ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಕೃಷಿಯಲ್ಲಿ ರಾಸಾಯನಿಕಗಳನ್ನು ಬಳಸುವುದ ತಿಳಿದರೆ ಚೆನ್ನ

ತೇಜೇಶ, ಎ.ಜಿ.,
9538387262
1

ಹೆಚ್ಚುತ್ತಿರುವ ಜನಸಂಖ್ಯೆಯ ಹಸಿವನ್ನು ನೀಗಿಸಲು ಅಧುನಿಕ ಕೃಷಿಯಲ್ಲಿ ಅಧಿಕ ಇಳುವರಿಯ ತಳಿಗಳ ಪರಿಚಯಿಸುವುದರ ಜೊತೆಗೆ ಹಲವಾರು ಸಮಸ್ಯೆಗಳೂ ಪರಿಚಯವಾಗಿವೆ. ಅವುಗಳಲ್ಲಿ ಅತೀ ಮುಖ್ಯವಾದುವುಗಳೆಂದರೆ-ಉತ್ಪಾದನೆ ಮಟ್ಟದಲ್ಲಿ ಕಳೆ, ರೋಗ ಮತ್ತು ಕೀಟಗಳ ಸಮಸ್ಯೆ. ಕೇವಲ ಕಳೆ, ರೋಗ ಮತ್ತು ಕೀಟಗಳ ಹಾವಳಿಯಿಂದ ಕೃಷಿಯ ಒಟ್ಟು ಉತ್ಪಾದನೆಯ ಸರಿಸುಮಾರು ಶೇ. ೩೦ - ೪೦ ರಷ್ಟು ನಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ನಾನಾ ತಂತ್ರಜ್ಞಾನಗಳ ಅಭಿವೃದ್ಧಿಯೂ ಸಹ ಆಗಿದೆ ಮತ್ತು ಆಗುತ್ತಲೂ ಇದೆ. ಸಸ್ಯ ಸಂರಕ್ಷಣೆಯಲ್ಲಿ ನಾನಾ ಬಗೆಯ ನಿರ್ವಹಣಾ ವಿಧಾನಗಳಿದ್ದರೂ, ಆಧುನಿಕ ಕೃಷಿಯಲ್ಲಿ ಸಸ್ಯ ಸಂರಕ್ಷಣೆಯಲ್ಲಿ ರಾಸಾಯನಿಕಗಳೇ ಮುಂಚೂಣಿಯಲ್ಲಿವೆ. ಕೃಷಿ ರಾಸಾಯನಿಕ ಗಳಿಲ್ಲದಿದ್ದರೆ ಕೃಷಿಯೇ ಇಲ್ಲ ಎಂಬ ದುಸ್ಥಿತಿ ಎದುರಾಗಿದೆ. ಪೀಡೆನಾಶಕಗಳು ಪೀಡೆಗಳನ್ನು ಕೊಲ್ಲುವುದರ ಜೊತೆಗೆ ನಮ್ಮನ್ನೂ ಕೊಲ್ಲುತ್ತದೆಯೆಂಬ ಕಟುಸತ್ಯ ಗೊತ್ತಿದ್ದರೂ ಕೂಡ ರೈತ ಮೊರೆಹೋಗುವುದು ಕೃಷಿರಾಸಾಯನಿಕಗಳಿಗೆ

 • ರಾಸಾಯನಿಕಗಳನ್ನು ಅತಿಯಾಗಿ ಬಳಸಿದಾಗ ಅವು ಆಹಾರ ಧಾನ್ಯಗಳಲ್ಲಿ ಬೆರೆತು ಮನುಷ್ಯನ ದೇಹ ಸೇರಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವ.
 • ಸ್ವಾಭಾವಿಕ ಸಸ್ಯವರ್ಗ, ಪರತಂತ್ರ ಹಾಗೂ ಪರಭಕ್ಷಕ ಕೀಟಗಳು, ಉಪಯುಕ್ತ ಜೀವಿಗಳಾದ ಜೇನುಹುಳು, ಪರಾಗ ಸ್ಪರ್ಶ ಮಾಡುವ ಅನೇಕ ಕೀಟಗಳು, ಕಪ್ಪೆ, ಹಾವು, ಪಕ್ಷಿಗಳು ನಾಶವಾಗುತ್ತವೆ.
 • ಮಣ್ಣಿನ ಆರೋಗ್ಯ ಸಂಪೂರ್ಣ ಹದಗೆಟ್ಟು, ಮುಂದಿನ ಪೀಳಿಗೆಗೆ ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯೇ ದಕ್ಕದಂತಹ ಪರಿಸ್ಥಿತಿ ಉಂಟಾಗಬಹುದು
 • ಪೀಡೆನಾಶಕಗಳಿಂದ ನೀರು ಮತ್ತು ಗಾಳಿಯ ಮಾಲಿನ್ಯವಾಗುತ್ತದೆ
 • ಪೀಡೆಗಳ ಮರು ಹಾವಳಿ ಪೀಡೆನಾಶಕಕ್ಕೆ ನಿರೋಧಕತೆಯನ್ನು ವೃದ್ಧಿಗೊಳಿಸುತ್ತದೆ
 • ನೇರವಾದ ಮತ್ತು ದೀರ್ಘಾವಧಿಯ ವಿಷದೊಂದಿಗಿನ ಸಂಪರ್ಕ ಮಾನವನ ಆರೋಗ್ಯಕ್ಕೆ ಮಾರಕವಾಗುತ್ತದೆ
 • ಮುಂಜಾಗ್ರತಾ ಕ್ರಮಗಳು

  10
 • ಸಾಧ್ಯವಾದಷ್ಟು ರೋಗ ನಿರೋಧಕ ತಳಿ ಗಳನ್ನೇ ಬಳಸುವುದು ಸೂಕ್ತ, ನಮಗೆ ಆಸರೆಯಾಗಿರುವ ಪ್ರಕೃತಿಯ ಬಗ್ಗೆ ಕಾಳಜಿ ವಹಿಸುವುದು, ಕೀಟಗಳ ಸ್ವಾಭಾವಿಕ ಶತ್ರುಗಳ ಬಗ್ಗೆ ಗಮನವಿಡಬೇಕು, ಜೈವಿಕ ಹತೋಟಿ ಕ್ರಮಗಳನ್ನು ಅನುಸರಿಸುವುದು, ರೋಗ/ಪೀಡೆಯನ್ನು ಸರಿಯಾಗಿ ಪರೀಕ್ಷಿಸಿದ ನಂತರವೇ ಅದಕ್ಕೆ ಶಿಫಾರಸ್ಸು ಮಾಡಿದ ಔಷಧವನ್ನೆ ಶಿಫಾರಸ್ಸು ಮಾಡಿದ ಪ್ರಮಾಣ ದಲ್ಲಿ ಬಳಸತಕ್ಕದ್ದು, ಔಷಧವನ್ನು ಕೊಳ್ಳುವಾಗ ಬಳಸುವ ದಿನಾಂಕವನ್ನು ತಪ್ಪದೇ ಪರಿಶೀಲಿಸಿ ಬಳಸಬೇಕು, ಪೀಡೆನಾಶಕಗಳ ದ್ರಾವಣ ತಯಾರಿಸಲು ಆದಷ್ಟು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಬೇಕು
 • ರಸಾಯನಿಕಗಳನ್ನು ಸಿಂಪಡಿಸುವಾಗ ಅನು ಸರಿಸಬೇಕಾದ ಕ್ರಮಗಳು

 • ಕ್ರಿಮಿನಾಶಕಗಳನ್ನು ಶಿಫಾರಸ್ಸಿನ ಪ್ರಮಾಣದಲ್ಲಿ ಮಾತ್ರ ಬಳಸುವುದು ಉತ್ತಮ., ರಸಾಯನಿಕಗಳನ್ನು ಬಳಸುವ ಸ್ಥಳದಿಂದ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ದೂರ ಉಳಿಯಬೇಕು, ಕ್ರಿಮಿನಾಶಕ ಒಂದು ದಿನದ ಬಳಕೆಗೆ ಎಷ್ಟು ಬೇಕೆಂಬುದನ್ನು ಖಚಿತಪಡಿಸಿಕೊಂಡು ಬೆರೆಸಿ ಉಪಯೋಗಿಸಬೇಕು. ಬರಿಕೈಯಿಂದ ಕ್ರಿಮಿನಾಶಕ ಬೆರೆಸಬಾರದು. ಕಟ್ಟಿಗೆಗಳನ್ನು ಬೆರೆಸಲು ಉಪಯೋಗಿಸಬೇಕು, ರಸಾಯನಿಕಗಳನ್ನು ಸಿಂಪಡಿಸುವಾಗ ಸುರಕ್ಷಾ ಉಡುಪುಗಳನ್ನು ಬಳಸುವುದು ಉತ್ತಮ, ಮೂಗಿಗೆ - ನೋಸ್ಕವರಿಂಗ್, ಕೈಗೆ - ಕೈ ಗವಸುಗಳು (ಗ್ಲೌಸ್), ತಲೆಗೆ - ಸಂಪೂರ್ಣವಾಗಿ ತಲೆ ಮುಚ್ಚುವ ಟೋಪಿ, ಕಾಲಿಗೆ - ಗಮ್ ಶೂ(ಮೊಣಕಾಲಿನವರೆಗೆ ಬರುವ ಬೂಟು), ದೇಹಕ್ಕೆ - ಉದ್ದವಾದ ಪೂರ್ಣ ತೋಳಿರುವ ಮೇಲಂಗಿ (ಮೊಣಕಾಲಿನವರೆಗಿನ), ಔಷಧ ಸಿಂಪರಣೆಯನ್ನು ಬೆಳಗಿನ ಅವಧಿ ಯಲ್ಲಿ, ಇಬ್ಬನಿ ಕರಗಿದ ನಂತರ ಮಾಡಬೇಕು, ಸಿಂಪರಣೆ ಮಾಡಿದ ನಂತರ ಕನಿಷ್ಟ ೧೨-೨೪ ಗಂಟೆಗಳ ತನಕ ತಾಕುಗಳಿಗೆ ಯಾವುದೇ ನೀರುಣಿಸಬಾರದು, ಮಳೆಯಾಗುವ ಸೂಚನೆಯಿದ್ದರೆ ಸಿಂಪರಣೆ ಯನ್ನು ಮುಂದೂಡಬೇಕು, ಒಂದು ವೇಳೆ ಮಣ್ಣಿನಲ್ಲಿ ಹುಟ್ಟಿಬರುವ ಜೀವಿಗಳಿಂದ ರೋಗ ತಗುಲಬಹುದಾಗಿದ್ದರೆ, ಮಣ್ಣಿಗೆ ಔಷಧವನ್ನು ಹಾಕುವ ಬದಲು ಬಿತ್ತನೆ ಮಾಡುವ ಬೀಜಕ್ಕೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಲೇಪನ ಮಾಡಿ ಬಿತ್ತನೆ ಮಾಡುವುದು, ಕಟಾವಿಗೆ ಹತ್ತಿರದಲ್ಲಿರುವ ಬೆಳೆಗಳಿಗೆ ರಾಸಾಯನಿಕಗಳ ಬಳಕೆ ನಿಲ್ಲಿಸಿ, ಸಸ್ಯಾಧಾರಿತ ಔಷಧಗಳನ್ನೇ ಬಳಸಬೇಕು, ಹೆಚ್ಚು ಗಾಳಿ ಇರುವ ಸಮಯದಲ್ಲಿ ಔಷಧ, ಸಿಂಪರಣೆಯನ್ನು ನಿಲ್ಲಿಸುವುದು ಸೂಕ್ತ, ಒಂದು ವೇಳೆ ಲಘುಗಾಳಿ ಬೀಸುತ್ತಿದ್ದ ಪಕ್ಷದಲ್ಲಿ ಗಾಳಿಗೆ ವಿರುದ್ದವಾಗಿ ನಿಂತು ಸಿಂಪರಣೆ ಮಾಡಬಾರದು, ಸಿಂಪರಣೆ ಮಾಡಿದ ನಂತರ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು, ತೊಟ್ಟ ವಸ್ತ್ರಗಳನ್ನು ಬದಲಾಯಿಸಬೇಕು, ಸಿಂಪರಣೆಗೆ ಬಳಸಿದ ಉಪಕರಣಗಳನ್ನು ದನಕರುಗಳು, ಮನುಷ್ಯರು ಕುಡಿಯುವ ನೀರು ಅಥವಾ ಮೀನು ಸಾಕುವ ಕೊಳಗಳಲ್ಲಿ ಸ್ವಚ್ಛ ಮಾಡಬಾರದು. ಖಾಲಿಯಾದ ಔಷಧ ಡಬ್ಬಿಗಳನ್ನು ಮಕ್ಕಳಿಗೆ ಸಿಗದಂತೆ ಸಂರಕ್ಷಿಸಿ ಇಡಬೇಕು ಅಥವಾ ಆಳವಾದ ಗುಂಡಿ ತೋಡಿ ಮುಚ್ಚಬೇಕು, ಸಿಂಪರಣೆ ನಂತರ ಅನುಸರಿಸಬೇಕಾದ ಕ್ರಮಗಳು, ಪ್ರತಿ ಸಿಂಪರಣೆ ನಂತರ ಎಲ್ಲಾ ಸುರಕ್ಷಾ ಉಡುಪುಗಳನ್ನು ತೊಳೆದು ಬಳಸುವುದು ಉತ್ತಮ, ಸಿಂಪರಣೆ ನಂತರ ಆಹಾರ ಸೇವಿಸುವಾಗ ಸಿಂಪಡಿಸಿದ ಸ್ಥಳದಿಂದ ದೂರದಲ್ಲಿ ಸ್ವಚ್ಛವಾಗಿ ಕೈಕಾಲು ತೊಳೆಯುವುದು ಸೂಕ್ತ, ರಸಾಯನಿಕ ವಸ್ತುಗಳು ಇದ್ದ ಕ್ಯಾನ್ಗಳು, ಡಬ್ಬಿಗಳು, ಪೌಚ್ಗಳನ್ನು ಖಾಲಿಯಾದ ನಂತರ ಸುರಕ್ಷಿತ ಸ್ಥಳದಲ್ಲಿ ವಿಸರ್ಜಿಸಬೇಕು ಮತ್ತು ಆ ಕ್ಯಾನ್ಗಳನ್ನು ಕುಡಿಯುವ ನೀರು ಶೇಖರಿಸಲು ಬಳಸುವುದು ಸೂಕ್ತವಲ್ಲ, ಬಳಸಿ ಉಳಿದ ರಸಾಯನಿಕ ವಸ್ತುಗಳ ಕ್ಯಾನ್ಗಳನ್ನು ಸುರಕ್ಷಿತ ಜಾಗಗಳಲ್ಲಿ ಇಡುವುದು ಸೂಕ್ತ. ಕಾರಣ ಮಕ್ಕಳು, ಜಾನುವಾರುಗಳು ತಿಳಿಯದೆ ಅವುಗಳನ್ನು ಸೇವಿಸುವ ಸಾಧ್ಯತೆಯಿರುತ್ತದೆ.
 • 14

  ಪೀಡೆನಾಶಕಗಳ ಅವೈಜ್ಞಾನಿಕ ಬಳಕೆಯು ಪರಿಸರ ಹಾಗೂ ಮನುಷ್ಯನ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟು ಮಾಡಿದೆ. ಹಾಗಾಗಿ ರಾಸಾಯನಿಕಗಳು ಫಲಕಾರಿಯಾಗಬೇಕಾದರೆ ಮೇಲ್ಕಂಡ ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕು. ವಿವಿಧ ಬೆಳೆಗಳಿಗೆ, ವಿವಿಧ ಪೀಡೆಗಳಿಗೆ ಪ್ರತ್ಯೇಕವಾದ ರಾಸಾಯನಿಕಗಳಿರುತ್ತವೆ. ಆದುದರಿಂದ ಪೀಡೆನಾಶಕಗಳನ್ನು ಆಯ್ದುಕೊಳ್ಳುವಾಗ ಬೆಳೆಗಳಿಗೆ ಬಂದಿರುವ ಪೀಡೆಗಳ ಆಧಾರದ ಮೇಲೆ ತಜ್ಞರ ಸಲಹೆ ಯೊಂದಿಗೆ ಆಯ್ದುಕೊಳ್ಳಬೇಕು ಮತ್ತು ಅವರ ಸಲಹೆಯಂತೆಯೇ ಬಳಸಬೇಕು. ಸೂಕ್ತವಾದ ಸಿಂಪರಣಾ ಸಲಕರಣೆಗಳನ್ನು ಬಳಸಬೇಕು. ಒಂದಕ್ಕಿಂತ ಹೆಚ್ಚು ರಾಸಾಯನಿಕಗಳನ್ನು ಸಿಂಪಡಿಸು ವಾಗ ರಾಸಾಯನಿಕಗಳ ಹೊಂದಾಣಿಕೆಯನ್ನು ತಿಳಿದುಕೊಂಡು ಸಿಂಪಡಿಸುವುದು. ಬೆಳೆ ಸಂರಕ್ಷಣೆಗಾಗಿ ರಾಸಾಯನಿಕಗಳಿಲ್ಲದೇ ಪರಿಣಾಮಕಾರಿಯಾಗಿರುವ ಕೃಷಿ ಪದ್ಧತಿಗಳ ಅರಿತುಕೊಳ್ಳಬೇಕು. ನೈಸರ್ಗಿಕ ಪೀಡೆನಾಶಕಗಳಾದ ಬೇವಿನ ಕಷಾಯ ಬೇವಿನ ಎಣ್ಣೆ, ಬೇವಿನ ಹಿಂಡಿ, ತುಳಸಿ ಕಷಾಯ ಎಲೆ ಬೆಳ್ಳುಳ್ಳಿ ಕಷಾಯ ಇತ್ಯಾದಿಗಳನ್ನು ಬಳಸಿ ಕೀಟ ಮತ್ತು ರೋಗಗಳನ್ನು ನಿಯಂತ್ರಿಸಲು ಸಾಧ್ಯವಾದಲ್ಲಿ ಅವುಗಳನ್ನು ಬಳಸುವುದು ಸೂಕ್ತ. ಇದರಿಂದ ಪರಿಸರವನ್ನು ಹಾಗೂ ಅಂತರ್ಜಲ ಸಂರಕ್ಷಣೆಯನ್ನು ಮಾಡಬಹುದು. ಕೃಷಿಯಲ್ಲಿ ಅಧಿಕ ಇಳುವರಿ ಮತ್ತು ಪೀಡೆಗಳನ್ನು ನಿರ್ವಹಿಸಲು ಸಮಗ್ರ ಪೀಡೆ ನಿರ್ವಹಣೆ ಅಳವಡಿಸಿಕೊಳ್ಳುವುದು ಬಹುಮುಖ್ಯ ವಾಗಿದೆ. ಅಂದರೆ ಒಂದೇ ಸಮಯದಲ್ಲಿ ಬೇರೆ ಬೇರೆ ಅಥವಾ ವಿವಿಧ ಕೃಷಿ ಪದ್ಧತಿಗಳನ್ನು ಅನುಸರಿಸುವುದು ಅಂದರೆ ಬೆಳೆ ಪರಿವರ್ತನೆ, ಮಣ್ಣಿನಲ್ಲಿ ಗೊಬ್ಬರಗಳನ್ನು ಸೇರಿಸುವುದು, ಕೀಟಗಳನ್ನು ಕೈಯಿಂದ ಆರಿಸುವುದು, ಮೂರರಿಂದ ನಾಲ್ಕು ಪದ್ಧತಿಗಳನ್ನು ಅನುಸರಿಸುವುದರಿಂದ ಒಂದು ನಿರುಪಯುಕ್ತವಾದರೂ ಇನ್ನೊಂದು ಪರಿಣಾಮಕಾರಿ ಆಗಿರುತ್ತದೆ