ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಕನಕಾಂಬರದಲ್ಲಿ ಅಧಿಕ ಇಳುವರಿಯ ತಳಿಗಳು

ಸಿ. ಅಶ್ವಥ್,
೯೩೭೯೭೮೫೬೯೨
1

ಕನಕಾಂಬರ ಒಂದು ಉತ್ತಮ ಬೆಳೆಯಾಗಿದ್ದು, ಮಧ್ಯಮ ಮತ್ತು ಸಣ್ಣ ರೈತರು ಇದನ್ನು ನಗರದ ಸುತ್ತ ಮುತ್ತ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಕೂಲಿ ಕಾರ್ಮಿಕರ ಅಭಾವದಿಂದ ಹೂ ಕಟಾವು ಮಾಡುವುದು ಕಷ್ಟಕರವಾಗಿದ್ದು ಮತ್ತು ಸೊರಗು ರೋಗದ ಬಾಧೆಯಿಂದ ಬೆಳೆ ನಾಶವಾಗುತ್ತಿರುವುದರಿಂದ, ಈ ಬೆಳೆ ಎಕರೆವಾರು ಕಡಿಮೆಯಾಗುತ್ತಿದೆ.

ಈ ನಿಟ್ಟಿನಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬಹಳಷ್ಟು ಸಂಶೋಧನೆ ಮಾಡಿದ್ದು, ನಾಲ್ಕು ತಳಿಗಳನ್ನು ಅಂದರೆ ಅರ್ಕ ಅಂಬರ, ಅರ್ಕ ಕನಕ, ಅರ್ಕ ಶ್ರೀಯ, ಅರ್ಕ ಶ್ರಾವ್ಯ ಬಿಡುಗಡೆ ಮಾಡಿರುತ್ತದೆ. ಈ ತಳಿಗಳ ವಿಶೇಷತೆ ಎಂದರೆ ಹೆಚ್ಚಿನ ಇಳುವರಿ, ದಪ್ಪ ಹೂ, ಬಲಿಷ್ಟಕಾಂಡ ಮತ್ತು ಸೊರಗು ರೋಗ ನಿರೋಧಕ ಶಕ್ತಿ ಇರುತ್ತದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾ. ದೊಡ್ಡಭೂಹಳ್ಳಿ ಗ್ರಾಮದ ಮಾದರಿ ಕೃಷಿಕ ಮಹೇಶ್‌ರವರು ಈ ಮೊದಲು ಅರ್ಧ ಎಕರೆಯಲ್ಲಿ ಮೂರು ಸಾವಿರ ಸ್ಥಳೀಯ ತಳಿಯನ್ನು ಬೆಳೆಯುತ್ತಿದ್ದು, ಒಂದು ವಾರದಲ್ಲಿ ಸರಾಸರಿಯಾಗಿ ೬ಕೆ.ಜಿ ಹೂ ಕೊಯ್ಲು ಮಾಡಿ ಒಂದು ತಿಂಗಳಲ್ಲಿ ರೂ.೧೦ ಸಾವಿರ ಸಂಪಾದಿಸುತ್ತಿದ್ದಾರೆ. ಆದರೆ ಅವರು ಅರ್ಧಕ್ಕಿಂತ ಹೆಚ್ಚಾಗಿ ಖರ್ಚನ್ನು ಮಾಡಿ, ೩-೪ ಸಾವಿರದಷ್ಟು ನಿವ್ವಳ ಆದಾಯ ಗಳಿಸುತ್ತಿದ್ದರು. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ನಡೆಸಿದ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ೨೦೧೭ರಲ್ಲಿ ಭಾಗವಹಿಸಿದ ಮಹೇಶ್‌ರವರಿಗೆ ಹೊಸ ತಳಿಗಳ ಬಗ್ಗೆ ಆಸಕ್ತಿ ಮೂಡಿದ್ದು, ನವೆಂಬರ್ ೨೦೧೭ರಲ್ಲಿ, ೨೦೦೦ ಸಸಿಗಳನ್ನು ನೆಟ್ಟಿದ್ದು, ಈಗ ನಾಲ್ಕು ದಿನಗಳಿಗೊಮ್ಮೆ ೩೦ ರಿಂದ ೩೫ ಕೆ.ಜಿ.ಯಷ್ಟು ಹೂಗಳನ್ನು ಮಾರಾಟ ಮಾಡುತ್ತಿದ್ದಾರೆ. ೧೦೦೦ ಸ್ಥಳೀಯ ತಳಿಯಿಂದ ೨ ರಿಂದ ೩ ಕೆ.ಜಿಯಷ್ಟೇ ಹೂಗಳನ್ನು ಕೊಯ್ಲು ಮಾಡುತ್ತಿದ್ದಾರೆ. ಈ ತಳಿಗಳಿಂದ, ೨೦೧೮ನೇ ಜನವರಿ ತಿಂಗಳಿಂದ ಕಟಾವು ಪ್ರಾರಂಭವಾಗಿದ್ದು ಈಗಾಗಲೇ ೨೦೦೦ ಗಿಡದಿಂದ ಸುಮಾರು ೮೦೦ ಕೆ.ಜಿ.ಗಳಷ್ಟು ಹೂಗಳನ್ನು ಮಾರಾಟ ಮಾಡಿದ್ದುಇನ್ನೂ ಹೆಚ್ಚಿನ ಹೂಗಳನ್ನು ಕೊಯ್ಯುವ ಸಾಧ್ಯತೆ ಇದೆ.

ಈ ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಖರ್ಚು-ವೆಚ್ಚ ಮತ್ತು ಆದಾಯ ನೋಡಿದಾಗ ಸೆಪ್ಟಂಬರ್ ೨೦೧೮ರ ನಂತರ ಒಂದು ತಿಂಗಳಿಗೆ ಒಟ್ಟು ಖರ್ಚು ೨೦,೦೦೦ಸಾವಿರ ಮಾಡುವುದರಿಂದ ತಿಂಗಳ ನಿವ್ವಳ ಆದಾಯ ೬೫,೦೦೦ಸಾವಿರದಷ್ಟು ಬರುವ ಸಾಧ್ಯತೆ ಇದೆ. ಮಹೇಶ್‌ರವರು ಈಗಾಗಲೇ ಇನ್ನೂ ಎರಡು ಎಕರೆ ಪ್ರದೇಶದಲ್ಲಿ ಈ ತಳಿಗಳನ್ನು ಮತ್ತು ಮುಂಬರುವ ಹೊಸ ತಳಿಗಳನ್ನು ಹೆಚ್ಚಿನ ರೀತಿಯಲ್ಲಿ ಬೆಳೆಯುವುದಕ್ಕೆ ತಯಾರಿ ಮಾಡುತ್ತಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಗಿಡಗಳು ಬೇಕಾದಲ್ಲಿ, ಈ ಕೆಳಕಂಡವರನ್ನು ಸಂಪರ್ಕಿಸಿ: ನಿರ್ದೇಶಕರು, ಭಾರತೀಯ ಸಂಶೋಧನಾ ಸಂಸ್ಥೆ, ದೂರವಾಣಿ ೦೮೦-೨೩೦೮೬೧೦೦. ಡಾ.ಸಿ.ಅಶ್ವತ್ಥ್ -೯೩೭೯೭೮೫೬೯೨, ಮಹೇಶ್(ರೈತರು)- ೯೭೪೩೦೪೦೦೨೯

ಪಟ್ಟಿ ೧ ಕನಕಾಂಬರ ಬೆಳೆಯುವ ಖರ್ಚು-ವೆಚ್ಚ ಮತ್ತು ಆದಾಯ(೨೦೦೦ ಗಿಡಗಳಿಗೆ)

೧. ಆವರ್ತಕ ಖರ್ಚುಗಳು ೧,೧೫,೦೦೬.೦೦
ಎ. ಕೂಲಿ ಕಾರ್ಮಿಕರ ವೆಚ್ಚಗಳು (ಟ್ರ್ಯಾಕ್ಟರ್ ವೆಚ್ಚ ಸೇರಿ) ೭೦,೪೭೫.೦೦
ಬಿ. ಪೌಷ್ಟಿಕಾಂಶದ ವೆಚ್ಚಗಳು (ಹಸಿರು ಗೊಬ್ಬರ, ರಸಾಯನಿಕ ಮತ್ತು ನೀರಿನಲ್ಲಿ ಕರಗುವ ಗೊಬ್ಬರ) ೧೦,೫೩೧.೦೦
ಸಿ. ಸಸಿಗಳ ಖರ್ಚು ೧೫,೮೦೦.೦೦
ಐ.ಐ.ಎಚ್.ಆರ್ ತಳಿ(೨೦೦೦) ಅರ್ಕಾ ಅಂಬರ, ಅರ್ಕಾ ಶ್ರೇಯಾ ೧೫,೦೦೦.೦೦
ಸ್ಥಳೀಯ ತಳಿ(೧೦೦೦) ೮೦೦.೦೦
ಡಿ. ಸಸ್ಯ ಸಂರಕ್ಷಣೆಯ ವೆಚ್ಚಗಳು ೧೦,೦೦೦.೦೦
ಇ. ಇತರೆ ವೆಚ್ಚಗಳು (ಸಸಿ ಸಾಗಾಣಿಕೆ, ಮಲ್ಚಿಂಗ್, ಇತರೆ) ೮೨೦೦೦.೦೦
೨. ಮಾರುಕಟ್ಟೆ ಖರ್ಚುಗಳು ೫೨,೩೦೦.೦೦
ಮಾರಾಟ ಕಮೀಷನ್ ೨೬,೦೭೦.೦೦
ಸಾಗಾಟ ಖರ್ಚು ೭,೩೨೦.೦೦
ಪ್ಯಾಕಿಂಗ್ ಮತ್ತು ಇತರೆ ಖರ್ಚು ೩,೬೬೦.೦೦
ಕೂಲಿ ಮತ್ತು ಮಾರಾಟ ಮಾಡುವಾಗ ಇತರೆ ಖರ್ಚುಗಳು ೧೫,೨೫೦.೦೦
೩. ಸ್ಥಿರ ಸಂಪನ್ಮೂಲಗಳ ಮೇಲಿನ ಖರ್ಚು(ಪಂಪ್ ಸೆಟ್, ಬಾವಿ, ಪೈಪ್‌ಗಳು, ಸಿಂಪರಣೆ ಉಪಕರಣಗಳು) ೨೧,೧೨೮.೦೦
೪. ಒಟ್ಟು ಬೆಳೆಯುವ ಖರ್ಚು ೧,೮೮,೪೩೪.೦೦
ಒಟ್ಟು ಆದಾಯ (ಇಲ್ಲಿಯವರೆಗೆ) ೨,೬೦,೭೦೦.೦೦
೫. ನಿವ್ವಳ ಆದಾಯ ಆವರ್ತಕ ಖರ್ಚಿನ ಮೇಲೆ ೯೩,೩೯೪.೦೦
೬. ನಿವ್ವಳ ಆದಾಯ ಒಟ್ಟು ಖರ್ಚಿನ ಮೇಲೆ ೭೨,೨೬೬.೦೦

ಐ.ಐ.ಎಚ್.ಆರ್ ತಳಿಯ ಪ್ರಯೋಜನಗಳು

ಇಳುವರಿ (೨೫ ಗುಂಟೆ) ಇಳುವರಿ (೧ ಗಿಡಕ್ಕೆ)
ಐ.ಐ.ಎಚ್.ಆರ್ ತಳಿ(೨೦೦೦ ಗಿಡಗಳು) ೭೯೫.೬ ಕೆ.ಜಿ. ೩೯೮ ಗ್ರಾಂ
ಸ್ಥಳಿಯ ತಳಿ(೧೦೦೦ ಗಿಡಗಳು) ೭೩.೪ ಕೆ.ಜಿ. ೭೩.೪ ಗ್ರಾಂ
ಒಟ್ಟು ೮೬೯.೦ ಕೆ.ಜಿ. ೨೯೦ ಗ್ರಾಂ

ಮುಂದಿನ ಖರ್ಚು ಮತ್ತು ಆದಾಯ(೨೫ ಗುಂಟೆ) ಪ್ರತಿ ತಿಂಗಳಿಗೆ - ಸೆಪ್ಟೆಂಬರ್ ನಂತರ

ಉತ್ಪಾದನಾ ಖರ್ಚು(ಅಂತರ ಬೇಸಾಯ, ಪೌಷ್ಟಿಕಾಂಶ, ಕೀಟನಾಶಕಗಳು, ಕೊಯ್ಲು) ೬,೧೨೫.೦೦ ಮಾರಾಟ ಖರ್ಚು(ಮಾರಾಟ ಕಮೀಷನ್, ಸಾಗಾಟ ಖರ್ಚು, ಕೂಲಿ ಮತ್ತು ಮಾರಾಟ ಮಾಡುವಾಗ ಇತರೆ ಖರ್ಚುಗಳು) ೧೨,೫೬೦.೦೦ ಸ್ಥಿರ ಸಂಪನ್ಮೂಲಗಳ ಮೇಲಿನ ಖರ್ಚು ೧,೭೬೧.೦೦ ಒಟ್ಟು ಖರ್ಚು ೨೦,೪೪೬.೦೦ ಒಟ್ಟು ಆದಾಯ ಇಳುವರಿ(ಕೆ.ಜಿ./ತಿಂಗಳು/೨೫ ಗುಂಟೆ) ೨೮೮ ನಿವ್ವಳ ಆದಾಯ ೮೬,೪೦೦.೦೦ ತಿಂಗಳಿಗೆ ನಿವ್ವಳ ಆದಾಯ ೬೫,೯೫೪.೦೦

--ಸಿ. ಅಶ್ವಥ್, ೯೩೭೯೭೮೫೬೯೨, ಪ್ರಧಾನ ವಿeನಿ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು