ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಕೃಷಿಯಲ್ಲಿ ಸಾವಯವ ಪರಿಕರಗಳ ಉಪಯೋಗ

ಬಿ. ಹನುಮಂತೇಗೌಡ
೯೯೪೫೫೭೫೭೫೭
1

ಬೇವು ಸಾಬೂನು ಉಪಯೋಗದ ವಿಧಾನ : ೭ಗ್ರಾಂ ಬೇವು / ಹೊಂಗೆ ಸಾಬೂನನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ, ಸಸ್ಯಗಳ ಕುಡಿ ಹಾಗೂ ಎಲೆಗಳ ತಳಭಾಗಕ್ಕೆ ತಗುಲುವಂತೆ ಸಿಂಪರಣೆ ಮಾಡುವುದು. ಎಲೆಕೋಸು, ಹೂಕೋಸು ಹಾಗೂ ಇತರ ತರಕಾರಿಗಳಿಗೆ ಕೀಟಗಳ ಪ್ರಮಾಣಕ್ಕನುಸಾರವಾಗಿ ೧೦-೧೫ ದಿನಗಳ ಅಂತರದಲ್ಲಿ ಒಂದು ಲೀಟರ್ ನೀರಿಗೆ ೧೦ಗ್ರಾಂ ಸಾಬೂನನ್ನು ಶಿಫಾರಸ್ಸು ಮಾಡಲಾಗಿದೆ. ಎಲೆಕೋಸು ಹಾಗೂ ಹೂಕೋಸುಗಳಿಗೆ ಗರಿಷ್ಠಮಟ್ಟ ನಾಲ್ಕು ಸಿಂಪರಣೆಯನ್ನು ಕೊಡುವುದು. ಟೊಮೆಟೊ ಹಣ್ಣಿನ ಕಾಯಿಕೊರಕ ಹಾಗೂ ರಂಗೋಲಿ ಹುಳಗಳ ನಿಯಂತ್ರಣಕ್ಕೆ ನಾಟಿ ಮಾಡಿದ ೨,೪,೫ ಹಾಗೂ ೬ ವಾರಗಳ ಅಂತರದಲ್ಲಿ ಸಿಂಪರಣೆ ಮಾಡಬೇಕು.ಸಾಬೂನು ದ್ರಾವಣ ತಯಾರಿಸುವ ವಿಧಾನ: ಸುಮಾರು ೨೦ ಲೀಟರ್ ಗಾತ್ರದ ಬಕೆಟಿನಲ್ಲಿ ೨೦೦ ಗ್ರಾಂ ಬೇವು / ಹೊಂಗೆ ಸಾಬೂನನ್ನು ತೆಗೆದುಕೊಂಡು ೪-೫ ಲೀಟರ್ ನೀರಿನಲ್ಲಿ ಬೆರೆಸಿ, ಸಾಬೂನನ್ನು ಚೆನ್ನಾಗಿ ಕಿವುಚಿ ಕರಗಿಸಬೇಕು. ನಂತರ ನೈಲಾನ್ ನೆಟ್ ಅಥವಾ ಚಹ ಸೋಸುವ ಚಾಳಿಗೆಯ ಮೂಲಕ ಸೋಸಬೇಕು. ನಂತರ ಉಳಿದ ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು.

ಗಮನಿಸಬೇಕಾದ ಮುಖ್ಯ ಅಂಶಗಳು: ಸಿಂಪಡಣೆ ಮಾಡಿದ ಸಾಬೂನು ದ್ರಾವಣ ಕೀಟಗಳಿಗೆ ಸಂಪರ್ಕವಾಗುವಂತೆ ಸಿಂಪಡಣೆ ಮಾಡಬೇಕು. ಸಾಮಾನ್ಯವಾಗಿ ಕೀಟಗಳು ಎಲೆಯ ತಳಭಾಗದಲ್ಲಿ ಹಾಗೂ ಕುಡಿಗಳಲ್ಲಿ ಬಚ್ಚಿಟ್ಟುಕೊಂಡಿರುವುದರಿಂದ ಕುಡಿಗಳು ಒದ್ದೆ ಯಾಗುವಂತೆ ಹಾಗೂ ಎಲೆಗಳ ತಳಭಾಗ ಒದ್ದೆಯಾಗುವಂತೆ ಸಿಂಪಡಣೆ ಮಾಡಬೇಕು. 2) ಸಿಂಪಡಣೆ ಪರಿಣಾಮ ಬೆಳೆ ಹಾಗೂ ಹವಾಮಾನದ ಮೇಲೆ ಅವಲಂಬಿಸಿರುವುದರಿಂದ ಸಿಂಪಡಣೆ ಪ್ರಮಾಣ ಹಾಗೂ ಸಂಖ್ಯೆಯನ್ನು ವಿವಿಧ ಬೆಳೆ ಹಾಗೂ ಪ್ರದೇಶಗಳಿಗೆ ಪ್ರತ್ಯೇಕವಾಗಿ ಪಟ್ಟಿ ಮಾಡಿ ಸಿದ್ಧಮಾಡಿಕೊಳ್ಳಬೇಕು, 3) ಯಾವುದೇ ಕೀಟನಾಶಕ ಅಥವಾ ಶಿಲೀಂಧ್ರ ನಾಶಕದೊಡನೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬಹುದು. ಶಿಫಾರಸ್ಸು ಮಾಡಿದ ಅರ್ಧ ಭಾಗ ಕ್ರಿಮಿನಾಶಕ ಒಂದು ಲೀಟರ್ ನೀರಿಗೆ ೭.೫೦ ಗ್ರಾಂ ಸಾಬೂನನ್ನು ಮಿಶ್ರಣ ಮಾಡಿ ಸಿಂಪಡಣೆ ಮಾಡುವುದು ಸೂಕ್ತ, 4) ಮಳೆ ನೀರು ಸಹಜವಾಗಿ ಸಾಬೂನನ್ನು ತೊಳೆದು ಹಾಕುವುದರಿಂದ ಸಾಬೂನು ದ್ರಾವಣ ಸಿಂಪಡಣೆಯ ೧ ರಿಂದ ೨ ದಿನಗಳಲ್ಲಿ ಮಳೆಬಿದ್ದಲ್ಲಿ ಕೀಟಗಳ ಮೇಲೆ ಸಾಬೂನು ದ್ರಾವಣದ ಯಾವುದೇ ಪರಿಣಾಮ ಬೀರುವುದಿಲ್ಲ