ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಚಿತ್ರ ಲೇಖನ

ಹೊಂಗೆಯ ಚಿಟ್ಟೆ

image_
ಡಾ. ಎಸ್. ಟಿ. ಪ್ರಭು,
9448182225
12

ಹೊಂಗೆ (ಹುಲುಗುಲ) ಒಂದು ಅತ್ಯಂತ ಉಪಯೋಗಿ ಮರ. ನೆರಳಿಗಾಗಿ ರಸ್ತೆಯ ಬದಿಯಲ್ಲಿ ಬೆಳೆಸುವುದನ್ನು ಕಾಣುತ್ತೇವೆ. ಇತ್ತೀಚಿಗೆ ಜೈವಿಕ ಇಂಧನ ಸಸ್ಯವಾಗಿ ಬೆಳೆಯುವುದರಿಂದ ಇದರ ಬೇಡಿಕೆ ಇನ್ನೂ ಹೆಚ್ಚು. ಹೊಂಗೆ ಮರವನ್ನು ಬಾಧಿಸುವ ಕೀಟಗಳಲ್ಲಿ ಹೊಂಗೆ ಚಿಟ್ಟೆ ಪ್ರಮುಖವಾದುದು. ಹಸೋರಾ ಕ್ರೋಮಸ್ (Hasora chromus) ಎಂಬ ವೈಜ್ಞಾನಿಕ ಹೆಸರುಳ್ಳ ಹೊಂಗೆ ಚಿಟ್ಟೆ (ಪಾತರಗಿತ್ತಿ) ಯನ್ನು ಕಾಮನ್ ಬ್ಯಾಂಡೆಡ್ ಆಲ್ ಎಂದು ಕರೆಯುತ್ತಾರೆ. ಇದು ಸ್ಕಿಪ್ಪರ್ ಬಟರ್ಫ್ಲೈ ಗುಂಪಿಗೆ ಸೇರುವುದರಿಂದ ಇದನ್ನು ಹೆಸ್ಪೆರಿಡೆ ಕುಟುಂಬದಲ್ಲಿ ವರ್ಗೀಕರಿಸಲಾಗಿದೆ. ಇದು ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಮಳೆಗಾಲ ಪ್ರಾರಂಭದೊಂದಿಗೆ ಕಾಣಿಸಿಕೊಳ್ಳುವ ಈ ಚಿಟ್ಟೆಯು ಹೊಂಗೆ ಮರದ ಎಲೆಗಳ ಮೇಲೆ ತನ್ನ ಮೊಟ್ಟೆಗಳನ್ನು ಒಂದೊಂದಾಗಿ ಇಡುತ್ತದೆ. ಕೆಲವೊಮ್ಮೆ ಚಿಟ್ಟೆಯ ಮರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದು ವಿಪರೀತ ಹಾನಿ ಮಾಡುತ್ತವೆ. (ಇತ್ತೀಚಿಗೆ ಬೆಂಗಳೂರಿನಲ್ಲಿ ಮಾರ್ಚ ೨೦೧೬ ರಲ್ಲಿ ಕಂಡುಬಂದಿದೆ) ಈ ಚಿಟ್ಟೆಯು ಹೊಂಗೆ (ಹುಲುಗಲು) ಗಿಡವನ್ನಲ್ಲದೇ ಎಣ್ಣೆ ಬೆಳೆಯಾದ ಹರಳು (ಔಡಲ), ಮತ್ತು ಔಷಧೀಯ ಸಸ್ಯಗಳಾದ ಹಂದಿಬಳ್ಳಿ ಮತ್ತು ಕೋರ ಎಂಬ ಸಸ್ಯಗಳನ್ನೂ ಸಹ ಹಾನಿ ಮಾಡುತ್ತದೆ. ಕಪ್ಪು ಬಣ್ಣದ ಮರಿಹುಳುಗಳು ಪ್ರಾರಂಭದಲ್ಲಿ ಚುರುಕಾಗಿದ್ದು ಬೆಳೆದಂತೆಲ್ಲಾ ಮಂದವಾಗುತ್ತವೆ. ಮರಿಗಳು ಎಲೆಗಳನ್ನು ತಿನ್ನುವಾಗ ಎಲೆಗಳನ್ನು ಸುತ್ತಿ ಒಂದು ಕವಚವನ್ನು ಮಾಡಿಕೊಳ್ಳುತ್ತವೆ ಮತ್ತು ಸಾಯಂಕಾಲ ಕತ್ತಲು ಆವರಿಸಿದ ಮೇಲೆ ಎಲೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಕೆಲವೊಮ್ಮೆ, ಹೊಂಗೆ ಮರಗಳ ಎಲೆಗಳನ್ನು ಸಂಪೂರ್ಣ ತಿಂದು ಬರಿದು ಮಾಡುತ್ತವೆ. ಪೂರ್ಣ ಬೆಳೆದ ಮರಿಗಳು ಎಲೆಗಳಿಂದ ರಚಿಸಿದ ಗೂಡುಗಳಲ್ಲಿ ಕೋಶಾವಸ್ಥೆ ಹೊಂದುತ್ತವೆ. ೮-೧೦ ದಿನಗಳಲ್ಲಿ ಪ್ರೌಢ ಚಿಟ್ಟೆಗಳು ಹೊರಬರುತ್ತವೆ

ನಿರ್ವಹಣೆ:೧.ಮರಿಹುಳುಗಳನ್ನು ಕೈಯಿಂದ ಆರಿಸಿ ಸಂಗ್ರಹಿಸಿ ನಾಶಮಾಡುವುದು,೨.ಕೀಟನಾಶಕಗಳಾದ ಕ್ಲೋರ್ಪೈರಿಫಾಸ್ ಅಥವಾ ಪ್ರೊಫೆನೋಫಾಸ್ನ್ನು ಪ್ರತಿ ಒಂದು ಲೀಟರ್ ನೀರಿಗೆ ೨ ಮಿ.ಲಿ. ಯಂತೆ ಬೆರೆಸಿ ಎಲೆಗಳ ಮೇಲೆ ಸಿಂಪರಿಸುವುದು

5