ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಆಪ್ ಲೋಕ

ಕಿಸಾನ್ ಸುವಿಧ ಕಿರುತಂತ್ರಾಂಶ

image_
ಪ್ರದೀಪ್ ಕುಮಾರ್
9538125130

ಕಿಸಾನ್ ಸುವಿಧ ಕಿರುತಂತ್ರಾಂಶವನ್ನು ಭಾರತ ಸರ್ಕಾರದ ಕೃಷಿ ಮಂತ್ರಾಲಯ ಮತ್ತು ರೈತ ಕಲ್ಯಾಣವು ರೈತರಿಗೆ ತ್ವರಿತವಾಗಿ ಕೃಷಿ, ಮಾರುಕಟ್ಟೆ, ಸಸ್ಯ ಸಂರಕ್ಷಣೆ ಮತ್ತು ಹವಾಮಾನ ಮಾಹಿತಿಯನ್ನು ಒದಗಿಸಲು ಅಭಿವೃದ್ದಿಪಡಿಸಿದೆ. ಈ ಆಪ್ಅನ್ನು ಗೌರವಾನ್ವಿತ ಪ್ರಧಾನ ಮಂತ್ರಿಗಳು ಮಾರ್ಚ್ ೧೯, ೨೦೧೬ ರಂದು ನಡೆದ ಕೃಷಿ ಉನ್ನತಿ ಮೇಳದಲ್ಲಿ ಬಿಡುಗಡೆ ಮಾಡಿದರು. ಆಪ್ ಒಂದು ಕ್ಲಿಕ್ನಲ್ಲಿ, ಪ್ರಸ್ತುತ ದಿನದ ಹವಾಮಾನ ಮತ್ತು ಮುಂದಿನ ೫ ದಿನಗಳ ಹವಾಮಾನ ಮುನ್ಸೂಚನೆ ನೀಡುತ್ತದೆ. ಅಲ್ಲದೆ ಕೃಷಿ ಸಂಬಂಧಿತ ರಸಗೊಬ್ಬರ, ಉಪಕರಣ, ಕ್ರಿಮಿನಾಶಕ ಔಷಧಿ ವ್ಯಾಪಾರಿಗಳ ವಿವರ ನೀಡುತ್ತದೆ. ಆಪ್ವು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿನ ಬೆಲೆ, ಸಸ್ಯ ಸಂರಕ್ಷಣೆ ಸಲಹೆ, ಬೆಳೆಗಳ ಸಮಗ್ರ ಪೀಡೆ ನಿರ್ವಹಣೆ ಆಚರಣೆಯ ನೀಡುತ್ತದೆ. ಈ ಆಪ್ಅನ್ನು ಆಂಡ್ರಾಯ್ಡ್ ಸ್ಮಾರ್ಟ್ಫೋನ್ವುಳ್ಳವರು ಗೂಗಲ್ ಪ್ಲೇಸ್ಟೋರ್ನಿಂದ ಅಥವಾ mkissan.gov.in ಡೌನ್ಲೋಡ್ ಮಾಡಿಕೊಳ್ಳಬಹುದು. ಆಪ್ ಡೌನ್ಲೋಡ್ ಯಶಸ್ವಿಯಾದ ನಂತರ ಮೊಬೈಲ್ ಪರದೆಯ ಮೇಲೆ ಕಿಸಾನ್ ಸುವಿಧ ಆಪ್ನ ಶಾರ್ಟ್ಕಟ್ ಗುಂಡಿಯು ಗೋಚರವಾಗುತ್ತದೆ. ಈ ಗುಂಡಿಯನ್ನು ಒತ್ತಿ ಬಳಕೆದಾರರು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಾಹಿತಿಯನ್ನು ನೀಡಿ ಆಪ್ಗೆ ದಾಖಲಾಗಬೇಕು. ಬಳಕೆದಾರರು ಆಪ್ಗೆ ದಾಖಲಾದ ನಂತರ ಉಪಯೋಗಿಸಲು ತಕ್ಕಮಟ್ಟಿನ ಇಂಟರ್ನೆಟ್ ಸೌಲಭ್ಯ ಹಾಕಿಸಿ ಇಟ್ಟುಕೊಂಡಿರಬೇಕು. ಆಪ್ವು ಮೊಬೈಲ್ ಪರದೆಯಲ್ಲಿ ತೋರಿಸುವ ಹವಾಮಾನ (weather)), ವ್ಯಾಪಾರ, ಮಾರುಕಟ್ಟೆ ಬೆಲೆ, ಸಸ್ಯ ಸಂರಕ್ಷಣೆ ಗುಂಡಿಯನ್ನು ಬಳಸಿ ಸ್ಥಳ ಇತ್ಯಾದಿ ವಿವರ ಆಯ್ಕೆ ಮಾಡಿದಲ್ಲಿ ವಿವರ ಲಭ್ಯ. ಉದಾಹರಣೆಗೆ ಆಪ್ನಲ್ಲಿರುವ ಸಸ್ಯ ಸಂರಕ್ಷಣೆ (plant protection) ಗುಂಡಿಯನ್ನು ಒತ್ತಿ ನಂತರ ಬೆಳೆ ಆಯ್ಕೆ ಮಾಡಬೇಕು. ಕೃಷಿ ಬೆಳೆಗಳಿಗೆ ವಿವಿಧ ಹಂತಗಳಲ್ಲಿ ತಗಲುವ ರೋಗಗಳು, ಭಾದಿಸುವ ಕೀಟಗಳು ಮತ್ತು ಕಳೆಗಳ ನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಈ ಆಪ್ವು ಸದ್ಯಕ್ಕೆ ಭತ್ತ, ಗೋಧಿ, ಸೊಯಾ ಅವರೆ, ಸಾಸಿವೆ, ಈರುಳ್ಳಿ, ಟೊಮ್ಯಾಟೊ, ಬದನೆ, ಕಬ್ಬು, ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗಳಿಗೆ ವಿವಿಧ ಹಂತಗಳಲ್ಲಿ ತಗಲುವ ರೋಗಗಳು, ಭಾದಿಸುವ ಕೀಟಗಳು ಮತ್ತು ಕಳೆಗಳ ನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ