ಮಾಡುವ ವಿಧಾನ: ಹದವಾಗಿ ಬೆಳೆದ ಅಡಿಕೆಯನ್ನು ಸುಲಿದು ಸ್ಲೈಸ್ ಆಕಾರದಲ್ಲಿ ಕೊರೆದು ನೀರಿನಲ್ಲಿ ೨ರಿಂದ ೩ ದಿನ ನೆನಸಬೇಕು. ಪ್ರತಿ ದಿನ ನೀರನ್ನು ಬದಲಿಸಬೇಕು. ನಂತರ ಅಡಿಕೆ ಚೊಗರು ಹೋಗುವ ಹಾಗೆ ಚೆನ್ನಾಗಿ ಬೇಯಿಸಿ ನೀರು ತೆಗೆಯಬೇಕು. ಅನಂತರ ಹಾಲಿನಲ್ಲಿ ಅಡಿಕೆ ಹಾಕಿ ಬೇಕಾದಷ್ಟು ಪ್ರಮಾಣದಲ್ಲಿ ಸಕ್ಕರೆ ಹಾಕಿ ಬೇಯಿಸಬೇಕು. ಪರಿಮಳ ದ್ರವ್ಯಗಳಾದ ಲವಂಗ, ಏಲಕ್ಕಿ, ಮೊಗ್ಗು, ಪಚ್ಚ ಕರ್ಪೂರಗಳನ್ನು ಪುಡಿ ಮಾಡಿ ಅದರೊಂದಿಗೆ ಬೇಯಲು ಹಾಕಬೇಕು. ಸಕ್ಕರೆ ಪಾಕ ಬರುವವರೆಗೆ ಬೇಯಿಸಿ ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.