ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೯

ಮೆಕ್ಕೆಜೋಳದಲ್ಲಿ ಸತುವಿನ ಕೊರತೆ

ಹೆಚ್. ಎಂ. ಸಣ್ಣಗೌಡ
9964204571
1

ಕೊರತೆಯ ಚಿಹ್ನೆಗಳು

ಕೊರತೆಯ ಸಸ್ಯದ ತುದಿಯಿಂದ ಎರಡನೆಯ ಅಥವಾ ಮೂರನೆಯ ಎಲೆಗಳಲ್ಲಿ ಮೊದಲು ಕಂಡುಬರುತ್ತದೆ, ಎಲೆಯ ನರಗಳ ಮಧ್ಯಭಾಗ ಹಳದಿಯಾಗುವುದು ಮತ್ತು ಬಿಳಿಚಿಕೊಳ್ಳುತ್ತದೆ, ಚಿಗುರೆಲೆಗಳ ಗಾತ್ರ ಕಡಿಮೆಯಾಗುವುದು, ಸಸ್ಯಗಳಲ್ಲಿನ ಗಣ್ಣುಗಳು ನಡುವಿನ ಭಾಗ ಚಿಕ್ಕದಾಗಿ ಸಸ್ಯಗಳು ಗಿಡ್ಡದಾಗಿ ಕಾಣುತ್ತವೆ, ಹೂ ಬಿಡುವುದು, ಕಾಯಿಯಾಗುವುದು ಮತ್ತು ಮಾಗುವುದು ತಡವಾಗುವುದು. ಕುಡಿಗಳು ಬಾಡಿ ಸಾಯುವುದು

ನಿವಾರಣೆ

ಶೇ. ೦.೫ ರಿಂದ ೧.೦ ಸತುವಿನ ಸಲ್ಫೇಟ್ ಸಿಂಪರಣೆ, ಮಣ್ಣಿಗೆ ೪-೫ ಕೆ. ಜಿ. (ಖುಷ್ಕಿ)/ ೮-೧೦ ಕೆ. ಜಿ. (ನೀರಾವರಿ) ಸತುವಿನ ಸಲ್ಫೇಟ್ ಪ್ರತಿ ಎಕರೆಗೆ ಹಾಕುವುದು.