ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಮೌಲ್ಯವರ್ಧನೆ

ಟೊಮಾಟೊ ಹಣ್ಣಿನ ಸಂಸ್ಕರಣೆ: ಟೊಮಾಟೊ ಜಾಮ್

ಕಾಂತರಾಜ್ ವೈ.,
9731731842
1

ಟೊಮಾಟೊ ಬೆಳೆ ಪ್ರಪಂಚದ ಪ್ರಮುಖ ತರಕಾರಿ ಬೆಳೆಗಳಲ್ಲಿ ಒಂದಾಗಿದ್ದು, ಭಾರತದಲ್ಲಿ ಸುಮಾರು ೫.೪೦ ಲಕ್ಷ ಹೆ. ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಇದರ ಸರಾಸರಿ ಇಳುವರಿಯು ಪ್ರತಿ ಹೆ.ಗೆ ೧೪ ಟನ್ ಟೊಮಾಟೊ ಹಣ್ಣುಗಳಲ್ಲಿ ಉಪಯುಕ್ತ ಖನಿಜ ಪದಾರ್ಥ, ಸಾವಯವ ಆಮ್ಲಗಳ ಜೊತೆಗೆ ವಿಟಮಿನ್ಗಳು, ಅದರಲ್ಲೂ ಪ್ರಮುಖವಾಗಿ ವಿಟಮಿನ್ ಎ ಮತ್ತು ಸಿ ಅನ್ನಾಂಗಗಳು (ಜೀವಸತ್ವ ಎ-೧೪೯೯.೪೦ ಐಯು, ಜೀವಸತ್ವ ಸಿ-೨೪.೬೬ ಮಿ.ಗ್ರಾಂ, ಕಾಬ್ರೋಹೈಡ್ರೇಟ್ಸ್-೭.೦೦ ಗ್ರಾಂ) ಅಧಿಕವಾಗಿರುವುದರಿಂದ ಆರೋಗ್ಯದ ದೃಷ್ಟಿಯಿಂದಲೂ ಇದರ ಉಪಯೋಗ ಹೆಚ್ಚಿನ ಪ್ರಾಮುಖ್ಯತೆ ಪಡೆದಿರುತ್ತದೆ. ಟೊಮಾಟೊ ಬೆಳೆಯುವುದರಲ್ಲಿ ಬೇರೆ ದೇಶಗಳಂತೆ ಸರಿಯಾದ ಬೆಳೆ ಹಂಚಿಕೆ ಏರ್ಪಾಟನ್ನು ನಮ್ಮ ದೇಶದಲ್ಲಿ ಮಾಡುವುದರಿಂದ ವರ್ಷದ ಕೆಲವು ತಿಂಗಳುಗಳಲ್ಲಿ ಅಧಿಕ ಹಣ್ಣು ಮಾರುಕಟ್ಟೆಗೆ ಬಂದು ಬೆಲೆ ಕುಸಿತದ ಪ್ರಮಾದಗಳು ಉಂಟಾಗುತ್ತಿರುತ್ತವೆ (ನಷ್ಟ ಶೇಕಡಾ ೧೩). ಅಧಿಕವಾಗಿ ಉತ್ಪಾದನೆಯಾದ ಹಣ್ಣುಗಳನ್ನು ಸೂಕ್ತ ಸಂಸ್ಕರಿತ ಪದಾರ್ಥಗಳಾಗಿ ಮಾರ್ಪಡಿಸುವುದರಿಂದ ಬೆಲೆ ಕುಸಿತದ ಅಪಾಯಗಳನ್ನು ತಡೆಯುವುದಲ್ಲದೆ ವರ್ಷದ ಎಲ್ಲಾ ಕಾಲದಲ್ಲೂ ಟೊಮಾಟೊ ಪದಾರ್ಥಗಳನ್ನು ದೊರೆಯುವಂತೆ ನೋಡಿಕೊಳ್ಳಬಹುದಾಗಿದೆ.ಟೊಮಾಟೊ ಹಣ್ಣಿನಿಂದ ಸಂಸ್ಕರಿಸಿದ ಪದಾರ್ಥಗಳು: ಟೊಮಾಟೊ ಜಾಮ್ , ಟೊಮಾಟೊ ಕೆಚಪ್ ಮತ್ತು ಸಾಸ್ , ಟೊಮಾಟೊ ಪಾನೀಯ, ಟೊಮಾಟೊ ಸೂಪ್, ಟೊಮಾಟೊ ಪೂರಿ , ಟೊಮಾಟೊ ಚಟ್ನಿ, ಟೊಮಾಟೊ ಪೇಸ್ಟ್, ಡಬ್ಬಿಗಳಲ್ಲಿ ಸಂಸ್ಕರಣೆ(ಕ್ಯಾನಿಂಗ್)

ಟೊಮಾಟೊ ಜಾಮ್, ಜಾಮ್ ತಯಾರಿಕೆಗೆ ಬೇಕಾದ ಸಾಮಗ್ರಿಗಳು: ಹಣ್ಣಿನ ತಿರುಳು - ೧ ಲೀಟರ್/೧ ಕೆ.ಜಿ, ಸಕ್ಕರೆ - ೭೫೦ - ೮೦೦ ಗ್ರಾಂ, ನಿಂಬೆ ಉಪ್ಪು - ೨.೫ ಗ್ರಾಂ, ಪೆಕ್ಟಿನ್ ಪುಡಿ - ೨.೫ ಗ್ರಾಂ

ತಯಾರಿಸುವ ವಿಧಾನ: ಇದಕ್ಕೆ ಆಯ್ಕೆ ಮಾಡಿದ ಹಣ್ಣುಗಳು ಪೂರ್ಣ ಕಾಯಿ ಅಥವಾ ಪೂರ್ಣ ಹಣ್ಣು ಆಗಿರಬಾರದು. ನಂತರ ಶುದ್ಧವಾದ ನೀರಿನಿಂದ ತೊಳೆದು ಸಿಪ್ಪೆ ತೆಗೆದು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಂಡು ಮಿಕ್ಸಿಯಲ್ಲಿ ಹಾಕಿ ಹಣ್ಣಿನ ತಿರುಳನ್ನು ಸಿದ್ಧಪಡಿಸಿ ಜರಡಿಯಿಂದ ಶೋಧಿಸಿ ಒಲೆಯ ಮೇಲೆ ಕಾಯಲು ಇಡಬೇಕು. ಈ ರೀತಿ ಕಾಯಲು ಇಟ್ಟು ಸ್ವಲ್ಪ ಸಮಯದ ನಂತರ ಕುದಿಯಲು ಪ್ರಾರಂಭವಾಗುತ್ತಿರುವಂತೆ ಶಿಫಾರಸ್ಸು ಮಾಡಿದ ಸಕ್ಕರೆಯನ್ನು ಸೇರಿಸಿ ಸತತವಾಗಿ ತಿರುವುತ್ತಿರಬೇಕು. ಪದಾರ್ಥವು ಘನರೂಪಕ್ಕೆ ಬರುವಂತೆ ಮಾಡಲು ಪೆಕ್ಟಿನ್ ಪುಡಿ ಸೇರಿಸಬೇಕು. ಪದಾರ್ಥ ಸಿದ್ಧವಾಗಿದೆಯೇ ಇಲ್ಲವೇ ಎಂಬುವುದನ್ನು ತಿಳಿಯಲು ಹಲವು ವಿಧಾನಗಳಿವೆ. ಸಿದ್ಧವಾದ ಜಾಮ್ ಅನ್ನು ಬಿಸಿನೀರಿನಲ್ಲಿ ನಿರ್ಜಲೀಕರಿಸಿದ ಸೀಸೆಗಳಿಗೆ ತುಂಬಿ ತಣ್ಣಾಗಲು ಬಿಟ್ಟು ನಂತರ ಮುಚ್ಚಳವನ್ನು ಸರಿಯಾಗಿ ಭದ್ರಪಡಿಸಿ, ಸರಿಯಾದ ರೀತಿಯಲ್ಲಿ ಶೇಖರಣೆ ಮಾಡಬೇಕು. ಹಣ್ಣುಗಳನ್ನು ಸಿಪ್ಪೆ ಸುಲಿದು ಬೀಜಗಳನ್ನು ಬೇರ್ಪಡಿಸಿ ಅದರ ತಿರುಳನ್ನು ಬೇರ್ಪಡಿಸಲು ಜರಡಿಯನ್ನು ಉಪಯೋಗಿಸಬೇಕು

5678910111213141516