ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ವನೌಷಧಿ

ಕರ್ಕಾಟಕ ಶೃಂಗಿ

-
1

ಇದು ಲಘುವೂ, ರೂಕ್ಷವೂ, ಕಷಾಯವೂ, ತಿಕ್ತವೂ, ವಿಪಾಕದಲ್ಲಿ ಕಹಿಯೂ ಮತ್ತು ಉಷ್ಣವೀರ್ಯವುಳ್ಳದ್ದೂ ಆಗಿರುತ್ತದೆ. ಇದರಲ್ಲಿ ಕಫವಾತಶಾಮಕ, ಕಟುಪೌಷ್ಟಿಕ, ಶೋಧಹಾರಕ, ಗ್ರಾಹಿ, ಕಫಘ್ನ, ಬಿಕ್ಕಳಿಕೆ ನಿಗ್ರಹಣಗಳ ಗುಣವಿರುತ್ತದೆ. ಇದರಿಂದ ವಮನ, ಪಿತ್ತಗಳ ಪರಿಹಾರವಾಗುವುದಲ್ಲದೆ ಇದು ದೀಪನವನ್ನೂ, ವಾತಾನು ಲೋಮವನ್ನೂ, ಕಫದ ವಿಕಾರವನ್ನೂ ನಿವಾರಿಸುತ್ತದೆ. ರಕ್ತದೋಷ, ಊರ್ಧ್ವವಾತ, ಬಾಯಾರಿಕೆ, ಅರುಚಿ ಮೊದಲಾದವುಗಳು ಇದರಿಂದ ಪರಿಹಾರವಾಗುತ್ತವೆ. ಇದನ್ನು ಜೇನುತುಪ್ಪ, ತುಪ್ಪಗಳ ಅನುಪಾನದಲ್ಲಿ ೫ರಿಂದ ೧೦ ಗುಂಜಿಯವರೆಗೆ ಕೊಡುವ ನಿಯಮವಿದೆ

ಕನ್ನಡ/ಸಂಸ್ಕೃತ/ಹಿಂದಿ/ತಮಿಳು/ತೆಲುಗು/ಇಂಗ್ಲೀಷ್

ಕರ್ಕಾಟಕಶೃಂಗಿ/ಕರ್ಕಟಶೃಂಗಿ/ಕಾಕಡಾಶಿಂಗಿ/ಕಾಕಟ್ಶಿಂಗೀ/ಕರ್ಕಟಾಶೃಂಗೀ/Pistacia Integenima

ಕಾಕಡಶೃಂಗಿ/ಅಜಶೃಂಗೀ/ಕಾಕರಾಸಿಂಗೀ/ಕಕ್ಕಾಟಶಿಂಗೀ/ಕರ್ಕಾಟಕಶೃಂಗೀ/-

ಕಾಕಡಶಿಂಗಿ/ಶೃಂಗಿ