ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

೨೦೨೨ರ ಒಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಗಳು ಸಾಧನೆಗಾಗಿ ನಿರ್ಣಯ ನವಭಾರತ ಚಳವಳಿ (೨೦೧೭-೨೦೨೨)

ಪವನ್, ಎಂ. ಪಿ
೯೬೩೨೪೬೭೭೩೫

ಕಠಿಣವಾದ ಭೌಗೋಳಿಕ ಕ್ಷೇತ್ರ ಆರ್ಥಿಕ ತಾರತಮ್ಯ ಹೊಂದಿರುವಂತಹ ಪರಿಸ್ಥಿತಿಯಲ್ಲಿ ಸಮಾಜದ ದುರ್ಬಲ ವರ್ಗದ ಜನರಿಗೆ ಆಹಾರವನ್ನು ಒದಗಿಸುವುದು ಒಂದು ಸವಾಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಉಪಯುಕ್ತವಾದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುಖಾಂತರ ಯಶಸ್ಸಿನ ಹೆಜ್ಜೆಯತ್ತ ದಾಪುಗಾಲು ಹಾಕುತ್ತಿದೆ. ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಇವರ ಮಾರ್ಗದರ್ಶನದಲ್ಲಿ ೨೦೨೨ರ ಒಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಗಳನ್ನು ಭಾರತ ಸರಕಾರದ ಕೃಷಿ ಹಾಗೂ ರೈತರ ಕಲ್ಯಾಣ ಮಂತ್ರಾಲಯವು ಸಿದ್ಧಪಡಿಸಿದೆ. ಇದರ ವಿವರಗಳು ಈ ಕೆಳಗಿನಂತಿವೆ. (೧) ನೀರಾವರಿ ಸಂಪನ್ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ಕ್ಷೇತ್ರವನ್ನು ಹೆಚ್ಚಿಸುವುದು, (೨) ಸುಧಾರಿತ ಬೀಜ, ಸಸಿಗಳ ಬಳಕೆ, ಸಾವಯವ ಕೃಷಿ ಅಳವಡಿಕೆ ಹಾಗೂ ಮಣ್ಣು ಆರೋಗ್ಯ ಕಾಪಾಡುವ ಮುಖಾಂತರ ಉತ್ಪಾದಕತೆ ಹೆಚ್ಚಿಸುವುದು, (೩) ಕೊಯ್ಲೋತ್ತರ ನಷ್ಟವನ್ನು ಕಡಿಮೆ ಮಾಡಲು ಗೋದಾಮು ಹಾಗೂ ಶೀತಲ ಗೃಹ ಸೌಲಭ್ಯವನ್ನು ಬಲಪಡಿಸುವುದು, (೪) ಮೌಲ್ಯವರ್ಧನೆಯ ಮುಖಾಂತರ ಕೃಷಿ ಉತ್ಪಾದನೆಯ ಆಹಾರ ಸಂಸ್ಕರಣೆ ಮಾಡುವುದು, (೫) ವಿದ್ಯುನ್ಮಾನ ರಾಷ್ಟ್ರೀಯ ಕೃಷಿ ಮಾರುಕಟ್ಟೆ (e-ಓಂಒ) ಮುಖಾಂತರ ಕೃಷಿ ಮಾರುಕಟ್ಟೆಯ ನೂನ್ಯತೆಗಳನ್ನು ಸರಿಪಡಿಸುವುದು, (೬) ಕೃಷಿಕ್ಷೇತ್ರದಲ್ಲಿ ನಷ್ಟವನ್ನು ಕಡಿಮೆ ಮಾಡಲು ಹಾಗೂ ಕೃಷಿ ಬೆಳವಣಿಗೆ ಹೆಚ್ಚಿಸಲು ಸಾಂಸ್ಥಿಕ ಸಾಲದ ವ್ಯವಸ್ಥೆಯನ್ನು ಬಲಡಿಸುವುದು, (೭) ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕೋಳಿಸಾಕಾಣಿಕೆ, ಜೇನು ಕೃಷಿ ಮೀನುಗಾರಿಕೆ, ಕೃಷಿ ಅರಣ್ಯ ಹಾಗೂ ಕೃಷಿಪದ್ಧತಿಗಳನ್ನು ಬಲಪಡಿಸುವುದು, ಸರಕಾರವು ರಾಷ್ಟ್ರೀಯ ಗೋಕುಲ ಮಿಶನ್, ಹೈನು ಅಭಿವೃದ್ಧಿ, ನೀಲಿ ಕ್ರಾಂತಿ, ಕೃಷಿ ಅರಣ್ಯ, ಜೇನು ಕೃಷಿ, ಕೋಳಿ ಸಾಕಾಣಿಕೆ ಹಾಗೂ ಸೋಲಾರ್ ಸೆಲ್ ಯೋಜನೆಗಳನ್ನು ಹಮ್ಮಿಕೊಂಡಿದೆ. ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿರಿ : ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆಗೆ, ಶಿವಮೊಗ್ಗ ಜಿಲ್ಲೆ, ತೋಟಗಾರಿಕೆ ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ ಜಿಲ್ಲೆ , ಉಪ-ನಿರ್ದೇಶಕರು, ಪಶು ಸಂಗೋಪನೆ ಹಾಗೂ ಪಶು ವೈದ್ಯಕೀಯ ಇಲಾಖೆ, ಶಿವಮೊಗ್ಗ , ಉಪ-ನಿರ್ದೇಶಕರು, ರೇಷ್ಮೆ ಇಲಾಖೆ, ಶಿವಮೊಗ್ಗ ಜಿಲ್ಲೆ , ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಶಿವಮೊಗ್ಗ ಜಿಲ್ಲೆ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ಶಿವಮೊಗ್ಗ ಜಿಲ್ಲೆ , ಐ.ಸಿ.ಎ.ಆರ್. - ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗ