ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಸಜ್ಜೆಗೆ ಕೇದಿಗೆ ರೋಗ

ಡಾ.ಪ್ರೇಮ.ಜಿ.ಯು
7259627674
1

ಸಜ್ಜೆಯ ಕೇದಿಗೆರೋಗ ಅಥವಾ ಹಸಿರು ತೆನೆ ರೋಗವು ಸ್ಕ್ಲೀರೊಸ್ಪೋರಾ ಗ್ರಾಮಿನಿಕೊಲಾ ಎಂಬ ಶಿಲೀಂಧ್ರದಿಂದ ಬರುತ್ತದೆ. ಈ ರೋಗಕ್ಕೆ ತುತ್ತಾದ ಎಲೆಗಳ ಮೇಲ್ಭಾಗದಲ್ಲಿ ಉದ್ದನೆಯ ಹಳದಿ ಪಟ್ಟಿಗಳು ಕಾಣಿಸಿಕೊಳ್ಳುತ್ತವೆ. ಎಲೆಯ ಕೆಳಭಾಗದಲ್ಲಿ ಬಿಳಿಯ ತುಪ್ಪಟದಂತಹ ಶಿಲೀಂಧ್ರದ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ. ರೋಗಬಾಧಿತ ಎಲೆಗಳು ಹಳದಿ ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗಿ, ಕ್ರಮೇಣ ಎಲೆಗಳು ಸೀಳುತ್ತವೆ. ರೋಗಪೀಡಿತ ಗಿಡಗಳಲ್ಲಿ ಹೆಚ್ಚು ಕವಲುಗಳನ್ನು ಕಾಣಬಹುದು. ತೆನೆಗಳು ಭಾಗಶಃ ಅಥವಾ ಪೂರ್ತಿಯಾಗಿ ಹಸಿರು ಬಣ್ಣದ, ಸಣ್ಣದಾದ, ತಿರುಚಿದ ಎಲೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಆದ್ದರಿಂದ ತೆನೆಗಳು ಕಾಳನ್ನು ಕಟ್ಟುವುದಿಲ್ಲ. ಇದರಿಂದ ರೋಗ ಬಂದಂತಹ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಮತ್ತು ಕಾಳಿನ ಇಳುವರಿ ಕಡಿಮೆಯಾಗುತ್ತದೆ. ಈ ರೋಗವು ರೋಗಪೀಡಿತ ಬೀಜ, ಮಣ್ಣು ಮತ್ತು ಗಾಳಿಯ ಮೂಲಕ ಹರಡುತ್ತದೆ

ನಿರ್ವಹಣಾ ಕ್ರಮಗಳು : ರೋಗ ತಗುಲಿದ ಗಿಡಗಳನ್ನು ಬೇರು ಸಮೇತ ಕಿತ್ತು ನಾಶಪಡಿಸಬೇಕು, ಮಾಗಿ ಉಳುಮೆಯನ್ನು ಮಾಡಬೇಕು, ರೋಗಮುಕ್ತ ಬೀಜಗಳನ್ನು ರೋಗರಹಿತ ತಾಕುಗಳಿಂದ ಆಯ್ಕೆ ಮಾಡಿ ಬಿತ್ತಬೇಕು, ೩ ಗ್ರಾಂ ಮೆಟಾಲಾಕ್ಸಿಲ್ ಎಮ್.ಜೆಡ್. ಶಿಲೀಂಧ್ರನಾಶಕವನ್ನು ೧ ಕೆ.ಜಿ. ಬೀಜಕ್ಕೆ ಲೇಪನೆ ಮಾಡಿ ಬಿತ್ತಬೇಕು., ೨ ಗ್ರಾಂ ಮೆಟಾಲಾಕ್ಸಿಲ್ ಅಥವಾ ೨ ಗ್ರಾಂ ಮ್ಯಾಂಕೊಜೆಬ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು