ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ನೀವೇ ಪತ್ತೆ ಮಾಡಿ

ಹರೀಶ್, ಬಿ.ಎಸ್
೯೪೮೦೫೫೭೬೩೪
  • ಬಿಳಿ ಪುಡಿ ಬೆರೆಸಿದ ಅಯೋಡೈಜ್ಡ್ ಉಪ್ಪು: ಮಾದರಿ ಉಪ್ಪನ್ನು ನೀರಿನಲ್ಲಿ ಕರಗಿಸಿದಾಗ ಅವಶೇಷ ಉಳಿಯದೆ ಸಂಪೂರ್ಣ ಕರಗಿದರೆ ಅದು ಶುದ್ಧ. ನೀರ ಬಣ್ಣ ಬಿಳಿಯಾದರೆ ಅಥವಾ ತಳದಲ್ಲಿ ಶೇಷ ಉಳಿದರೆ ಅದು ಕಲಬೆರಕೆ
  • ಅಯೋಡೈಜ್ಡ್ ಉಪ್ಪಿಗೆ ಸಾಮಾನ್ಯ ಉಪ್ಪು ಬೆರೆಸಿರುವುದು: ಅರ್ಧಕ್ಕೆ ಕತ್ತರಿಸಿರುವ ಆಲೂಗೆಡ್ಡೆ ಹೋಳಿನ ಮೇಲೆ ಮಾದರಿ ಉಪ್ಪನ್ನು ಹಾಕಿ ಒಂದೆರಡು ನಿಮಿಷ ಬಿಡಿ. ಅದು ಅಯೋಡೈಜ್ಡ್ ಉಪ್ಪಾಗಿದ್ದಲ್ಲಿ ಆಲೂಗೆಡ್ಡೆಯ ಕತ್ತರಿಸಿದ ಭಾಗ ನೀಲಿ ಬಣ್ಣಕ್ಕೆ ತಿರುಗುವುದು. ಸಾಮಾನ್ಯ ಉಪ್ಪಾಗಿದ್ದಲ್ಲಿ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗದು
  • ಎರೆಮಣ್ಣು ಬೆರೆಸಿದ ಕಾಫಿ ಪೌಡರ್: ನೀರು ತುಂಬಿದ ಪಾರದರ್ಶಕ ಗಾಜಿನ ಲೋಟದಲ್ಲಿ ಅರ್ಧ ಚಮಚೆ ಮಾದರಿ ಕಾಫಿ ಪೌಡರ್ ಹಾಕಿ. ಒಂದು ನಿಮಿಷ ಕಲಕಿ, ಐದು ನಿಮಿಷ ಬಿಡಿ. ಲೋಟದ ತಳಭಾಗದಲ್ಲಿ ಯಾವುದೇ ಘನ ಪದಾರ್ಥ ಕಾಣಿಸದಿದ್ದಲ್ಲಿ ಅದು ಶುದ್ಧ ಕಾಫಿ ಪೌಡರ್. ಒಂದು ವೇಳೆ ಎರೆಮಣ್ಣು ಬೆರೆಸಿದ್ದಲ್ಲಿ ಅದರ ಕಣಗಳು ತಳದಲ್ಲಿ ಕಾಣಿಸುತ್ತವೆ
  • ಕೋಲ್ ಟಾರ್ ಬೆರೆಸಿರುವ ಚಹಾ ಪೌಡರ್: ಫಿಲ್ಟರ್ ಪೇಪರಿನ ಮೇಲೆ ಮಾದರಿ ಚಹಾಪುಡಿ ಹಾಕಿ, ನೀರನ್ನು ಚಿಮುಕಿಸಿ. ಶುದ್ಧವಾಗಿದ್ದಲ್ಲಿ ಅದರ ಗುರುತು ಫಿಲ್ಟರ್ ಪೇಪರಿನ ಮೇಲೆ ಕಾಣಿಸದು. ಕೋಲ್ ಟಾರ್ ಬೆರೆಸಿದ್ದಲ್ಲಿ ಕೂಡಲೇ ಅದರ ಬಣ್ಣ ಫಿಲ್ಟರ್ ಪೇಪರಿಗೆ ಹತ್ತುವುದು
  • ಕಬ್ಬಿಣದ ಚೂರು ಬೆರೆಸಿದ ಚಹಾಪುಡಿ: ಅಯಸ್ಕಾಂತವನ್ನು ಮಾದರಿ ಚಹಾಪುಡಿಯ ಮೇಲೆ ಆಡಿಸಿದಾಗ, ಅದರಲ್ಲಿ ಕಬ್ಬಿಣದ ಚೂರುಗಳಿದ್ದಲ್ಲಿ ಕೂಡಲೇ ಅವು ಅಯಸ್ಕಾಂತಕ್ಕೆ ಅಂಟಿಕೊಳ್ಳುವುವು
  •