ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಕೊಯ್ಲಿಗೆ ಮೊದಲು ಹಣ್ಣಿಗೆ ಕವರ್ ಹಾಕಿ

ಗಜಾನನ ಗುಂಡೆವಾಡಿ
7065157693

ಹಲವಾರು ಉತ್ತಮ ಕೃಷಿ ಪದ್ಧತಿಗಳು(GAP) ಮಾನವ ನಿರ್ಮಿತ ರಾಸಾಯನಿಕಗಳ ಮೇಲೆ ಕಡಿಮೆ ಅವಲಂಬನೆ ಮತ್ತು ಹೆಚ್ಚಿನ ಗುಣಮಟ್ಟದ ಹಣ್ಣಿನ ಉತ್ಪಾದನೆಗೆ ಪ್ರಪಂಚದಲ್ಲಿ ಜನಪ್ರಿಯವಾಗುತ್ತಿವೆ. ಇಂತಹ ಪದ್ಧತಿಗಳ ನಡುವೆ, ಹಣ್ಣುಗಳನ್ನು ಕೊಯ್ಲಿಗೆ ಮೊದಲು ಬ್ಯಾಗಿಂಗ್ ಮಾಡುವುದು ಉಪಯುಕ್ತ ಮತ್ತು ಪರಿಣಾಮಕಾರಿ ವಿಧಾನವಾಗಿ ಹೊರಹೊಮ್ಮಿದೆ. ಬ್ಯಾಗಿಂಗ್ ಹಣ್ಣಿನ ಚರ್ಮದ ಬಣ್ಣವನ್ನು ಹೆಚ್ಚಿಸುವುದರ ಜೊತೆಗೆ ಹಣ್ಣಿನ ಮೇಲಿರುವ ಚುಕ್ಕೆಗಳನ್ನು ಕಡಿಮೆ ಮಾಡುತ್ತದೆ. ಹಣ್ಣಿನ ಅಭಿವೃದ್ಧಿಗೆ ಸೂಕ್ಷ್ಮ ಪರಿಸರ ಸೃಷ್ಟಿಸಲು ಮತ್ತು ಆಂತರಿಕ ಹಣ್ಣಿನ ಗುಣಮಟ್ಟವನ್ನು ಸುಧಾರಿಸಲು ಅನುಕೂಲಕರವಾಗಿದೆ. ರೋಗಬಾಧೆ, ಕೀಟ ಬಾಧೆ, ಯಾಂತ್ರಿಕ ಹಾನಿ, ಬಿಸಿಲಿನಿಂದ ಬಣ್ಣ ಮಾಸುವಿಕೆ, ಹಣ್ಣು ಸೀಳುವಿಕೆ, ಹಣ್ಣಿನ ಮೇಲೆ ಕೃಷಿ ರಾಸಾಯನಿಕಗಳ ಉಳಿಕೆಗಳು ಮತ್ತು ಪಕ್ಷಿಗಳಿಂದಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ಮಾವು, ಪೀಚ್, ಸೇಬು, ಪಿಯರ್, ದ್ರಾಕ್ಷಿಗಳಿಗೆ ಸೂಕ್ತ. ಹಲವಾರು ಉತ್ತಮ ಕೃಷಿ ಪದ್ಧತಿಗಳು(ಉಂP)ಜಗತ್ತಿನ ಉದ್ದಕ್ಕೂ ಜನಪ್ರಿಯವಾಗುತ್ತಿವೆ. ಇಂತಹ ಕ್ರಮಗಳಲ್ಲಿ ಇದೊಂದು ಉತ್ತಮ ವಿಧಾನ.

ಪೂರ್ವ ಕೊಯ್ಲು ಹಣ್ಣು ಬ್ಯಾಗಿಂಗ್ನಿಂದಾಗುವ ಉಪಯೋಗಗಳು

  • ಹಣ್ಣಿನ ಗಾತ್ರ ಮತ್ತು ತೂಕ ಹೆಚ್ಚಿಸುತ್ತದೆ: ಮಾವಿನ ಹಣ್ಣಿನಲ್ಲಿ ಎರಡು ಪದರ ಕಾಗದ ಚೀಲಗಳನ್ನು ೫೨ ದಿನಗಳವರೆಗೆ ಅಳವಡಿಸುವುದರಿಂದ ಹಣ್ಣಿನ ಗಾತ್ರ ಹೆಚ್ಚಿಸುತ್ತದೆ.
  • ಮಾಗುವಿಕೆ: ಬಾಳೆ ಹಣ್ಣಿನಲ್ಲಿ ೧೨ ದಿನಗಳ ಪೂರ್ವ ಕೊಯ್ಲು ಪಾಲಿಥೀನ್ ಚೀಲಗಳ ಬಳಕೆ ಮಾಡುವುದರಿಂದ ಹಣ್ಣು ಬೇಗನೆ ಮಾಗುತ್ತವೆ. ಅದೇ ರೀತಿ ಲೀಚ್ಚಿ ಹಣ್ಣು ಬ್ಯಾಗಿಂಗ್ ಮಾಡುವುದರಿಂದ ಅದರ ವ್ಯಾಪಾರದ ಅವಧಿಯನ್ನು ಹೆಚ್ಚಿಸಬಹುದು.

    ಹಣ್ಣು ಪಕ್ವಗೊಳಿಸುವಿಕೆ; ದ್ರಾಕ್ಷಿಯಲ್ಲಿ ಸುಗ್ಗಿ ಪೂರ್ವ ಹಣ್ಣು ಬ್ಯಾಗಿಂಗ್ ಮಾಡುವುದರಿಂದ ಬೆಳೆಯ ಅವಧಿಯನ್ನು ಹೆಚ್ಚಿಸುತ್ತದೆ.

    ಕೀಟ ಬಾಧೆ ನಿರ್ವಹಣೆ; ಮಾವಿನಲ್ಲಿ ಹಣ್ಣು ನೊಣದ ಬಾಧೆ, ದಾಳಿಂಬೆಯಲ್ಲಿ ಆನರ್ ಬಟರ್ಫ್ಲೈ ಬಾಧೆ, ಟೊಮ್ಯಾಟೋ ಕಾಯಿ ಕೊರಕ ಬಾಧೆ, ಬೆಂಡಿ, ಹಾಗಲಕಾಯಿ, ಸೌತೆಕಾಯಿಯಲ್ಲಿ ಹಣ್ಣು ನೊಣದ ತೊಂದರೆ ನಿಯಂತ್ರಿಸಲು ಉತ್ತಮ. ಹಲವು ಕೀಟಗಳು ಹಣ್ಣಿನಲ್ಲಿ ಮೊಟ್ಟೆಯಿಟ್ಟು ಆಮೇಲೆ ಹಣ್ಣಿನ ಒಳಗಡೆ ಮೇಯಲು ಪ್ರಾರಂಭಿಸುತ್ತವೆ. ಇದರಿಂದ ಹಣ್ಣು ಸಂಪೂರ್ಣ ನಾಶವಾಗುತ್ತದೆ. ಇದಕ್ಕಾಗಿ ಪೂರ್ವ ಕೊಯ್ಲು ಹಣ್ಣು ಬ್ಯಾಗಿಂಗ್ ಮಾಡುವುದರಿಂದ ಕೀಟ ಮೊಟ್ಟೆಯಿಡುವುದನ್ನು ತಡೆಯಬಹುದು ಮತ್ತು ಇದರಿಂದ ಬೆಳೆ ಹಾನಿಯನ್ನು ತಡೆಯಬಹುದು.