ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಕೃಷಿರಂಗ ಮುಂದುವರಿದ ಭಾಗ.....- ಬಲಿಪಶು

ಎಲ್. ಮಂಜುನಾಥ, ಕೆ. ಸತ್ಯನಾರಾಯಣ,
೯೪೪೯೫೨೦೧೫೧

ಯಮ: ಚಿತ್ರಗುಪ್ತರೆ, ಅಹವಾಲು ಕೇಳಿದ ಹಂದಿಗಳನ್ನು ಕರೆ ತನ್ನಿ. (ಚಿತ್ರಗುಪ್ತರು ಯಮಧೂತರಿಗೆ ಕೈಸನ್ನೆ ಮಾಡುವರು ಹಂದಿಗಳು ಬಂದು ನಿಲ್ಲುವವು)

ಹಂದಿ ೧: ತಮ್ಮ ಭೂ ಲೋಕದ ಪ್ರವಾಸದಿಂದ ನಾವೆತ್ತಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತೆ ಪ್ರಭು.

ಯಮ: ಹಂದಿಗಳೇ ನಿಮ್ಮ ಉತ್ತರ ಸಿಗುವುದರ ಜೊತೆಗೆ ನಿಮ್ಮ ಮೇಲೆ ಗೌರವ ಕೂಡ ಹೆಚ್ಚಾಗಿದೆ.

ಹಂದಿ: ಧನ್ಯವಾದಗಳು ಮಹಾಸ್ವಾಮಿ

ಯಮ: ಚಿತ್ರಗುಪ್ತರೆ ನಮ್ಮ ಭೂಲೋಕದ ಸತ್ಯ ಶೋಧನೆಯ ಭೇಟಿಯ ಸಾರಾಂಶವನ್ನು ಜೋರಾಗಿ ಓದಿಸಿ.

ಯಮಧೂತ ೧: ಹಂದಿಗಳೆ ನಿಮ್ಮನ್ನ ಸ್ವೇಚ್ಛೆಯಾಗಿ ಮೋರಿ /ಚರಂಡಿಗಳಲ್ಲಿ ಬಿಡುವುದರಿಂದ ನಿಮಗೆ ಮತ್ತು ನಿಮ್ಮನ್ನು ಸಾಕುವವರಿಗೆ ಕಳಂಕ ಬಂದಿದೆ. ವ್ಯವಸ್ಥಿತವಾಗಿ ಫಾರಮ್‌ಗಳಲ್ಲಿ ಅಥವಾ ಗೂಡಿನಲ್ಲಿ ಸಾಕುವುದರಿಂದ ನಿಮಗೆ ಇನ್ನಷ್ಟು ಗೌರವಾದರಗಳು ಲಭ್ಯವಾಗುತ್ತವೆ.

ಯಮಧೂತ ೨: ನಿಮ್ಮನ್ನ ಸ್ವೇಚ್ಛೆಯಾಗಿ ಬಿಡುವುದರ ಬದಲು ಗೂಡಿನಲ್ಲಿ ಸಾಕುವುದರಿಂದ ಮತ್ತು ನಿಮ್ಮ ಮಾಂಸವನ್ನು ಬೇಯಿಸಿ ತಿನ್ನುವುದರಿಂದ ಜನರು ಯಾವ ಕಾಯಿಲೆಗೂ ಹೆದರಬೇಕಾಗಿಲ್ಲ.

ಯಮಧೂತ ೩: ನಿಜವಾಗಿಯೂ ಹಂದಿ ಸಾಕಾಣಿಕೆ ಒಂದು ಒಳ್ಳೆಯ ಉದ್ಯಮವೇ. ಇದರಲ್ಲಿ ಇನ್ನಷ್ಟು ಜನ ಯುವಕರು ತೊಡಗಿಸಿಕೊಳ್ಳು ವುದರಿಂದ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ.

ಯಮಧೂತ ೧: ಹಂದಿ ಮಾಂಸವಂತೂ, ತುಂಬಾ ರುಚಿಕರ.

ಹಂದಿಗಳು: ಹೌದು ಸ್ವಾಮಿ, ನೀವು ಹೇಳುತ್ತಿರುವುದು ಸತ್ಯದ ಮಾತು.

ಯಮ: ಚಿತ್ರಗುಪ್ತರೆ, ಈ ನಮ್ಮ ಪ್ರವಾಸದ ಸಾರಾಂಶವನ್ನು ಎಲ್ಲರಿಗೂ ತಲುಪುವಂತೆ ಮಾಡಿ. ಸಭೆ ವಿಸರ್ಜಿಸಲಾಗಿದೆ.

--ಎಲ್. ಮಂಜುನಾಥ, ೯೪೪೯೫೨೦೧೫೧ ಮತ್ತು ಕೆ. ಸತ್ಯನಾರಾಯಣ, ಪಶುವೈದ್ಯಕೀಯ ಮಹಾವಿದ್ಯಾಲಯ, ಹಾಸನ