ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ನೀವೇ ಪತ್ತೆ ಮಾಡಿ

ಹರೀಶ್, ಬಿ.ಎಸ್
೯೪೮೦೫೫೭೬೩೪
  • ಎರ್ಗಾಟ್ ಶಿಲೀಂಧ್ರ ಮಿಶ್ರಿತ ಗೋಧಿ: ನೂರು ಮಿಲಿ ನೀರಿಗೆ ೨೦ ಗ್ರಾಂ ಉಪ್ಪು ಬೆರೆಸಿ ಕರಗಿಸಿರುವ ಗಾಜಿನ ಲೋಟಕ್ಕೆ ಮಾದರಿ ಗೋದಿ ಹಾಕಿ. ಎರ್ಗಾಟ್ ಶಿಲೀಂಧ್ರ ಮಿಶ್ರಿತವಾಗಿದ್ದಲ್ಲಿ ಅವು ನೀರಿನಲ್ಲಿ ತೇಲುತ್ತವೆ. ಗೋದಿ ಉತ್ತಮ ಗುಣಮಟ್ಟದ್ದಾಗಿದ್ದರೆ ತೇಲದೆ ತಳ ಮುಟ್ಟುತ್ತದೆ
  • ಒಟ್ಟು ಬೆರೆಸಿದ ಗೋಧಿ ಹಿಟ್ಟು: ಪಾರದರ್ಶಕ ಗಾಜಿನ ಲೋಟದಲ್ಲಿ ನೀರು ತುಂಬಿ, ಒಂದು ಚಮಚೆ ಮಾದರಿ ಹಿಟ್ಟನ್ನು ಹಾಕಿ. ಅದು ಶುದ್ಧವಾಗಿದ್ದಲ್ಲಿ ನೀರಿನ ಮೇಲ್ಮೈನಲ್ಲಿ ಯಾವುದೇ ವೊಟ್ಟು ತೇಲುವುದು ಕಾಣಿಸದು. ಒಟ್ಟು ಬೆರೆಸಿದ್ದಲ್ಲಿ ಅದು ಖಂಡಿತ ತೇಲುವುದು ಗೋಚರಿಸುತ್ತದೆ
  • ಬಣ್ಣ ಲೇಪಿತ ಆಹಾರ ದಾನ್ಯಗಳು: ಮಾದರಿ ಆಹಾರ ಧಾನ್ಯವನ್ನು ನೀರಿನಲ್ಲಿ ತೊಳೆದಾಗ ಅವು ಶುದ್ಧವಾಗಿದ್ದಲ್ಲಿ ಯಾವುದೇ ಬಣ್ಣ ಬರುವುದಿಲ್ಲ. ಕೃತಕ ಬಣ್ಣ ಲೇಪಿಸಿದ್ದಲ್ಲಿ ತೊಳೆದ ನೀರು ಬಣ್ಣದಿಂದ ಕೂಡಿರುವುದು ತಿಳಿಯುವುದು
  • ಕಬ್ಬಿಣದ ಚೂರು ಬೆರೆಸಿದ ಮೈದಾ/ರವೆ: ಮಾದರಿಯ ಮೇಲೆ ಅಯಸ್ಕಾಂತ ಓಡಾಡಿಸಿದಾಗ, ಕಬ್ಬಿಣದ ಚೂರುಗಳಿದ್ದಲ್ಲಿ ಸುಲಭವಾಗಿ ಅದಕ್ಕೆ ಅಂಟಿಕೊಳ್ಳುತ್ತವೆ
  • ಮ್ಯಾಲಕೈಟ್ ಹಸಿರು ಬಣ್ಣ ಲೇಪಿತ ಹಸಿರು ತರಕಾರಿಗಳು: ನೀರಿನಲ್ಲಿ ಅದ್ದಿದ ಹತ್ತಿಯುಂಡೆ ತೆಗೆದುಕೊಂಡು ಮಾದರಿ ತರಕಾರಿಯ ಮೇಲ್ಮೈ ಉಜ್ಜಿದಾಗ ಹತ್ತಿ ಹಸಿರಾದರೆ ಅದು ಖಂಡಿತ ಕೃತಕ ಬಣ್ಣ ಲೇಪಿತ ತರಕಾರಿಯೇ
  • ಕೃತಕ ಬಣ್ಣ ಲೇಪಿಸಿದ ಬಟಾಣಿ: ನೀರು ತುಂಬಿದ ಪಾರದರ್ಶಕ ಗಾಜಿನ ಲೋಟಕ್ಕೆ ಮಾದರಿ ಬಟಾಣಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಅರ್ಧ ಗಂಟೆಯ ನಂತರ ನೋಡಿದಾಗ ನೀರು ಬಣ್ಣದ್ದಾಗಿದ್ದರೆ ಖಂಡಿತ ಅದಕ್ಕೆ ಕೃತಕ ಬಣ್ಣ ಹಾಕಲಾಗಿರುತ್ತದೆ
  • ಮೇಣ ಲೇಪಿತ ಸೇಬುಹಣ್ಣು: ಚಾಕುವಿನಿಂದ ಸೇಬಿನ ಮೇಲ್ಮ್ಮೈ ಕೆರೆದಾಗ ಮೇಣ ಬರುವುದು ತಿಳಿಯುತ್ತದೆ
  • ಯೂರಿಯಾ ಬೆರೆಸಿದ ಸಕ್ಕರೆ: ಮಾದರಿ ಸಕ್ಕರೆಯನ್ನು ಅಂಗೈನಲ್ಲಿ ಉಜ್ಜಿದಾಗ ಅಥವಾ ನೀರಿನಲ್ಲಿ ಕರಗಿಸಿದಾಗ ಅಮೋನಿಯಾ ವಾಸನೆ ಬರುವುದು. ಶುದ್ಧವಾದ ಸಕ್ಕರೆ ವಾಸನೆರಹಿತವಾಗಿರುತ್ತದ
  •