ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಮೌಲ್ಯವರ್ಧನೆ

ಅನಾನಸ್ ಜಾಮ್

ಕಾಂತರಾಜ್ ವೈ.,
9731731842
1

ಅನಾನಸ್ ಹಣ್ಣು ನಮ್ಮ ದೇಶದಲ್ಲಿ ಸಂಸ್ಕರಣೆ ಮಾಡುವ ಪ್ರಮುಖ ಹಣ್ಣಿನ ಬೆಳೆಯಾಗಿದ್ದು ಮುಖ್ಯವಾಗಿ ಬಂಗಾಳ, ಅಸ್ಸಾಂ, ಕೇರಳ ಮತ್ತು ತಮಿಳುನಾಡಿನಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಕ್ಯೂ ಮತ್ತು ಜೈಂಟ್ ಕ್ಯೂ ತಳಿಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ. ಈ ಹಣ್ಣಿನಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯುಳ್ಳ ಹಣ್ಣಾಗಿದೆ ಹಾಗೂ ಹೆಚ್ಚು ದಿನಗಳ ಕಾಲ ಶೇಖರಿಸಬಹುದಾದ ಬೆಳೆಯಾಗಿದೆ

ವಿಧಾನ: ಪಕ್ವವಾಗಿರುವ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹಣ್ಣುಗಳ ಸಿಪ್ಪೆಯನ್ನು ಸುಲಿದು ನಂತರ ತುಂಡು ತುಂಡಾಗಿ ಕತ್ತರಿಸಬೇಕು. ನಂತರ ಹಣ್ಣಿನಿಂದ ರಸವನ್ನು ಬೇರ್ಪಡಿಸಿಕೊಳ್ಳಬೇಕು. ಇದಕ್ಕೆ ೩/೪ ಭಾಗ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಸಣ್ಣ ಹುರಿಯಲ್ಲಿ ಚೆನ್ನಾಗಿ ಹದವಾಗುವವರೆಗೆ ಬೇಯಿಸಬೇಕು. ನಂತರ ಬಾಟಲಿಯನ್ನು ಬಿಸಿನೀರಿನಲ್ಲಿ ೧೦ -೧೫ ನಿಮಿಷಗಳವರೆಗೆ ಸಂಸ್ಕರಿಸಬೇಕು. ತದನಂತರ ಇದನ್ನು ಸ್ವಚ್ಛವಾದ ಬಾಟಲಿಯಲ್ಲಿ ತುಂಬಿಡಬೇಕು. ಈ ಬಾಟಲಿಗಳನ್ನು ತಂಪಾದ, ಒಣಜಾಗದಲ್ಲಿ ಶೇಖರಿಸಿಡಬೇಕು

4567891011121314