ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಕೃಷಿ ಉದ್ಯಮದ ಮೂಲಕ ಆರ್ಥಿಕತೆಯನ್ನು ಸಾಧಿಸುತ್ತಿರುವ ಅನ್ನಪೂರ್ಣೇಶ್ವರಿ ರೈತ ಕೂಟ

ನವೀನ್, ಎನ್.ಈ
9964177474
1

ಉಡುಪಿ ತಾಲ್ಲೂಕು ಹಾಗೂ ಜಿಲ್ಲೆಯ ಕಾಳ್ತೂರು-ಸಂತೆಕಟ್ಟೆ ಗ್ರಾಮದ ರೈತರು ಸುಮಾರು ವರ್ಷಗಳಿಂದ ಕೃಷಿಯನ್ನು ಸಾಂಪ್ರದಾಯಕ ಪದ್ಧತಿಯಿಂದ ಮಾಡುತ್ತಿದ್ದು. ಸುಧಾರಿತ ಪದ್ಧತಿಗಳು ಹಾಗೂ ಹೊಸ ತಂತ್ರಜ್ಞಾನದ ಪರಿಚಯಕ್ಕಾಗಿ ಕೆಲವು ರೈತರು ಹತ್ತಿರದ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ಕೊಟ್ಟು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಾದ ಭತ್ತ, ಉದ್ದು, ಅಡಿಕೆ, ತೆಂಗು, ಕಾಳುಮೆಣಸು ಹಾಗೂ ತರಕಾರಿ ಬೆಳೆಗಳ ಮಾಹಿತಿಯನ್ನು ಪಡೆಯುತ್ತಿದ್ದರು. ಅವರ ಭೇಟಿ ಪ್ರತಿಫಲವೆನಿಸಿದಾಗ ದೂರವಾಣಿ ಮುಖಾಂತರ ಕೇಂದ್ರಕ್ಕೆ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು, ಅವರ ಆ ಶ್ರಮ ಹಾಗೂ ನಿರಂತರ ಸಂಪರ್ಕದಿಂದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ (ಓಂಃಂಖಆ) ಶ್ರೀ. ಪ್ರಸಾದ ರಾವ್, ಉಪ ನಿರ್ದೇಶಕರ ಪರಿಚಯವಾಗಿ ಅವರ ಸಹಾಯದೊಂದಿಗೆ ಸಿಂಡ್ ರೈತರ ಸೇವಾ ಸಂಘ ವತಿಯಿಂದ ಅನ್ನಪೂರ್ಣೇಶ್ವರಿ ರೈತ ಕೂಟ” ೨೦೧೨ರಲ್ಲಿ ಪ್ರಾರಂಭವಾಯಿತು. ಈ ಸಂಘದಲ್ಲಿ ೧೮ ಜನ ಸದಸ್ಯರಿದ್ದು ಇವರ ಮೂಲ ಕಸುಬು ವ್ಯವಸಾಯ. ಈ ಸಂಘದ ಅಧ್ಯಕ್ಷರಾಗಿ ಶ್ರೀ ಶೇಖರಶೆಟ್ಟಿ, ಕಾಳ್ತೂರು ಕೆಳಮನೆ ಕಾರ್ಯನಿರ್ವಹಿಸುತ್ತಿದ್ದು. ಈ ಸಂಘದ ಮೂಲ ಉದ್ದೇಶ, ಗ್ರಾಮದಲ್ಲಿ ರೈತರು ಕೃಷಿಯನ್ನು ಬಿಡಬಾರದು ಹಾಗೂ ರೈತರಲ್ಲಿ ಕೃಷಿಗೆ ಸಂಬಂಧಪಟ್ಟ ವೈಜ್ಞಾನಿಕ ಮಾಹಿತಿಯನ್ನು ತಿಳಿಸುವುದು.

3

ಈ ಕರಗತದೊಂದಿಗೆ ಸಂಘವು ಕಳೆದ ೫ ವರ್ಷದಲ್ಲಿ ಬೀಜೋಪಚಾರ, ಮಣ್ಣು ಪರೀಕ್ಷೆಗೆ ಮಣ್ಣು ತೆಗೆಯುವ ವಿಧಾನ, ಅಡಿಕೆ ಕೊಳೆ ರೋಗಕ್ಕೆ ಬೋರ್ಡೋ ದ್ರಾವಣ ತಯಾರಿಕೆ, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಸಮಗ್ರ ಬೆಳೆ ನಿರ್ವಹಣೆಯ ಬಗ್ಗೆ ರೈತ ಸಮುದಾಯದಲ್ಲಿ ತರಬೇತಿ ಹಾಗೂ ಜಾಗೃತಿಯನ್ನು ಮೂಡಿಸುತ್ತ ಬಂದಿದ್ದು ಇದರ ಪ್ರಯೋಜನವನ್ನು ಸುಮಾರು ೧೦೦೦ಕ್ಕೂ ಹೆಚ್ಚು ರೈತರು ಪಡೆದಿರುತ್ತಾರೆ. ಇವರ ಈ ಕಾರ್ಯಚಟುವಟಿಕೆಯನ್ನು ಕಂಡ ಕೃಷಿ ಮತ್ತು ತೋಟಗಾರಿಗೆ ವಿಶ್ವವಿದ್ಯಾಲಯ, ಶಿವಮೊಗ್ಗದ ಅಂಗ ಸಂಸ್ಥೆಯಾದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ ಬ್ರಹ್ಮಾವರ ಇವರು ಕೃಷಿ ಅಭಿವೃದ್ಧಿಗಾಗಿ ಕಾಳ್ತೂರು-ಸಂತೆಕಟ್ಟೆ ಗ್ರಾಮವನ್ನು ೨೦೧೩ ರಲ್ಲಿ ದತ್ತು ಗ್ರಾಮವಾಗಿ ಸ್ವೀಕರಿಸಿತು, ಇದರ ಯೋಜನೆಯಡಿಯಲ್ಲ್ಲಿ ರೈತರಿಗೆ ಸುಮಾರು ೪೦೦೦ ಸಾವಿರ ಗೇರು ಸಸಿಗಳನ್ನು ವಿತರಿಸುವುದರೊಂದಿಗೆ ರೂ.೧೩೦ ರಂತೆ ಒಂದು ಗಿಡಕ್ಕೆ ನಿರ್ವಹಣಾ ವೆಚ್ಚವನ್ನು ರೈತರಿಗೆ ಕೊಡಲಾಯಿತು. ಇದರ ಜೊತೆಗೆ ೨೦೦೦ ಅಂಗಾಂಶ ಬಾಳೆಗಿಡ, ವೈಜ್ಞಾನಿಕ ಬೆಳೆ ಉತ್ಪಾದನೆ ಹಾಗೂ ಬಹುಬೆಳೆ ಪದ್ಧತಿಯ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ರೈತರ ತಾಕಿನಲ್ಲಿ ಹಮ್ಮಿಕೊಳ್ಳಲಾಯಿತು. ಅನ್ನಪೂರ್ಣೇಶ್ವರಿ ರೈತ ಕೂಟ”ಸಂಘದ ವತಿಯಿಂದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ೨೦೧೬ ರಲ್ಲಿ ತೆಂಗು ಬೆಳೆಗಾರರ ಸೌಹಾರ್ದ ಸೊಸೈಟಿಯನ್ನು ಹುಟ್ಟುಹಾಕಿ ಉಡುಪಿ ಜಿಲ್ಲೆಯ ಕೃಷಿ ಇಲಾಖೆಯ ಸಹಾಯದೊಂದಿಗೆ ಭೂಸಮೃದ್ಧಿ ಯೋಜನೆಯಡಿಯಲ್ಲಿ ಬಾಡಿಗೆ ಆಧಾರಿತ ಸೇವಾ ಕೇಂದ್ರವನ್ನು ಶೇ.೭೫:೨೫ ರ ಅನುಪಾತದಲ್ಲಿ (ಕರ್ನಾಟಕ ಸರ್ಕಾರದಿಂದ ೭.೫ ಲಕ್ಷ : ಸೊಸೈಟಿ ವತಿಯಿಂದ ೨.೫ ಲಕ್ಷವನ್ನು) ಹಾಕಿ ಪ್ರಾರಂಭಿಸಲಾಯಿತು.

5

ಈ ಸೊಸೈಟಿಯಲ್ಲಿ ಒಟ್ಟು ೩೧ ಸಕ್ರಿಯ ಸದಸ್ಯರಿದ್ದು ಪ್ರತಿ ಸದ್ಯಸರಿಂದ ರೂ.೧೦,೦೦೦ವನ್ನು ಸಂಗ್ರಹಿಸಿ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಿಂದ ಬಂದ ಹಣವನ್ನು ಕೃಷಿ ಚಟುವಟಿಕೆಗೆ ಬೇಕಾಗುವ ಯಂತ್ರೋಪಕರಣಗಳಾದ ಟ್ರಾಕ್ಟರ್, ಪ್ರಾಥಮಿಕ ಹಾಗೂ ದ್ವೀತಿಯ ಸಾಗುವಳಿ ಉಪಕರಣಗಳು, ಭತ್ತ ನಾಟಿ ಯಂತ್ರ, ಔಷಧಿ ಸಿಂಪರಣೆ ಉಪಕರಣಗಳನ್ನು ಖರೀದಿಸಿ ಮತ್ತು ಅದರ ನಿರ್ವಹಣೆಯ ವ್ಯವಸ್ಥೆಯನ್ನು ಕಲ್ಪಿಸಿಕೊಂಡಿದ್ದಾರೆ. ಸೊಸೈಟಿಯ ಸದಸ್ಯರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಅತೀ ಕಡಿಮೆ ದರದಲ್ಲಿ ಬಾಡಿಗೆ ಕೊಡುವುದರ ಮೂಲಕ ತಮ್ಮ ಸೇವೆಯನ್ನು ಯಶ್ವಸಿಗೊಳಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಬಾಡಿಗೆ ಸೇವಾ ಕೇಂದ್ರದ ಮುಖಾಂತರ ರೂ.೧.೫ ಲಕ್ಷವನ್ನು ಗಳಿಸಿದ್ದಾರೆ. ಈ ಸ್ವ ಉದ್ಯಮದಿಂದ ಆ ಭಾಗದ ಕೃಷಿಕರು ಸಕ್ರಿಯವಾಗಿ ಕೃಷಿಯಲ್ಲಿ ತೊಡಗಿಕೊಂಡು ಅರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರಾಗಿದ್ದಾರೆ. ಇವರಿಗೊಂದು ನಮ್ಮ ನಮಸ್ತೆ