ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಕಣಕ್ಕೊಂದು ದಕ್ಷಿಣ ಕನ್ನಡದ ದೇಸಿ ತಂತ್ರಜ್ಞಾನ

ನವೀನ್, ಎನ್.ಈ.,
9964177474
1

ಮಳೆ ಜಾಸ್ತಿ, ಬಿಸಿಲೂ ಜಾಸ್ತಿ, ವಾತಾವರಣದಲ್ಲಿ ತೇವಾಂಶವೂ ಜಾಸ್ತಿ. ಇಲ್ಲಿ ಅಡಿಕೆ, ಕಾಳುಮೆಣಸು ಇತ್ಯಾದಿ ಒಣಗಿಸುವುದಕ್ಕೆ ವಿಶೇಷ ತಂತ್ರಜ್ಞಾನವೊಂದು ತಲತಲಾಂತರದಿಂದ ನಡೆದು ಬಂದಿದೆ. ಒಮ್ಮೆ ಕಣ ಸಿದ್ಧಪಡಿಸಿದರೆ ೨೫-೩೦ ವರ್ಷದವರೆಗೆ ಇರುತ್ತದೆ

ಇದರ ಸಿದ್ಧತೆ ಹಂತಗಳು

ಫೆಬ್ರವರಿ-ಮಾರ್ಚ್ ತಿಂಗಳು ಕಣ ಮಾಡಲು ಸೂಕ್ತ, ಭೂಮಿ ಮಟ್ಟ ಮಾಡಿ ಸುಮಾರು ಎರಡರಿಂದ ೩ ಇಂಚು ಎತ್ತರ ಹಾಕಲು ಬೇಕಾಗುವಷ್ಟು ಮಣ್ಣು ಕೆಸರು ಮಾಡಿ ಗುಪ್ಪೆ ಮಾಡಿ ೩ ದಿನ ಬಿಡಬೇಕು. ನಂತರ ಹರಡಿ ಮಣ್ಣು ಮಟ್ಟ ಮಾಡಬೇಕು. ನಂತರ ಎರಡು ದಿನ ಬಿಡಬೇಕು. ಚೆನ್ನಾಗಿ ದಮ್ಮಸ್ ಮಾಡಬೇಕು. ಒಂದು ದಿನ ಬಿಟ್ಟು ಪುನಃ ನಾಲ್ಕರಿಂದ ಐದು ಸಲ ದಮ್ಮಸ್ ಮಾಡಬೇಕು. ಬಿರುಕು ಕಡಿಮೆಯಾಗುವವರೆಗೆ ಹಾಗೂ ಮೇಲ್ಭಾಗ ಬೆಳ್ಳಗೆ ಕಾಣುವವರೆಗೆ ದಮ್ಮಸ್ ಮಾಡಬೇಕು. ಕೊನೆಯಲ್ಲಿ ಸಣ್ಣ ಮರಳನ್ನು ಎರಚಿ ಅದನ್ನು ಚೆನ್ನಾಗಿ ಗುಡಿಸಬೇಕು. ಇದರಿಂದ ಬಿರುಕುಗಳು ಮುಚ್ಚಿ ಸಮತಟ್ಟಾಗಿ ಕಾಣುತ್ತದೆ. ೧೫ ರಿಂದ ೩೦ ದಿನ ಬಿಡಬೇಕು. ನಂತರ ಗೇರು ಎಣ್ಣೆಯನ್ನು ಅದರ ಮೇಲೆ ಹಾಕಿ ಸಮನಾಗಿ ಹರಡಬೇಕು.ಒಂದು ತಿಂಗಳ ನಂತರ ಮತ್ತೆ ಗೇರು ಎಣ್ಣೆಯನ್ನು ಹಾಕಬೇಕು.ಅನಂತರ ಪ್ರತಿ ವರ್ಷಕ್ಕೊಮ್ಮೆ ಒಮ್ಮೆ ಗೇರು ಎಣ್ಣೆ ಕೊಡಬೇಕು.ಇದರಲ್ಲಿ ಹೊರಗೆ ಇರುವ ಭೂಮಿ ಶಾಖಕ್ಕಿಂತ ೫ ರಿಂದ ೭೦ ಡಿಗ್ರಿ ಹೆಚ್ಚು ಶಾಖ ಇರುತ್ತದೆ.ಇದರ ಮೇಲೆ ಭತ್ತ ಒಣಗಿಸಿದಾಗ ಅಕ್ಕಿ ನುಚ್ಚಾಗುವುದು ಕಡಿಮೆ..ಕಣದ ಪೂರ್ತಿ ಒಂದೇ ರೀತಿಯ ಬಿಸಿ/ಶಾಖ ಲಭ್ಯವಾಗುತ್ತದೆ

ಅಬ್ಬಾ! ಎಂತಹ ಒಳ್ಳೆಯ ತಂತ್ರಜ್ಞಾನ. ನೋಡಿದರೆ ಒಳ್ಳೆ ಸಿಮೆಂಟ್ ನೆಲದಂತೆ ಕಾಣುತ್ತದೆ. ಆದರೆ ಅದಕ್ಕಿಂತ ಹೆಚ್ಚು ಶಾಖ ಹೀರಿಕೊಳ್ಳುತ್ತದೆ. ಹಾಗೆ ಆ ಶಾಖವನ್ನು ಬೆಳೆ ಒಣಗಿಸಲು ಬಿಟ್ಟು ಕೊಡುತ್ತದೆ. ಇಂತಹ ಉತ್ತಮ ತಂತ್ರಜ್ಞಾನಗಳನ್ನು ಮುಂದಿನ ತಲೆಮಾರಿಗೆ ವರ್ಗಾವಣೆ ಮಾಡಲಾದರೂ ಇವನ್ನು ದಾಖಲಿಸಬೇಕು