುಗಳು ಯಾವುದೇ ಒತ್ತಡಕ್ಕೊಳಗಾಗದೇ ಬಲವಾದ ಬೇರುಗಳನ್ನು ಹೊಂದಿ, ಹೂ ಉದುರದಂತೆ ನೋಡಿಕೊಳ್ಳುತ್ತವೆ. ೪. ಸಸಿಗಳಲ್ಲಿ ಹೆಚ್ಚಿನ ಹೂವುಗಳಿದ್ದಲ್ಲಿ, ಕೆಲವೊಂದು ಆರೋಗ್ಯವಲ್ಲದ ಹೂವುಗಳನ್ನು ಚಿವುಟಿ ಹಾಕುವುದರ ಮೂಲಕ ಆ ಹೂವುಗಳು ಆರೋಗ್ಯಕರ ಹೂವುಗಳ ಜೊತೆ ಆಹಾರ ಪೈಪೋಟಿ ಬರದಂತೆ ಮಾಡಿ, ಹೂ ಉದುರದಂತೆ ಕಾಪಾಡಿಕೊಳ್ಳಬಹುದು. ೫. ವಾತಾವರಣಕ್ಕೆ ಸೂಕ್ತವಿರುವಂತೆ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು