ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಎಲೆ ಕೋಸಿನ ದುಂಡಾಣು ಕಪ್ಪು ಕೊಳೆ ರೋಗ

ಡಾ.ಪ್ರೇಮ.ಜಿ.ಯು
7259627674
1

ಮೊದಲಿಗೆ ಎಲೆಯ ಅಂಚಿನ ಭಾಗದಲ್ಲಿ ಹಳದಿ ಬಣ್ಣದ ವಿ ಆಕಾರದ ಚುಕ್ಕೆಗಳು ಕಾಣಿಸುತ್ತವೆ. ಆಮೇಲೆ ನರಗಳು ಕಂದು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ರೋಗದ ತೀವ್ರತೆ ಜಾಸ್ತಿಯಾದಾಗ ಪೀಡಿತ ಎಲೆಯ ಭಾಗಗಳು ಒಣಗಿ, ಕಂದು ಬಣ್ಣಕ್ಕೆ ತಿರುಗುತ್ತವೆ. ಎಲೆಯ ತೊಟ್ಟು ಮತ್ತು ಗಿಡದ ಕಾಂಡ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ರೋಗದ ಕೊನೆಯ ಹಂತದಲ್ಲಿ ರೋಗಾಣುವು ಗಿಡದ ಮೇಲಿನ ಭಾಗದಲ್ಲಿರುವ ಎಲೆಗಳಿಗೆ (ಗಡ್ಡೆಯ ಭಾಗ) ಹರಡಿ, ಗಿಡವನ್ನು ಸಂಪೂರ್ಣವಾಗಿ ನಾಶಮಾಡುತ್ತದೆ. ಈ ರೋಗವು ಕ್ಸ್ಯಾಂಥೋಮೋನಾಸ್ ಕ್ಯಾಂಪೆಸ್ಟ್ರಿಸ್ ಪಿವಿ. ಕ್ಯಾಂಪೆಸ್ಟ್ರಿಸ್ ಎಂಬ ದುಂಡಾಣುವಿನಿಂದ ಬರುತ್ತದೆ. ಈ ದುಂಡಾಣು ಗಿಡಗಳ ಅವಶೇಷಗಳ ಮೇಲೆ ಮತ್ತು ಬೀಜಗಳ ಮೇಲೆ ಜೀವಿಸುತ್ತದೆ.

ನಿರ್ವಹಣೆ:

  • ಈ ರೋಗವು ಬಿತ್ತನೆ ಬೀಜದ ಮೂಲಕ ಹರಡುವುದರಿಂದ ಉತ್ತಮ ಗುಣಮಟ್ಟದ, ಆರೋಗ್ಯವಂತ, ದೃಢೀಕರಿಸಿದ ಬೀಜಗಳನ್ನು ಬಿತ್ತನೆಗೆ ಬಳಸುವುದು ಉತ್ತಮ.
  • ಕೋಸು ಗುಂಪಿಗೆ ಸೇರಿದ ತರಕಾರಿಗಳನ್ನು ಮೂರು ವರ್ಷದಲ್ಲ್ಲಿ ಒಂದು ಸಾರಿ ಬೆಳೆಯಬೇಕು
  • ಬೀಜಗಳನ್ನು ಬಿತ್ತುವ ಮೊದಲು ಸ್ಟ್ರೆಪ್ಟೊಸೈಕ್ಲಿನ್ ಅಥವಾ ಸ್ಟ್ರೆಪ್ಟೋಮೈಸಿನ್ ಸಲ್ಫೇಟ್ (೦.೫ ಗ್ರಾಂ/ ಕಿ. ಗ್ರಾಂ ಬೀಜಕ್ಕೆ) ಲೇಪಿಸಿ ಬಿತ್ತನೆ ಮಾಡಬೇಕು
  • ೦.೫ ಗ್ರಾಂ ಸ್ಟ್ರೆಪ್ಟೋಮೈಸಿನ್ ಸಲ್ಫೇಟ್ ಮತ್ತು ೩ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ೧ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು
  • ೦.೧ ಮಿ.ಲೀ. ಟೆಟ್ರಾಸೈಕ್ಲಿನ್ ಹೈಡ್ರಾಕ್ಸೈಡ್ ಅಥವಾ ೦.೧ ಮಿ. ಗ್ರಾಂ ಅಗ್ರಿಮೈಸಿನ್ ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು
  • 91011