ನೇಗಿಲ ಮಿಡಿತ  ಸಂಪುಟ 5 ಸಂಚಿಕೆ 12

ಮಿಡಿತ - ತುಡಿತ

ಎಂ. ಸಿ. ಮಲ್ಲಿಕಾರ್ಜುನ
೯೭೪೦೩೬೯೩೨೭

ನೇಗಿಲ ಮಿಡಿತ ಒಂದು ಉತ್ತಮ ಮಾಸಪತ್ರಿಕೆ. ರೈತರಿಗೆ ಸೂಕ್ತವಾದ ಕಾಲಕ್ಕೆ ಅನುಗುಣವಾದ ಬೆಳೆಗಳ ಮಾರ್ಗದರ್ಶನ, ಸಾಧಕರ ಪರಿಚಯ ಹಾಗೂ ಮಿಡಿತಗಳೊಂದಿಗೆ ಸುಂದರವಾದ ಚಿತ್ರಗಳ ಸಹಿತ ಮೂಡಿಬರುತ್ತಿದೆ. ನಮ್ಮ ಎಲ್ಲಾ ರೈತರು ಅಗತ್ಯವಾಗಿ ಓದಲೇಬೇಕಾದ ಮಾಸಪತ್ರಿಕೆ ಇದಾಗಿದೆ. ಇದರಲ್ಲಿ ವೈಜ್ಞಾನಿಕವಾದಂತಹ ಮಾಹಿತಿಯನ್ನು ಲೇಖಕರು ಪರಿಚಯಿಸುತ್ತಿದ್ದಾರೆ. ಇಲ್ಲಿನ ಲೇಖನಗಳ ಲೇಖಕರಿಗೆ ದೂರವಾಣಿ ಮೂಲಕ ಮಾತನಾಡಿಸಿದಾಗ ನಮ್ಮ ಸಮಸ್ಯೆಗಳಿಗೆ ಹೆಚ್ಚಿನ ಮಾಹಿತಿ ನೀಡುತ್ತಿರುವುದು ನಿಜಕ್ಕೂ ಒಳ್ಳೆಯ ಪ್ರಯೋಗ. ನಾನು ಕಳೆದ ಎರಡು ವರ್ಷಗಳಿಂದ ಚಂದಾದಾರನಾಗಿ ಈ ಪತ್ರಿಕೆಯನ್ನು ತರಿಸಿಕೊಂಡು ಓದುತ್ತಿದ್ದೇನೆ. ಎಲ್ಲಾ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂಬುದು ನನ್ನ ಅಭಿಲಾಷೆಯಾಗಿದೆ. ಸಂಪಾದಕ ಮಂಡಳಿಗೆ ನನ್ನ ಅಭಿನಂದನೆಗಳು.

--ಜಿ.ಬಿ. ರವಿಶಂಕರ್, ಹುಲಿಕೆರೆ (ಗ್ರಾಮ) ಜಾನಕಲ್ (ಅಂಚೆ) ಹೊಸದುರ್ಗ(ತಾ.), ಚಿತ್ರದುರ್ಗ

ನೇಗಿಲ ಮಿಡಿತ ಪತ್ರಿಕೆ ಬಹಳ ಚೆನ್ನಾಗಿ ಬರ್ತಾ ಇದೆ. ಕೃಷಿಯ ಎಲ್ಲಾ ಕ್ಷೇತ್ರದ ಬಗ್ಗೆ ಈ ಪತ್ರಿಕೆಯಲ್ಲಿ ಮಾಹಿತಿಯು ಬರುತ್ತಾ ಇದೆ. ಯಾವ ಬೆಳೆ ಬೆಳೆಯಬೇಕು, ಯಾವ್ಯಾವ ರೀತಿ ಬೆಳೆಯಬೇಕು ಎನ್ನುವ ಲೇಖನಗಳು ಪ್ರಕಟವಾಗುತ್ತಿರುವುದು ನಮಗೆ ಉಪಯುಕ್ತವಾಗುತ್ತಿದೆ. ಕರ್ನಾಟಕದ ಎಲ್ಲಾ ಭಾಗಗಳ ಬೆಳೆಗಳ ಬಗ್ಗೆ ಲೇಖನ ಬರುತ್ತಿರುವುದು ರೈತರಿಗೆ ಅನುಕೂಲಕಾರಿಯಾಗಿದೆ. ಇಲ್ಲಿ ಕೊಡುವ ರೈತರ ಸಾಧನೆಗಳ ಮಾಹಿತಿಯನ್ನು ನೀಡುವುದರ ಜೊತೆಗೆ ಅವರ ಮೊಬೈಲ್ ಸಂಖ್ಯೆ ನೀಡುವುದರಿಂದ ನಾವುಗಳು ಅವರನ್ನು ಸಂಪರ್ಕಿಸಿ ಸಲಹೆ ಹಾಗೂ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಕಾಲಕಾಲಕ್ಕೆ ನಾವುಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಇತರೆ ಎಲ್ಲಾ ವಿಚಾರಗಳನ್ನು ತಿಳಿಸಿಕೊಡುತ್ತಿರುವ ಈ ಪತ್ರಿಕೆಗೆ ನನ್ನ ಅಭಿನಂದನೆಗಳು.

--ಎನ್. ಹೆಚ್. ಪಂಚಾಕ್ಷರಿ ಬಿನ್ ಎನ್.ಹೆಚ್.ರಾಮಪ್ಪ ಕುಂಬಳೂರು, ಹೊನ್ನಾಳಿ(ತಾ.), ದಾವಣಗೆರೆ

ನೇಗಿಲ ಮಿಡಿತ ಮಾಸ ಪತ್ರಿಕೆಯನ್ನು ನಮ್ಮ ರೈತರು ಓದುವ ಮೂಲಕ ವೈಜ್ಞಾನಿಕ ತಿಳುವಳಿಕೆ ಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿ ಯಾಗಿದೆ. ಹಾಗೆಯೇ ಇಲ್ಲಿ ಓದಿದ್ದನ್ನು ಅನುಸರಿಸು ವಂತಾಗಬೇಕು. ಇದರ ಜೊತೆಗೆ ಕೃಷಿ ವಿಜ್ಞಾನಿಗಳನ್ನು ಭೇಟಿ ಮಾಡಿ ಅವರಿಂದ ಹೆಚ್ಚಿನ ಮಾಹಿತಿಯನ್ನು ಪಡೆದು ಅನುಸರಿಸಿದರೆ ಇನ್ನೂ ಒಳ್ಳೆಯದು. ನೀವು ಲೇಖಕರ ದೂರವಾಣಿ ಸಂಖ್ಯೆ ಕೊಟ್ಟಿರುವುದು ನಮಗೆ ತುಂಬಾ ಸಹಕಾರಿಯಾಗಿದೆ. ತರಕಾರಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೊಟ್ಟರೆ ನಮಗೆ ಹೆಚ್ಚು ಅನುಕೂಲವಾಗುತ್ತದೆ. ರೈತರ ಸಾಧನೆಗಳನ್ನು ಹಾಕುತ್ತಿದ್ದೀರಿ ಅದರಿಂದ ನಮಗೆ ಕೃಷಿ ಮಾಡಲು ಹುಮ್ಮಸ್ಸು ಬರುತ್ತಿದೆ. ಪತ್ರಿಕೆ ಓದಿ ಸುಮ್ಮನೆ ಕೂತರೆ ಆಗುವುದಿಲ್ಲ, ಅದರಂತೆ ಅನುಸರಿಸುವುದು ಮುಖ್ಯ ಎಂಬುದು ನನ್ನ ಅನಿಸಿಕೆಯಾಗಿದೆ.

--ಪ್ರದೀಪ್ ಕುಮಾರ್ ಬಿ.ಹೆಚ್. ಬಿನ್ ಲೇ. ಹನುಮೇಗೌಡ ಬೆಳವಾಡಿ, ವಯಾ ಬಸವಾ ಪಟ್ಟಣ ಅರಕಲಗೋಡು(ತಾ.) ಹಾಸನ

ನೇಗಿಲ ಮಿಡಿತ ಪತ್ರಿಕೆಯನ್ನು ಓದಿಕೊಂಡು ನಾವು ಜಮೀನಿನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ಈಗ ನಾವು ತರಕಾರಿ ಬೆಳೆಗಳಾದ ಮೆಣಸಿನ ಗಿಡ, ಟೊಮಾಟೊ, ಬದನೆ ಬೆಳೆಗಳಲ್ಲಿ ಸಾಕಷ್ಟು ವೈಜ್ಞಾನಿಕ ಸುಧಾರಣೆಯನ್ನು ಮಾಡಿಕೊಂಡಿದ್ದೇವೆ. ತರಕಾರಿ ಬೆಳೆಗಳಲ್ಲಿ ಬರುವಂತಹ ಬೆಳೆಗಳ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆ, ಕೀಟನಾಶಕಗಳ ಸಿಂಪರಣೆ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಬೇಕಾಗಿದೆ. ಇದರ ಜೊತೆಗೆ ನಮಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳ ಮಾಹಿತಿಯನ್ನು ನೀಡಿದರೆ ನಮ್ಮ ಎಲ್ಲಾ ರೈತರಿಗೆ ಅನುಕೂಲವಾಗುತ್ತದೆ. ನಿಮ್ಮ ಪತ್ರಿಕೆ ತುಂಬಾ ಚೆನ್ನಾಗಿ ಬರುತ್ತಿದ್ದು, ನಿಮ್ಮ ಸಂಪಾದಕ ಬಳಗಕ್ಕೆ ನನ್ನ ವೈಯಕ್ತಿಕ ಅಭಿನಂದನೆಗಳು.

--ಶಂಕರಗೌಡ ಪಾಟೀಲ, ಉತ್ತೂರು, ಮುದೋಳ(ತಾ.), ಬಾಗಲಕೋಟ


--ಎಂ. ಸಿ. ಮಲ್ಲಿಕಾರ್ಜುನ, ೯೭೪೦೩೬೯೩೨೭, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ