ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಜೈವಿಕ ಗೊಬ್ಬರದ ಮಹತ್ವ ಇದನ್ನರಿತರೆ ನಮಗಿರುವುದು ಲಾಭ

ಸುರೇಶ ಚ. ಅಳಗುಂಡಗಿ
9731652967
1
 • ಕಾಂಪೋಸ್ಟ್: ಸಸ್ಯಮೂಲದ ಸಾವಯವ ಪದಾರ್ಥಗಳನ್ನು ಕಳಿಯುವಿಕೆಗೆ ಒಳಪಡಿಸಿ ತಯಾರಿಸುವ ಗೊಬ್ಬರಕ್ಕೆ ಕಾಂಪೋಸ್ಟ್ ಎನ್ನುತ್ತಾರೆ. ಬೆಳೆಗಳ ಅವಶೇಷಗಳಾದ ದಂಟು, ಕಟ್ಟಿಗೆ, ಹುಲ್ಲು ಅಲ್ಲದೇ ಕಳೆಗಳು, ಶಹರದ ಕಸಕಡ್ಡಿ ಉಪಯೋಗಿಸಬಹುದು.
 • ಕಾಂಪೋಸ್ಟ್ ತಯಾರಿಕೆಯ ಉದ್ದೇಶ ಸಾವಯವ ಪದಾರ್ಥಗಳ ಮೂಲ ಪ್ರಮಾಣವನ್ನು ಕಡಿಮೆ ಮಾಡಿ ಅವುಗಳಲ್ಲಿಯ ಪೋಷಕಾಂಶಗಳ ಪೂರೈಕೆಯನ್ನು ಹೆಚ್ಚಿಸುವುದೇ ಆಗಿದೆ.
 • ಕಾಂಪೋಸ್ಟ್ ತಯಾರಿಕೆಯಲ್ಲಿ ಹಲವು ವಿಧಾನಗಳಿದ್ದು ಬೆಂಗಳೂರು ಪದ್ಧತಿ ಯೋಗ್ಯವಾದುದು. ಸುಮಾರು ೩೦ ಅಡಿ ಉದ್ದ ಘಿ ೧೦ ಅಡಿ ಅಗಲ ಘಿ ೩-೩.೫ ಅಡಿ ಆಳ ತಗ್ಗು ತೆಗೆಯಬೇಕು.

 • ಕಾಂಪೋಸ್ಟ್ಗೆ ಉಪಯೋಗಿಸುವ ವಸ್ತುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ನಂತರ ಸುಮಾರು ೮-೧೦ ಇಂಚು ದಪ್ಪನಾದ ಪದರ ಹಾಕಬೇಕು. ಈ ಪದರದ ಮೇಲೆ ಸಗಣಿ-ಮೂತ್ರ-ಮಣ್ಣು ಮಿಶ್ರಿತ ರಾಡಿಯನ್ನು ತೆಳುವಾಗಿ ಹರಡಬೇಕು. ನಂತರ ಸಾವಯವ ವಸ್ತುಗಳ ಪದರ, ಹೀಗೆ ಒಂದಾದ ನಂತರ ಒಂದನ್ನು ಹಾಕುತ್ತಾ ಹೋಗಬೇಕು. ಸಾವಯವ ಅವಶೇಷಗಳನ್ನು ತೇವವಾಗಿಸಲು ಪ್ರತಿ ಪದರದ ಮೇಲೆ ನೀರು ಸಿಂಪರಣೆ ಮಾಡುತ್ತಾ ಹೋಗಬೇಕು.
 • ಹೀಗೆ ತುಂಬಿದ ವಸ್ತುಗಳು ಭೂಮಿಯ ಮೇಲೆ ೨ ಅಡಿಯಷ್ಟು ಎತ್ತರಕ್ಕೆ ಬಂದಾಗ ಗೋಲಾಕಾರದಲ್ಲಿ ಹಸಿ ಮಣ್ಣಿನಿಂದ ಮುಚ್ಚಬೇಕು. ೪-೫ ತಿಂಗಳುಗಳ ನಂತರ ಗೊಬ್ಬರ ಚೆನ್ನಾಗಿ ಕಳಿತು ಹೊಲಕ್ಕೆ ಹಾಕಲು ಯೋಗ್ಯವಾಗಿರುತ್ತದೆ.
 • ಹಸಿರು ಗೊಬ್ಬರದ ಬೆಳೆ:

 • ಹಸಿರು ಗೊಬ್ಬರದ ಬೆಳೆಗಳನ್ನು ಅದೇ ಜಮೀನಿನಲ್ಲಿ ಬೆಳೆದು ಭೂಮಿಗೆ ಸೇರಿಸುವುದು. ಉದಾ: ಸೆಣಬು, ಡೈಂಚಾ. ಹುರುಳಿ ಚೊಗಚಿ, ಅಲಸಂದಿ
 • ಹವಾಮಾನ ಪರಿಸ್ಥಿತಿ ಅನುಸರಿಸಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರುವಾಗ ಸೇರಿಸುವುದು ಉತ್ತಮ. ಈ ಸಮಯದಲ್ಲಿ ಇಂಗಾಲ ಮತ್ತು ಸಾರಜನಕದ ಪ್ರಮಾಣ ಕಡಿಮೆ ಇರುತ್ತದೆ.
 • ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ನೇಗಿಲಿನಿಂದ ಅಥವಾ ಎತ್ತಿನ ರೆಂಬೆಯಿಂದ ೭-೮ ಅಂಗುಲ ಆಳಕ್ಕೆ ಮಣ್ಣಿನಲ್ಲಿ ಪೂರ್ತಿ ಮುಚ್ಚುವ ಹಾಗೆ ಸೇರಿಸಬೇಕು.
 • ಮುಂದಿನ ಬೆಳೆ ಬೆಳೆಯುವುದಕ್ಕಿಂತ ಒಂದು ತಿಂಗಳು ಮೊದಲು ಹಸಿರು ಗೊಬ್ಬರ ಬೆಳೆಯನ್ನು ಮಣ್ಣಿನಲ್ಲಿ ಸೇರಿಸುವುದು ಸೂಕ್ತ.
 • ಹೆಕ್ಟೇರಿಗೆ ೧೫-೩೦ ಟನ್ ಹಸಿರುಗೊಬ್ಬರ ಸೇರಿಸುವುದರಿಂದ ಬೆಳೆಗೆ ಸುಮಾರು ೫೦-೭೫ ಕಿ.ಗ್ರಾಂ.ನಷ್ಟು ಸಾರಜನಕ ದೊರಕಿದಂತಾಗುತ್ತದೆ
 • ಹಸಿರೆಲೆ ಗಿಡಗಳು

  ಜಮೀನಿನ ಸುತ್ತ ಅಥವಾ ಬದುಗಳ ಮೇಲೆ ಬೆಳೆದು ಅವುಗಳ ಎಲೆ ಹಾಗೂ ಟೊಂಗೆಗಳನ್ನು ತಂದು ಮತ್ತೊಂದು ಜಮೀನಿಗೆ ಸೇರಿಸುವುದು. ಉದಾ: ಹೊಂಗೆ, ಗ್ಲಿರಿಸಿಡಿಯಾ, ಸುಬಾಬುಲ್ ಇತ್ಯಾದಿ. ಹೊಂಗೆ, ಗ್ಲಿರಿಸಿಡಿಯಾ, ಸುಬಾಬುಲ್ ಇವುಗಳನ್ನು ೩ರಿಂದ ೪ ತಿಂಗಳಿಗೊಮ್ಮೆ ಪ್ರತಿ ಗಿಡದಿಂದ ೧೦ರಿಂದ ೧೫ ಕಿ.ಗ್ರಾಂನಷ್ಟು ತಪ್ಪಲುಗಳನ್ನು ಭೂಮಿಗೆ ಸೇರಿಸುವುದರಿಂದ ಪ್ರತಿ ಹೆಕ್ಟೇರ್ಗೆ ೬೦-೨೦೦ ಕಿ.ಗ್ರಾಂನಷ್ಟು ಸಾರಜನಕ ದೊರಕಿದಂತಾಗುತ್ತದೆ