ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಹಿಪ್ಪು ನೇರಳೆ ಬೆಳೆಯಲ್ಲಿ ಹಿಟ್ಟು ತಿಗಣೆಯ ನಿರ್ವಹಣೆ

ಸುನಿಲ್ ಕುಮಾರ್, ಟಿ
7090221310
1

ಹಿಪ್ಪು ನೇರಳೆ ಬೆಳೆಯು ರೇಷ್ಮೆ ಉದ್ಯಮದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಪಡೆದಿದೆ. ಈ ಗಿಡದ ಪ್ರತಿಯೊಂದು ಭಾಗವು ಅತ್ಯಂತ ಉಪಯೋಗಕಾರಿಯಾಗಿದ್ದು, ವೈದ್ಯಕೀಯ, ಗುಡಿಕೈಗಾರಿಕೆ, ಉದ್ಯೋಗ ಸೃಷ್ಟಿಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿದೆ. ವಾಸ್ತವಿಕವಾಗಿ ಹೆಚ್ಚು ರೋಗ ಮತ್ತು ಕೀಟ ಬಾಧೆಯನ್ನು ತಡೆಯುವ ಹಾಗೂ ಕಡಿಮೆ ನೀರಿನಂಶದಲ್ಲಿಯೂ ಉತ್ತಮ ಇಳುವರಿಯ ಎಲೆಯನ್ನು ಕೊಡುವ ಹಿಪ್ಪು ನೇರಳೆಗೆ ಮಾರಕವಾಗಿರುವುದು. ಹಿಟ್ಟುತಿಗಣೆ (Mealybug) ಇದನ್ನು ಬೂಸ್ಟ್/ತುಪ್ಪಳ ಎಂದು ಸಹ ಕರೆಯಲಾಗುತ್ತದೆ. ಇದರಿಂದ ತುಕ್ರ ಉಂಟಾಗುತ್ತದೆ. ಕಂಡುಬರುವ ಕಾಲ: ಸಾಮಾನ್ಯವಾಗಿ ವರ್ಷಪೂರ್ತಿ ಈ ರೋಗಲಕ್ಷಣ ಹಿಪ್ಪುನೇರಳೆಯಲ್ಲಿ ಕಾಣಸಿಗಲಿದ್ದು, ಅದರಲ್ಲೂ ಬೇಸಿಗೆಯಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ. ಹಿಟ್ಟು ತಿಗಣೆ ಎಲೆ/ಸಸಿಗಳಲ್ಲಿನ ಪೋಷಕಾಂಶ ದ್ರವ್ಯವನ್ನ ಹೀರುವ ಕೀಟವಾಗಿರುತ್ತದೆ

ಹಾನಿಯ ಲಕ್ಷಣಗಳು: 1) ಸಸ್ಯದ ಕುಡಿಯ ಭಾಗದ ಕಾಂಡ ಚಪ್ಪಟೆಯಾಗುವುದು, 2)ಕಾಂಡದಲ್ಲಿಯ ಗಣ್ಣು (Nodal)ಗಳ ನಡುವಿನ ಅಂತರ ಕಡಿಮೆಯಾಗುತ್ತದೆ, 3) ಎಲೆಗಳು ಸುಕ್ಕುಗಟ್ಟುತ್ತವೆ ಹಾಗೂ ತೀರ ದಟ್ಟ ಹಸಿರಾಗಿ ಕಾಣಸಿಗುತ್ತವೆ, 4) ಸಸಿಗಳ ಕುಡಿಗಳು (Apical Portion) ಗಂಟಾಗುತ್ತವೆ/ಗೊಂಚಲು ಉಂಟಾಗುತ್ತದೆ. ಇದಕ್ಕೆ ತುಕ್ರ ಎಂದು ಕರೆಯಲಾಗುತ್ತದೆ, 5) ಇದರಿಂದ ಶೇಕಡಾ ೪೦ ರಷ್ಟು ಬೆಳವಣಿಗೆ ಕುಂಠಿತವಾಗುತ್ತದೆ, 6)ಭಾದೆಗೊಳಗಾಗಿರುವ ಭಾಗದಲ್ಲಿ ಹಿಟ್ಟು ತಿಗಣೆ ಕಂಡುಬರುತ್ತದೆ, 7)ಸಸಿಗಳ ಎತ್ತರ ಕಡಿಮೆಯಾಗುತ್ತದೆ. ಎಲೆಗಳು ತದನಂತರ ಪೋಷಕಾಂಶದ ಕೊರತೆಯಿಂದ ಹಳದಿ ಬಣ್ಣಕ್ಕೆ ತಿರುಗುತ್ತವೆ, 8) ಇಂತಹ ಕೀಟಬಾಧಿತ ಎಲೆಗಳನ್ನು ರೇಷ್ಮೆ ಹುಳುಗಳಿಗೆ ನೀಡುವುದರಿಂದ ಹುಳುಗಳ ಬೆಳವಣಿಗೆ ಹಾಗೂ ರೇಷ್ಮೆಗೂಡಿನ ಮೇಲೆ ನಕರಾತ್ಮಕ ಪ್ರಭಾವ ಉಂಟಾಗುತ್ತದೆ

ನಿರ್ವಹಣೆ:1) ಬಾಧೆಗೊಳಗಾದ ಕುಡಿಭಾಗಗಳನ್ನು ತೆಗೆದು ಚೀಲದಲ್ಲಿ ಸಂಗ್ರಹಿಸಿ ಸುಡಬೇಕು ಅಥವಾ ಶೇ. ೦.೫ ರ ಸಾಬೂನಿನ ದ್ರಾವಣದಲ್ಲಿ ಅದ್ದಿ ನಾಶಪಡಿಸುವುದು, 2) ಹಿಟ್ಟು ತಿಗಣೆಗೆ ಆಸರೆಯನ್ನು ನೀಡುವ ಕಳೆಗಳಾದ ದಾಸವಾಳ, ಸೀಬೆ, ಬೆಂಡೆ ಸಸಿಗಳನ್ನು ಹಿಪ್ಪು ನೇರಳೆ ಬೆಳೆಯುವ ಹೊಲಗಳಲ್ಲಿ ಬೆಳೆಯಬಾರದು, 3) ಪರತಂತ್ರ ಜೀವಿ ಗುಲಗಂಜಿ ದುಂಬಿ ಕ್ರಿಪ್ಟೋಲಿಮಸ್ ಮಾಂಟ್ರೋಜಿ ಅನ್ನು ಪ್ರತಿ ಎಕರೆಗೆ ೨೫೦ ಪ್ರೌಢ ಕೀಟಗಳಂತೆ ಎರಡು ಸಮಕಂತುಗಳಲ್ಲಿ ಆಗಸ್ಟ್-ಸೆಪ್ಟೆಂಬರ್ ಹಾಗೂ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಬಿಡಬೇಕು, 4)ಬೇವಿನ ಬೀಜದ ಕಷಾಯವನ್ನು (ಶೇಕಡಾ ೪ರಷ್ಟು) ಸಿಂಪಡಿಸು ವುದರಿಂದಲೂ ನಿಯಂತ್ರಿಸಬಹುದು, 5) ಅವಶ್ಯವಿದ್ದಲ್ಲಿ ಮಾತ್ರ ಶೇ. ೦.೧೫ ಡೈಕ್ಲೋರಾವಾಸ್ (ಆಆಗಿP) ಕೀಟನಾಶಕವನ್ನು ಶೇ. ೦.೫ ರ ಸೋಪಿನ ದ್ರಾವಣದಲ್ಲಿ ಸಿದ್ಧಪಡಿಸಿಕೊಂಡು ಸಿಂಪಡಿಸಬೇಕು. ಕೀಟದ ಹಾವಳಿ ಹೆಚ್ಚಾದಲ್ಲಿ ೧೦ ದಿನಗಳ ಅಂತರದಲ್ಲಿ ಮತ್ತೊಮ್ಮೆ ಕೀಟನಾಶಕವನ್ನು ಸಿಂಪಡಿಸಬಹುದು