ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ವನೌಷಧಿ

ಗರಿಕೆ

-

ಇದರಲ್ಲಿ ಶ್ವೇತ, ನೀಲ, ಪುರುಷ ಮತ್ತು ಸ್ತ್ರೀದೂರ್ವಾಗಳೆಂದು ಬೇರೆ ಬೇರೆ ಭೇದಗಳುಂಟು. ಆದರೆ ಈ ಎಲ್ಲದರ ಗುಣಧರ್ಮಗಳೂ ಒಂದೇ ಆಗಿರುತ್ತವೆ. ಗರಿಕೆಯು ಶಾಮಕವೂ, ವ್ರಣನಾಶಕವೂ, ವೇದನಾಹರವೂ, ಪಿತ್ತನಿವಾರಕವೂ ಮತ್ತು ಮೂತ್ರಲವೂ ಆಗಿರುತ್ತದೆ. ಇದರಿಂದ ಪ್ರದರ, ನೇತ್ರ ರೋಗ, ಜ್ವರ, ಮೇಹ, ಮೂಲವ್ಯಾಧಿ, ಚರ್ಮವ್ಯಾಧಿ ಮತ್ತು ದುಷ್ಟವ್ರಣಗಳೂ ಕೂಡ ಪರಿಹಾರವಾಗುತ್ತವೆ. ಇದರ ಬೇರು, ಹುಲ್ಲು ಕೂಡ ಔಷಧದ್ರವ್ಯಗಳಾಗಿರುತ್ತವೆ; ಸ್ವರಸ, ಕಷಾಯ ಮತ್ತು ಲೇಪಗಳ ರೂಪದಲ್ಲಿ ಇದರ ಉಪಯೋಗವಾಗುತ್ತದೆ. ಹೊತ್ತಿಗೆ ೨, ೩ ತೊಲ ಸ್ವರಸ, ೫, ೬ ತೊಲ ಕಷಾಯಗಳನ್ನು ರೋಗೋಕ್ತ ಅನುಪಾನಗಳೊಡನೆ ವಿಧಿಸಬೇಕು

ಕನ್ನಡ/ಸಂಸ್ಕೃತ/ಹಿಂದಿ/ತಮಿಳು/ತೆಲುಗು/ಇಂಗ್ಲೀಷ್