ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಮಿಡಿತ-ತುಡಿತ

image_
ರಘು ಸಂವೇದನ್
9902191549
1


ಪತ್ರಿಕೆ ತುಂಬಾ ಚೆನ್ನಾಗಿ ಬರುತ್ತಿದೆ. ಆಗಸ್ಟ್ ತಿಂಗಳ ಸಂಚಿಕೆಯಲ್ಲಿ ಪ್ರಕಟವಾದ ಕೃಷಿ ಮತ್ತು ಜಿ.ಎಸ್.ಟಿ(ಸರಕು ಸೇವೆ) ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿತ್ತು. ಯಾವುದೇ ಕೃಷಿ ಪತ್ರಿಕೆಯಲ್ಲಿ ಕೃಷಿ ಉತ್ಪನ್ನಗಳ ಮೇಲೆ ಜಿ.ಎಸ್.ಟಿ ಯಾವ ರೀತಿ ಪ್ರಭಾವ ಬೀರುತ್ತವೆ ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ಸರಿಯಾದ ಸಮಯಕ್ಕೆ ರೈತರಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಲೇಖನ ಬರೆದಂತಹ ಲೇಖಕರಿಗೂ ಹಾಗೂ ಪ್ರಕಟಿಸಿದ ನೇಗಿಲ ಮಿಡಿತಕ್ಕೆ ಧನ್ಯವಾದಗಳು.

-- ಪಿ.ಜಿ.ಸಿದ್ದವೀರಪ್ಪ, ದಾವಣಗೆರೆ


ನೇಗಿಲ ಮಿಡಿತದಲ್ಲಿ ಪ್ರಕಟವಾಗುವ ಅಂಕಣ ಅರಿವೆ ಗುರು ಒಂದು ವಿಭಿನ್ನ ಚಿಂತನೆ ಆಗಿದ್ದು, ಇವತ್ತಿನ ವಿದ್ಯುತ್ ಅಭಾವದಲ್ಲಿ ಸಮರ್ಪಕ ಬಳಕೆ ಅಗತ್ಯವಾಗಿದ್ದು, ಅದಕ್ಕೆ ಬಳಸಬೇಕಾದ ಉಪಕರಣಗಳು ಹಾಗೂ ವಿಧಾನದ ಅರಿವು ಎಲ್ಲರಿಗೂ ಅಗತ್ಯ. ಅದರಲ್ಲೂ ಒಂದು ಕೃಷಿ ಪತ್ರಿಕೆಯಲ್ಲಿ ಇದರ ಬಗ್ಗೆ ಬೆಳಕು ಚೆಲ್ಲುತ್ತಿರುವುದು ಇನ್ನೊಂದು ವಿಶೇಷ. ಈ ವಿಭಿನ್ನ ಚಿಂತನೆಗೆ ಸಂಪಾದಕರಿಗೆ ನನ್ನ ನಮಸ್ಕಾರಗಳು.

-- ಪಿ.ಜಿ.ಸಿದ್ದವೀರಪ್ಪ, ದಾವಣಗೆರೆ