ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಕೃಷಿಯೊಂದು ಕಲೆ

image_
ಬಿ. ಎಮ್. ಚಿತ್ತಾಪೂರ
9448821755
1

ಕೃಷ್ಣಾ ನದಿ ತಟದಲ್ಲಿರುವ ಸತ್ಯನಾರಾಯಣ ಚೌದರಿಯವರು ಸರಿಯಾದ ಸಮಯದಲ್ಲಿ ಚಾಟಣಿ ಮಾಡುವುದರಿಂದ ಮತ್ತು ತೋಟದ ಸುತ್ತಲೂ ಗಾಳಿ ಮರ ನೆಡುವುದರಿಂದ ದಾಳಿಂಬೆಯ ಬ್ಯಾಕ್ಟೀರಿಯಲ್ ಬ್ಲೈಟನ್ನು ನಿರ್ವಹಣೆ ಮಾಡಬಹುದು ಮತ್ತು ಯಲಬುರ್ಗಾದ ಶರಣಪ್ಪನವರು ತಂಬಾಕಿನ ವೇಸ್ಟ ಸಹಿತ ರೋಗ ನಿರ್ವಹಣೆಯಲ್ಲಿ ಉಪಯುಕ್ತ ಎಂದು ಹೇಳಿದುದು ನೆನೆಪಿಗೆ ಬಂತು. ಅನುಭವದಿಂದಲೆ ಎಲ್ಲವನ್ನೂ ತಿಳಿದುಕೊಳ್ಳಬೇಕು. ಮತ್ತು ಕೃಷಿಯಲ್ಲಿ ಅನುಭವಕ್ಕಿಂತ ಮಿಗಿಲಾದ ವಿದ್ಯೆಯಿಲ್ಲ, ಲಿಂಗಸೂರು ದಾರಿಯಲ್ಲಿ ದಾಳಿಂಬೆ ತೋಟವೊಂದರಲ್ಲಿ ಗಿಡಗಳನ್ನು ಸೀರೆಯಿಂದ ಸುತ್ತಿದ್ದರು. ಹೀಗೆ ಮಾಡಿದಲ್ಲಿ ಫಸಲನ್ನು ಮಧ್ಯಾಹ್ನೊತ್ತರ ಬೀಳುವ ತೀಕ್ಷ್ಣ ಸೂಕ್ಷ್ಮ ಸೂರ್ಯ ಕಿರಣಗಳಿಂದ ಫಲವನ್ನು ರಕ್ಷಿಸಬಹುದೆಂದು. ಹೀಗೆಯೆ ಯಾದಗಿರಿ ರಸ್ತೆಯಲ್ಲಿ ಆಂಧ್ರದ ರೈತನೊಬ್ಬ ತೋಟದ ಸುತ್ತಲೂ ಬೇಲಿಯಂತೆ ಸೀರೆಯಿಂದ ಸುತ್ತಿದ್ದುದು ನೆನಪಿಗೆ ಬಂದಿತು. ಇದು ಬೆಳೆಯನ್ನು ಹಂದಿ (ಮಿಕ) ಗಳಿಂದ ಕಾಪಾಡಲಿಕ್ಕೆಂದು ಕೈಕೊಂಡ ಕ್ರಮ.