ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ತೊಗರಿಯ ಬೂದಿ ರೋಗ

ಡಾ. ಪ್ರೇಮ, ಜಿ. ಯು
೭೨೫೯೬೨೭೬೭೪
1

ರೋಗಬಾಧಿತ ಗಿಡದ ಎಲೆಗಳ ಮೇಲ್ಭಾಗದ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಕಾಣುತ್ತವೆ. ಎಲೆಗಳ ಕೆಳಭಾಗದಲ್ಲಿ ಬಿಳಿ ಅಥವಾ ಬೂದು ಬಣ್ಣದ ಶಿಲೀಂಧ್ರ ಬೆಳವಣಿಗೆ ಕಂಡುಬರುತ್ತದೆ. ಹೆಚ್ಚು ಶುಷ್ಕ ವಾತಾವರಣದಲ್ಲಿ ರೋಗಭಾದಿತ ಎಲೆಗಳು ಮುಟುರಿಕೊಳ್ಳುತ್ತವೆ. ರೋಗದ ತೀವ್ರತೆ ಹೆಚ್ಚಾದಾಗ ಎಲೆಗಳು ಕ್ರಮೇಣ ಒಣಗಿ ಉದುರಲಾರಂಭಿಸುತ್ತವೆ. ಎಲೆಯ ಕುಡಿ, ಹೂವಿನ ಹೀಚು, ಹೂ ಮತ್ತು ಕಾಯಿಗಳ ಮೇಲೂ ಸಹ ಬೂದು ಬಣ್ಣದ ಶಿಲೀಂಧ್ರವನ್ನು ಕಾಣಬಹುದು. ರೋಗ ಹೆಚ್ಚಾದಂತೆ ಕಾಳುಕಟ್ಟುವಿಕೆಯ ಪ್ರಮಾಣ ಮತ್ತು ಇಳುವರಿ ಕಡಿಮೆಯಾಗುತ್ತದೆ. ಈ ರೋಗವು ಆಯ್ಡಿಯಾಪ್ಸಿಸ್ ಟಾರಿಕಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಈ ಶಿಲೀಂಧ್ರವು ಬಹುವಾರ್ಷಿಕ ತೊಗರಿ, ಆಸರೆ ಸಸ್ಯಗಳು ಮತ್ತು ಗಿಡದ ಅವಶೇಷಗಳ ಮೇಲೆ ಆಶ್ರಯ ಪಡೆಯುತ್ತದೆ. ಬಿತ್ತನೆಯು ತಡವಾದಾಗ ಮತ್ತು ನೀರಾವರಿ ಪ್ರದೇಶಗಳಲ್ಲಿ ಬೂದಿ ರೋಗದ ಪ್ರಮಾಣ ಹೆಚ್ಚು. ನಿರ್ವಹಣಾ ಕ್ರಮಗಳು : ಬೆಳೆ ಪರಿವರ್ತನೆಯನ್ನು ಅನುಸರಿಸಬೇಕು. ಬಹುವಾರ್ಷಿಕ ತೊಗರಿ ಇರದೆ ಇರುವ ಅಥವಾ ಬಹುವಾರ್ಷಿಕ ತೊಗರಿಯಿಂದ ದೂರ ಇರುವ ಪ್ರದೇಶಗಳಲ್ಲಿ ಬಿತ್ತನೆ ಮಾಡಬೇಕು. ಪ್ರತಿ ಲೀಟರ್ ನೀರಿಗೆ ನೀರಿನಲ್ಲಿ ಕರಗುವ ಗಂಧಕ ೩ ಗ್ರಾಂ. ಅಥವಾ ಟ್ರೈಡೆಮೆಫಾನ್ ೧ ಗ್ರಾಂ ಅಥವಾ ಕೆರಾಥೇನ್ ೦.೩ ಮಿ.ಲೀ. ಅಥವಾ ಕಾರ್ಬನ್ಡೈಜಿಂ ೧ಗ್ರಾಂ ಅಥವಾ ಡೈಫೆನ್ಕೋನಾಜೋಲ್ ೧.೦ ಮಿ.ಲೀ. ಅಥವಾ ಅಥವಾ ಹೆಕ್ಸಕೊನಾಜೋಲ್ ೧.೦ ಮಿ.ಲೀ. ಬೆರೆಸಿ ಸಿಂಪಡಿಸಿದರೆ ರೋಗದ ತೀವ್ರತೆ ಕಡಿಮೆಯಾಗುತ್ತದೆ.